ಆಳಂದ: ಯುವ ವಕೀಲರಲ್ಲಿನ ಓದುವ ಮನೋವೃತ್ತಿ ಕಡಿಮೆಯಾಗುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧಿಧೀಶ ಜಿ.ಆರ್. ಶೆಟ್ಟರ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ನ್ಯಾಯಾವಾದಿಗಳ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಮೂರು ದಿನಗಳ ವಕೀಲರ ಕಾನೂನು ಕಾಯಾರ್ಗರ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ವಕೀಲ ವೃತ್ತಿಗೆ ಬಂದರೆ ಸಾಲದು, ವೃತ್ತಿ ಯಶಸ್ವಿಯಾಗಿ ಮತ್ತು ಸಮರ್ಥವಾಗಿ ನಿಭಾಯಿಸಲು ಸಂಬಂಧ ಪಟ್ಟ ವಿಷಯಗಳನ್ನು ನಿತ್ಯ ಓದುವ ಹವಾಸ್ಯ ರೂಢಿಸಿಕೊಳ್ಳಬೇಕು. ಇದರಿಂದ ಕಕ್ಷಿದಾರರಿಗೆ ಮತ್ತು ವಕೀಲರಿಗೂ ಅನುಕೂಲವಾಗುತ್ತದೆ, ನೇರವಾಗಿ ಕೋರ್ಟ್‌ಗೆ ಬಂದು ಹಿರಿಯ ವಕೀಲರ ಮೇಲೆ ಅವಲಂಬಿತರಾಗಿ ವಾದ, ಪ್ರತಿವಾದಕ್ಕೆ ನಿಲ್ಲುವುದಕ್ಕಿಂತ ಕಠಿಣ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಿದರೆ ಅದು ಸರಳ ಜೀವನ ಮತ್ತು ಉನ್ನತ ಸ್ಥಾನಕ್ಕೆ ಕೊಂಡೊಯುತ್ತದೆ ಎಂದರು.
ಸಮಾಜದ ಎಲ್ಲ ವಿದಧ ಪ್ರಕರಣಗಳನ್ನು ನಡೆಸಲು ಓದು ಅತ್ಯವಶಕವಾಗಿದೆ. ಕಾನೂನಿನ ಜ್ಞಾನ ಹೆಚ್ಚಿನ ತಿರುಳು ಪಡೆಯುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಕಾರ್ಯಾಗಾರ ನಡೆಸುವ ಮೂಲಕ ಹೆಚ್ಚಿನ ಜ್ಞಾನ ಅನುಭವ ಪಡೆಯಲು ಮುಂದಾಗಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಸಲಹೆ ನೀಡಿದರು. ಕಿರಿಯ ಶ್ರೇಣಿಯ ನ್ಯಾಯಾಧೀಶ ಮುಜಾಫರ್ ಮಂಜರಿ ಮಾತನಾಡಿ, ಕಾನೂನು ಎಷ್ಟು ಓದಿದರು ಓದುವುದು ಇನ್ನೂ ಬಹಳಷ್ಟಿದೆ.
ವೃತ್ತಿಯ ಪರಿಪೂರ್ಣತೆ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು. ಕರ್ನಾಟಕ ಉಚ್ಚನ್ಯಾಯಾಲಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ವಿ. ನಾಡಗೌಡ ಮಾತನಾಡಿ, ಭಾರತ ಸಂವಿಧಾನ ಎಲ್ಲ ಕಾನೂನುಗಳ ತಾಯಿ ಆಗಿದೆ. ವಕೀಲರುಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಪರಿಷತ್ತಿನ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಎಸ್.ಎಸ್.ಕುಮ್ಮಣ್ಣಾ, ಕೆ.ಎ.ಕಲಬುರಗಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ವಕೀಲ ಸಾಹೇಬಗೌಡ ಪಾಟೀಲ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಐ.ಶಿರೋಳೆ, ಬಿ.ಎ. ದೇಶಪಾಂಡೆ, ಶಿವಶಂಕರ ಮುನೋಳಿ, ದೇವಾನಂದ ಹೋದಲೂರ, ಎ.ಸಿ.ತೋಳೆ, ಬಿ.ಜಿ.ಬೀಳಗಿ, ಸಂದೀಪ ಚಿಂಚೋರೆ, ಗೋದಾವರಿ ಪಾಟೀಲ, ಕಮಲ ರಾಠೊಡ, ದೀಪಾರಾಣಿ ಕುಲಕರ್ಣಿ, ಮಹಾದೇವ ಹತ್ತಿ ಹಾಜರಿದ್ದರು.