Advertisement

ತೆರಿಗೆ ಜಾಲ ವಿಸ್ತರಣೆಗೆ ಗಮನ ಹರಿಸಿ: ಪ್ರಧಾನಿ

11:10 AM May 03, 2017 | Team Udayavani |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಕ್ಷಿಪ್ರಗತಿಯ ಹೆಜ್ಜೆ ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಾಳಧನಕ್ಕೆ ಬ್ರೇಕ್‌ ಹಾಕುವುದು ಹಾಗೂ ತೆರಿಗೆ ಸಂಬಂಧಿತ ವಿಚಾರಗಳ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತೆರಿಗೆ ಪಾವತಿ ಮಾಡುವ ಜನರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ, ಇ- ಅಸೆಸ್‌ಮೆಂಟ್‌ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಾರಿ ಮಾಡುವ ಬಗ್ಗೆಯೂ ಪ್ರಧಾನಿ ಒತ್ತು ನೀಡಿದ್ದಾರೆ. 

Advertisement

ವಿತ್ತ ಸಚಿವ ಅರುಣ್‌ ಜೇಟ್ಲಿ ಹಾಗೂ ಸಚಿವಾಲಯದ ಆದಾಯ ಕಾರ್ಯದರ್ಶಿ ಹಸು¾ಖ್‌ ಆದಿಯಾ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. 500, 1000 ರೂ. ಮುಖಬೆಲೆಯ ನೋಟುಗಳ ನಿಷೇಧ ಬಳಿಕ ಈವರೆಗೆ ಆಗಿರುವ ತೆರಿಗೆ ಸಂಗ್ರಹ ಮತ್ತು ತೆರಿಗೆ ಕ್ಷಮಾಧಾನ ಯೋಜನೆಯಡಿಯಲ್ಲಿ ಲಾಭ ಪಡೆದುಕೊಂಡಿರುವ ಅಂಶಗಳ ಬಗ್ಗೆ ಹಾಗೂ ಕಪ್ಪು ಹಣಕ್ಕೆ ಬ್ರೇಕ್‌ ಹಾಕುವ ತಮ್ಮ ಪ್ರಯತ್ನದ ಅನುಷ್ಠಾನಧಿಗಳಿಗೆ ಸಂಬಂಧಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕೂಲಂಕಶ ಅಂಶ ಗಳನ್ನು ಹೊಂದಿರುವ ವರದಿಯನ್ನು ತರಿಸಿಕೊಂಡು ಚರ್ಚಿಸಿರುವ ಪ್ರಧಾನಿ ಮೋದಿ, ಈ ಬಗ್ಗೆ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ರಾಷ್ಟ್ರಾದ್ಯಂತ ನಡೆದ ಐಟಿ ದಾಳಿ ಹಾಗೂ ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next