ಮಹಾಲಿಂಗಪುರ: ತೇರದಾಳ ಶಾಸಕ ಸಿದ್ದು ಸವದಿ ಮಹಾಲಿಂಗಪುರ ಸರಕಾರಿ ಪ್ರೌಢಶಾಲೆಯ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ಸರಕಾರಿ ಪ್ರೌಢಶಾಲೆಗೆ ಅವಶ್ಯವಿರುವ ಅಗತ್ಯ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಸಕ ಸಿದ್ದು ಸವದಿಯವರಿಂದ ಸಮಸ್ಯೆ ಆಲಿಸಿ ಮಾತನಾಡಿದ ಅವರು, ವಾರದೊಳಗೆ ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಶಾಲೆಗೆ ಕಾಂಪೌಂಡ್, ಹೆಚ್ಚುವರಿ ಕೊಠಡಿ, ಶೌಚಾಲಯ, ಸುಸಜ್ಜಿತ ಬಿಸಿಯೂಟದ ಕೊಠಡಿ ಸೇರಿದಂತೆ ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಶಾಲೆಯಲ್ಲಿ ಒಟ್ಟು 600ಕ್ಕೂ ಅಧಿ ಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಗೆ ಸುಮಾರು 10 ಕೊಠಡಿಗಳ ಕೊರತೆ ಹಾಗೂ ಶಿಕ್ಷಕರ ಕೊರತೆ ಇದ್ದು, ಮಳೆಗಾಲದಲ್ಲಿ ಶಾಲಾ ಆವರಣವು ಜವಳು ನೀರಿನಿಂದ ತುಂಬಿ ಮಕ್ಕಳ ಆಟಕ್ಕೆ ತೊಂದರೆಯಾಗುತ್ತಿದೆ. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಕಾರಣ ಖಾಸಗಿ ವಾಹನಗಳ ನಿಲುಗಡೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ತಾಣವಾಗುತ್ತಿದೆ. ಜತೆಗೆ ಚರಂಡಿಯ ಪಕ್ಕದಲ್ಲೇ ಇರುವ ಶೌಚಾಲಯ ಕಟ್ಟಡವನ್ನೇ ಬಿಸಿಯೂಟದ ಕೊಠಡಿಯಾಗಿ ಮಾರ್ಪಡಿಸಿದ ಕಾರಣ, ಅಲ್ಲಿ ಗಬ್ಬೆದ್ದು ವಾಸನೆ ಬರುತ್ತಿರುವ ಕಾರಣ ಮಕ್ಕಳು ಬಿಸಿಯೂಟ ಸವಿಯಲು ಹಿಂಜರಿಯುತ್ತಿರುವ ಕಾರಣ, ಸಚಿವರು ಸುಸಜ್ಜಿತ ಬಿಸಿಯೂಟ ಕೊಠಡಿ ಮತ್ತು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಬೇಕು ಎಂದರು.
ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಚಂದ್ರವ್ವ ಗೌಡರ ಸಚಿವರಿಗೆ ಮನವಿ ಸಲ್ಲಿಸಿ, ಅಮಾನತುಗೊಂಡ ಶಾಲೆಯ ಹಿಂದಿನ ಮುಖ್ಯಶಿಕ್ಷಕ ಎಸ್.ವೈ. ರಾಠೊಡ ಅವರು ಶಾಲೆಯ ಅನುದಾನವನ್ನು ದುರ್ಬಳಕೆ ಮತ್ತು ಮಕ್ಕಳಿಂದ ಹೆಚ್ಚಿನ ಹಣ ವಸೂಲಿ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಪ್ರಕರಣವನ್ನು ಶಿಕ್ಷಣ ಇಲಾಖೆಯ ಅಧಿ ಕಾರಿಗಳು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅಮಾನತುಗೊಂಡ ಎಸ್.ವೈ.ರಾಠೊಡ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಲು ಒತ್ತಾಯಿಸಿದರು.
ಇದನ್ನೂ ಓದಿ:ದೆಹಲಿಯ ಖಾನ್ ಮಾರ್ಕೇಟ್ ಬಳಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ದೇಶದ್ರೋಹಿಗಳು
ಶಿಕ್ಷಣ ಇಲಾಖೆಯ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಡಿಡಿಪಿಐ ಎಸ್.ಎಸ್.ಬಿರಾದರ, ವಿಷಯ ಪರಿವೀಕ್ಷಕ ಬಾಳಿಕಾಯಿ, ಶಿಕ್ಷಣ ಸಂಯೋಜಕ ಎಸ್.ಎಸ್.ತಾರಾಪುರಮಠ, ಸಿಆರ್‌ಪಿ ಎಸ್. ಎನ್.ಬ್ಯಾಳಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಸನಗೌಡ ಪಾಟೀಲ, ಪ್ರಕಾಶ ಅರಳಿಕಟ್ಟಿ, ಅಶೋಕಗೌಡ ಪಾಟೀಲ, ಜಿ.ಎಸ್.ಗೊಂಬಿ, ಈರಪ್ಪ ದಿನ್ನಮನಿ, ಶಂಕರಗೌಡ ಪಾಟೀಲ, ಶಿವಬಸು ಗೌಂಡಿ, ಪ್ರಶಾಂತ ಮುಕ್ಕೆನ್ನವರ, ಪುರಸಭೆ ಮುಖ್ಯಾ ಧಿಕಾರಿಎಚ್.ಎಸ್.ಚಿತ್ತರಗಿ, ಸದಸ್ಯರಾದ ರವಿ ಜವಳಗಿ, ಬಸವರಾಜ ಹಿಟ್ಟಿನಮಠ, ಶೇಖರ ಅಂಗಡಿ, ಶಾಲೆಯ ಮುಖ್ಯಶಿಕ್ಷಕಿ ಎನ್.ಎಂ. ಚೌರ ಇದ್ದರು.