Advertisement

ಪ್ರಯತ್ನಶೀಲರಿಗೆ ಮೋಕ್ಷ ಪ್ರಾಪ್ತಿ: ಪ್ರಣವಾನಂದ ಶ್ರೀ

01:36 PM Jan 29, 2018 | Team Udayavani |

ಹುಮನಾಬಾದ: ಜೀವನದಲ್ಲಿ ಮೋಕ್ಷ ಎನ್ನುವುದು ಪ್ರಾರಬ್ಧಕರ್ಮವಲ್ಲ. ಅದು ದೊರೆಯಲು ಪ್ರಯತ್ನಶೀಲರಾಗಿರಬೇಕು ಎಂದು ಮುಚಳಂಬಿಯ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಸ್ವಾಮಿಗಳು ನುಡಿದರು.

Advertisement

ಶಕ್ಕರಗಂಜ ವಾಡಿಯಲ್ಲಿ ರವಿವಾರ ನಡೆದ ಶ್ರೀ ಶಿವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆಯ ರಜತ ಮಹೋತ್ಸವದ ಎರಡನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋಕ್ಷ ಪ್ರಯತ್ನದ ಕಾರ್ಯವಾಗಿದೆ. ಮೋಕ್ಷವೆನ್ನುವುದ ಪ್ರಾರಬ್ಧ ಕರ್ಮವಲ್ಲ. ಶ್ರೋತ್ರೀಯ ಬ್ರಹ್ಮಮೂರ್ತಿಗಳಾದ ಸದ್ಗುರುವಿನ ವಚನವನ್ನಾಲಿಸಿ ಪ್ರಯತ್ನಶೀಲರಾದಲ್ಲಿ ಮಾತ್ರ ಮೋಕ್ಷ ಪ್ರಾಪ್ತವಾಗುವುದು ಎಂದು ಹೇಳಿದರು.

ಮಹಾಲಿಂಗಪುರದ ಶ್ರೀ ಸಹಜಾನಂದ ಸ್ವಾಮಿಗಳು ಮಾತನಾಡಿ, ಮುಕ್ತಿ ಪ್ರಾಪ್ತ ಮಾಡಿಕೊಳ್ಳಲು ತ್ರಿವಿಧ ವಿಧಿಗಳನ್ನು ಪಾಲಿಸಬೇಕು. ಕೆಲವರು ನಮ್ಮ ಹಣೆ ಬರಹದಲ್ಲಿದ್ದರೆ ನಮಗೆ ಮೋಕ್ಷ ಸಿಗಲಿ ಎನ್ನುವರು. ಆದರೆ ಇದು ಎಲ್ಲವನ್ನೂ ಅರಿತ ಸದ್ಗುರುವಿನ ಮಂತ್ರದಂಡದ ವಿಧಿಗಳನ್ನು ಪಾಲಿಸುವುದಿರಿಂದ ಮಾತ್ರ ಪ್ರಾಪ್ತವಾಗುವುದು ಎಂದು ಹೇಳಿದರು.

ಕಲಬುರಗಿಯ ಮಾತೋ ಶ್ರೀ ಲಕ್ಷ್ಮೀದೇವಿ ಮಾತನಾಡಿ, ಸಂಸಾರದಲ್ಲಿ ಎಲ್ಲರೂ ಹೋರಾಡುವುದು ಸುಖಕ್ಕಾಗಿ. ಆದರೆ
ಮನುಷ್ಯನಿಗೆ ಬೇಕಾಗಿರುವುದು ಶಾಶ್ವತ ಸುಖ. ದುಃಖ ಬಂದು ಕೆಡಿಸಲಾಗದಂತಹ ಸುಖಕ್ಕಾಗಿ ಮನುಷ್ಯ ಹಂಬಲಿಸಬೇಕು. ಇದಕ್ಕೆ ಸದ್ಗುರುವಿನ ಸಾನ್ನಿಧ್ಯ ಅತ್ಯವಶ್ಯವಾಗಿದೆ ಎಂದು ಹೇಳಿದರು. 

ಬೆಳಗಾವಿಯ ಶ್ರೀ ನಿಜುಗುಣಾಂದ ಮಹಾಸ್ವಾಮಿಗಳು ಮಾತನಾಡಿ, ಸದ್ಗುರು ಶಿವಾನಂದ ಮಹಾಸ್ವಾಮಿಗಳು ಅವತಾರ ಪೂರ್ಣಮಾಡಿ 25 ಸಂವತ್ಸರಗಳು ಗತಿಸಿವೆ. ಶಕ್ಕರಗಂಜ ವಾಡಿಯ ಸದ್ಭಕ್ತಾದಿಗಳು ಪ್ರತಿ ತಿಂಗಳು ಅಷ್ಟಮಿಯಂದು ಆರಾಧನೆ ಮಾಡುತ್ತಾ ವರ್ಷಕ್ಕೊಮ್ಮೆ ವಾರ್ಷಿಕ ಪುಣ್ಯಾರಾಧನೆ ಮಾಡುವುದರೊಂದಿಗೆ ಮೋಕ್ಷಗಳ ಪರಮಧಾಮವಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಬೀದರ ಚಿದಂಬರಾಶ್ರಮದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಶಿವಾನಂದ ಕೈಲಾಸ ಆಶ್ರಮ ಬ್ಯಾಲಹಳ್ಳಿಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಬೀದರ ಗುರುದೇವಾಶ್ರಮದ ಮಾತೆ ಸಿದ್ದೇಶ್ವರಿತಾಯಿ, ಚಳಕಾಪುರದ ಶ್ರೀ ಶಂಕರಲಿಂಗ ಮಹಾಸ್ವಾಮಿಗಳು, ಶಕ್ಕರಂಗಜವಾಡಿಯ ಶಿವಾನಂದ ಅದ್ವೈತಾಶ್ರಮದ ಶ್ರೀಗಳು, ಬೆಳ್ಳೂರಿನ ಮಾತೋಶ್ರೀ ಅಮೃತಾನಂದಮಯಿ ಉಪಸ್ಥಿತರಿದ್ದರು. ಶಕ್ಕರಗಂಜ ವಾಡಿಯ ರಮೇಶ ಶ್ರೀಮಂಡಲ, ಗಣೇಶಾನಂದ ಮಹಾರಾಜರು ಇದ್ದರು. ಇದೇ ವೇಳೆ ಬೆಳಗಾವಿಯ ಮಲ್ಲನಗೌಡ ಶಿವಲಿಂಗಪ್ಪ ಸೇಗುಣಿಸಿ ತಂಡದವರಿಂದ ಗುರುಸ್ತುತಿ ಸಂಗೀತ ಸೇವೆ ಜರುಗಿತು. 

Advertisement

Udayavani is now on Telegram. Click here to join our channel and stay updated with the latest news.

Next