Advertisement

ಬದಲಾದ ಧರ್ಮಧ್ವನಿ; ಲಿಂಗಾಯತ ವೀರಶೈವ ಹೆಸರಿನಡಿ ಒಂದಾಗುವ ಯತ್ನ

06:00 AM Jun 11, 2018 | Team Udayavani |

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ಪ್ರತ್ಯೇಕ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿದ್ದು, ಇದರ ಪರಿಣಾಮ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಲಿಂಗಾಯತ ವೀರಶೈವರು ಒಂದಾಗಲು ಮುಂದಾಗಿದ್ದಾರೆ.

Advertisement

ಆದರೆ, ಈ ಹಿಂದೆ ಇದ್ದಂತೆ ವೀರಶೈವ ಮಹಾಸಭಾ ಬದಲು ಲಿಂಗಾಯತ ವೀರಶೈವ ಎಂಬ ಹೆಸರಿನಲ್ಲಿ ಒಂದಾಗಬೇಕು. ಲಿಂಗಾಯತ ಪ್ರಮುಖವಾಗಿದ್ದು, ವೀರಶೈವ ಅದರ ಒಂದು ಭಾಗ ಎಂಬ ವಾದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದವರ ಬೇಡಿಕೆ. ಹೀಗಾಗಿ ಮತ್ತೆ ಒಂದಾಗುವ ಪ್ರಕ್ರಿಯೆಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿದ್ದ ವೀರಶೈವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದರ ಮಧ್ಯೆಯೇ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್‌ ಅವರು ವೀರಶೈವ ಮಹಾಸಭಾದ ಪ್ರಮುಖರಾಗಿರುವ ಶಾಮನೂರು ಶಿವಶಂಕರಪ್ಪ ವಿರುದ್ಧ ಕಿಡಿ ಕಾರಿರುವುದು ಕೆಲವು ವರ್ಗದವರಿಗೆ ಬೇಸರ ತರಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ಕಳೆದ ವರ್ಷಾಂತ್ಯದಲ್ಲಿ ಲಿಂಗಾಯತ ಮತ್ತು ಬಸವ ತತ್ವ ಪಾಲಿಸುವ ವೀರಶೈವರನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಇದಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಲಿಂಗಾಯತರಿಗೆ ಆಚರಣೆರಗಳ ಹಿನ್ನಲೆಯಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ದೇಶದಲ್ಲಿ ಬೇರೆ ಬೇರೆ ಸಮುದಾಯಗಳು ಇದೇ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದೆ.

ಇದರ ಮಧ್ಯೆ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಲಿಂಗಾಯತ ಮತ್ತು ವೀರಶೈವ ಎರಡೂ ಬಣಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದೇ ಇರುವುದು ಬಣಗಳು ಪ್ರತ್ಯೇಕವಾಗಿದ್ದರಿಂದ ಎಂಬ ಚರ್ಚೆ ಆರಂಭವಾಗಿದೆ. ಅಲ್ಲದೆ, ಎರಡೂ ಬಣಗಳು ಒಂದಾದರೆ ಮಾತ್ರ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿ ಬರುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಬಣಗಳ ಮುಖಂಡರು ಒಂದಾಗುವ ಕುರಿತು ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

ಈ ಬೆಳವಣಿಗೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್‌, ವೀರಶೈವ ಮಹಾಸಭೆ ತನ್ನ ನಿಲುವು ಬದಲಿಸಿದರೆ ನಾವು ಒಂದಾಗಲು ಸಿದ್ಧರಿದ್ದೇವೆ. ವೀರಶೈವ ಮಹಾಸಭೆ ಹೆಸರಿನ ಜತೆಗೆ ಲಿಂಗಾಯತ ವೀರಶೈವ ಮಹಾಸಭೆ ಎಂದು ಮರು ನಾಮಕರಣ ಮಾಡಬೇಕು ಎಂದು ಷರತ್ತು ಹಾಕಿದ್ದಾರೆ.

ಲಿಂಗಾಯತ ಹೋರಾಟ ಕೇವಲ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹುಟ್ಟಿಕೊಂಡಿಲ್ಲ. ಧಾರ್ಮಿಕ ಸಾಮಾಜಿಕ ಹೋರಾಟವನ್ನೂ ಮಾಡುತ್ತೇವೆ. ಸಮಾಜದ ಒಳಿತಿಗಾಗಿ ವೀರಶೈವರು ಒಂದಾಗುವುದಾದರೆ ಅಭ್ಯಂತರವಿಲ್ಲ ಎಂದು ಹೇಳಿದರು. ಲಿಂಗಾಯತರನ್ನು ತುಳಿಯಲಾಗುತ್ತಿದೆ. ಆದರೆ, ಕೇವಲ ರಾಜಕೀಯ ಲಾಭಕ್ಕಾಗಿ ಒಂದಾಗುವ ಬದಲು ಧಾರ್ಮಿಕ ಸಾಮಾಜಿಕ ಅಭಿವೃದ್ಧಿಗೆ ಒಂದಾಗುವುದಾದರೆ ಸಿದ್ಧ ಎಂದರು.

ಶಾಮನೂರು ವಿರುದ್ಧ ವಾಗ್ಧಾಳಿ
ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರ ವಿರುದ್ಧ ವಾಗ್ಧಾಳಿ ನಡೆಸಿದ ಜಾಮದಾರ್‌, ವೀರಶೈವರೇ ಧರ್ಮ ಒಡೆದಿದ್ದು. ಈ ಮೂಲಕ ಕಾಂಗ್ರೆಸ್‌ ಪಕ್ಷದ ಸೋಲಿಗೂ ಶಾಮನೂರು ಶಿವಶಂಕರಪ್ಪಕಾರಣರಾಗಿದ್ದು, ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.

ಪಂಚ ಪೀಠಾಧೀಶರ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕದಂತೆ ಹೇಳಿಸಿ ಪಕ್ಷದ ಸೋಲಿಗೆ ಕಾರಣರಾಗಿ¨ªಾರೆ. ಅವರ ಮಗನನ್ನು ಸೋಲಿಸಿ ಜನ ಪಾಠ ಕಲಿಸಿ¨ªಾರೆ ಎಂದು ಕಿಡಿ ಕಾರಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ಕಡತ ಕೇಂದ್ರದಿಂದ ವಾಪಾಸ್‌ ಬಂದಿರುವ ವಿಚಾರವನ್ನು ಜಾಗತಿಕ ಲಿಂಗಾಯತ ಮಹಾಸಭೆ ನಿರ್ವಹಣೆ ಮಾಡುತ್ತಿದೆ. ಪ್ರತ್ಯೇಕ ಧರ್ಮದ ಹೋರಾಟವನ್ನು ಜಾಮದಾರ್‌ ಅವರಿಗೆ ವಹಿಸಿದ್ದೇವೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಜಾಮದಾರ್‌ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳು. ಅವರು ಬಿದ್ಧಿವಂತ, ಪ್ರಾಮಾಣಿಕ ಮತ್ತು ಬದ್ಧತೆಯ ಮನುಷ್ಯ. ಅವರು ನಮ್ಮ ಮಾತು ಕೇಳುವುದಿಲ್ಲ. ತಮಗೆ ಸರಿ ಎನಿಸಿದ್ದನ್ನು ಮಾಡುತ್ತಾರೆ. ಕೆಲವೊಂದು ವಿಚಾರಗಳಲ್ಲಿ ಜಾಮದಾರ್‌ ನಿರ್ಧಾರವೇ ಅಂತಿಮ.
– ಎಂ.ಬಿ.ಪಾಟೀಲ್‌

ಕೇಂದ್ರ ಶಿಫಾರಸು ವಾಪಸ್‌ ಕಳಿಸಿರುವುದು ಒಳ್ಳೆಯದು. ವೀರಶೈವರು-ಲಿಂಗಾಯತರು ಒಂದಾಗುವುದಿದ್ದರೆ ಅದಕ್ಕೆ ಮಹಾಸಭಾದ ಬೆಂಬಲ ಇದೆ. ಒಟ್ಟಾಗಿ ಹೋಗುವುದು ಒಳ್ಳೆಯದು.
– ಶಾಮನೂರು ಶಿವಶಂಕರಪ್ಪ

ವೀರಶೈವ-ಲಿಂಗಾಯತ ಎರಡೂ ಒಂದೇ. ಇದರಲ್ಲಿ ಭಿನ್ನಮತವಿಲ್ಲ.ಸಮಾಜದ ಎಲ್ಲ ಮಠಾಧಿಧೀಶರು,
ಹಿರಿಯರು ಸೇರಿ ಸಮಾಲೋಚನೆ ನಡೆಸಿ ಮುಂದಿನ ನಡೆ ಕುರಿತು ಚರ್ಚಿಸಬೇಕಿದೆ. ಹೊಸ ಪ್ರಸ್ತಾವ ರಚಿಸಿ ಕೇಂದ್ರಕ್ಕೆ ಸಲ್ಲಿಸಬೇಕು.
– ಈಶ್ವರ ಖಂಡ್ರೆ

ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ
ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಲಿಂಗಾಯತ ಮತ್ತು ವೀರಶೈವ ಎರಡೂ ಬಣಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದೇ ಇರುವುದು ಬಣಗಳು ಪ್ರತ್ಯೇಕವಾಗಿದ್ದರಿಂದ ಎಂಬ ಚರ್ಚೆ ಆರಂಭವಾಗಿದೆ. ಎರಡೂ ಬಣಗಳು ಒಂದಾದರೆ ಮಾತ್ರ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿ ಬರುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ಎರಡೂ ಬಣಗಳ ಮುಖಂಡರು ಒಂದಾಗುವ ಕುರಿತು ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಈ ಕುರಿತು ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ್‌,ವೀರಶೈವ ಮಹಾಸಭಾ ತನ್ನ ನಿಲುವು ಬದಲಿಸಿದರೆ ನಾವು ಒಂದಾಗಲು ಸಿದ್ಧ. ವೀರಶೈವ ಮಹಾಸಭಾವನ್ನು ಲಿಂಗಾಯತ ವೀರಶೈವ ಮಹಾಸಭಾ ಎಂದು ಮರು ನಾಮಕರಣ ಮಾಡಬೇಕು ಎಂದು ಷರತ್ತು
ಹಾಕಿದ್ದಾರೆ. ಲಿಂಗಾಯತ ಹೋರಾಟ ಕೇವಲ ರಾಜಕೀಯ ಪ್ರಾತಿನಿಧ್ಯಕ್ಕೆ ಹುಟ್ಟಿಲ್ಲ. ಧಾರ್ಮಿಕ ಸಾಮಾಜಿಕ ಹೋರಾಟವನ್ನೂ ಮಾಡುತ್ತೇವೆ.ಸಮಾಜದ ಒಳಿತಿಗಾಗಿ ವೀರಶೈವರು ಒಂದಾಗುವುದಾದರೆ ಅಭ್ಯಂತರ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next