ಕೋಲಾರ: ಜಿಪಂ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕಾಗಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಕಟ್ಟಡದ ಜಾಗವನ್ನು ಕಾಯ್ದಿರಿಸಿ, ಎಸಿ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರಿ ಸಲು ಸಿದ್ಧತೆ ನಡೆಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬ್ರಿಟಿಷರ ಕಾಲದ ಕಟ್ಟಡದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಿದ್ದು, 1961ರಿಂದಲೂ ಈವರೆಗೆ ಯಾವುದೇ ತೊಂದರೆಯಿಲ್ಲದೆ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರಲಾಗುತ್ತಿದೆ. ಕೋಲಾರ ನಗರದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಿದ್ದು,ಕೂಗಳತೆ ದೂರದಲ್ಲಿಯೇ ನ್ಯಾಯಾಲಯವೂ ಇದೆ.
ಎಲ್ಲರಿಗೂ ತೊಂದರೆ: ಉಪವಿಭಾಗಾಧಿಕಾರಿಗಳ ಕಚೇರಿಯು ನಗರದಲ್ಲಿ ಇರುವುದರಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಸಾರ್ವಜನಿಕರು, ರೈತರ ಕೆಲಸ ಕಾರ್ಯಗಳಿಗೆ ಸೂಕ್ತವಾಗಿದೆ. ಪಕ್ಕದಲ್ಲಿಯೇ ನ್ಯಾಯಾಲಯವೂ ಇರುವುದರಿಂದ ವಕೀಲರಿಗೂ ಅನುಕೂಲವಾಗಿದೆ. ಆದರೆ, ಈಗ ಉಪವಿಭಾ ಗಾಧಿಕಾರಿಗಳ ಕಚೇರಿಯನ್ನು ಇಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆಸ್ಥಳಾಂತರಿಸಿದ್ದೇ ಆದಲ್ಲಿ ರೈತರು, ಸಾರ್ವಜನಿಕರು,ವೃದ್ಧರು, ವಕೀಲರು ಸೇರಿ ಎಲ್ಲರಿಗೂ ತೊಂದರೆಆಗಲಿದೆ. ಆದ ಕಾರಣ, ಜಿಲ್ಲಾ ಧಿಕಾರಿ ಕಚೇರಿಯು ಕೋಲಾರ ನಗರದಿಂದ 6-7 ಕಿ.ಮೀ.ಗಳಿದ್ದು,ಅಲ್ಲಿಗೆ ಹೋಗುವುದಕ್ಕೆ ಬಸ್, ಆಟೋಗಳಿಗೆ ಕಾಯಬೇಕಾದ ಪರಿಸ್ಥಿತಿಯೂ ಇದೆ.
ಕಟ್ಟಡ ಕಟ್ಟಲು ಸರ್ಕಾರಿ ಜಾಗ ಇದೆ: ಬೇರೆ ತಾಲೂಕುಗಳಿಂದ ನಗರಕ್ಕೆ ಕಷ್ಟಪಟ್ಟು ಬರುವದಲ್ಲದೆ, ಇಲ್ಲಿಂದ ಪುನಃ ಬಸ್, ಆಟೋಗಳಿಗೆ ಹಣ ನೀಡಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಜಿಪಂ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಕೋಲಾರ ನಗರ ಸೇರಿಹೊರವಲಯ ದಲ್ಲಿ ಸಾಕಷ್ಟು ಸರ್ಕಾರಿ ಜಮೀನುಇದೆ. ಅಲ್ಲಿ ಬೇಕಿದ್ದರೆ ನಿರ್ಮಿಸಿಕೊಳ್ಳಲಿ, ಇಲ್ಲವೇಎಸಿ ಕಚೇರಿಯಲ್ಲಿ ಕೋಲಾರ ತಾಲೂಕು ಕಚೇರಿಗಾದರೂ ಸ್ಥಳಾಂತರಿಸಲು ಕ್ರಮಕೈಗೊಳ್ಳ ಬೇಕೇ ಹೊರತು, ಜಿಲ್ಲಾಧಿ ಕಾರಿಗಳ ಕಚೇರಿಗೆ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎನ್ನುವ ಆಗ್ರಹ ಸಾರ್ವಜನಿಕವಲಯದಲ್ಲಿ ಕೇಳಿ ಬರುತ್ತಿದೆ.
ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಥಳಾಂತರಿಸುವುದರಿಂದ ಸಾರ್ವಜನಿಕರು, ರೈತರು ಸೇರಿ ಎಲ್ಲರಿಗೂ ತೊಂದರೆಯಾಗಲಿದೆ. ಬ್ರಿಟಿಷರ ಕಾಲದ ಕಟ್ಟಡ ಉತ್ತಮ ಸ್ಥಿತಿಯಲ್ಲಿದೆ. ಇದನ್ನು ಉಳಿಸಿಕೊಳ್ಳದೇ ಕಟ್ಟಡ ತೆರವುಗೊಳಿಸಿ, ವಸತಿ ಗೃಹಗಳ ನಿರ್ಮಾಣಕ್ಕೆಮುಂದಾಗಿರುವುದು ಖಂಡನೀಯ. ಕೂಡಲೇ ಈಕ್ರಮವನ್ನು ವಾಪಸ್ ಪಡೆಯುವಂತೆ ಗ್ರಾಪಂ ಸದಸ್ಯ ನಿರಂಜನ್ ಒತ್ತಾಯಿಸಿದ್ದಾರೆ.