Advertisement

ಕಸಾಪದಲ್ಲಿ ಬದಲಾವಣೆಗೆ ಯತ್ನ: ಡಾ|ಜೋಶಿ

05:53 PM Mar 11, 2021 | Team Udayavani |

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್‌ನ್ನು ಜನಸಾಮಾನ್ಯರ ಪರಿಷತ್‌ನ್ನಾಗಿಸುವುದು ಮತ್ತು ಅದರ ನಿಬಂಧನೆಗಳಲ್ಲಿ ಇರುವ ನ್ಯೂನತೆಗಳನ್ನು ಸರಿ ಪಡಿಸುವ ಅಮೂ ಲಾಗ್ರಹ ಬದಲಾವಣೆ ಗುರಿ ಹೊಂದಿದ್ದೇನೆ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 106 ವರ್ಷಗಳ ಇತಿಹಾಸ ಹೊಂದಿ ರುವ ಕಸಾಪ ಅಂದಿನಿಂದ ಒಂದೇ ತರೆನಾದ ನಿಬಂಧನೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರು ತಮ್ಮ ಸೇವಾವಧಿಯಲ್ಲಿ ಮೃತಪಟ್ಟರೆ, ಮತ್ತೆ ಚುನಾವಣೆ ಮಾಡಬೇಕೇ? ಅಥವಾ ನಾಮ ನಿರ್ದೇಶನ ಮಾಡಿದರೆ ಸಾಕೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗೆ, ತಾಲೂಕು ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ತಮಗೆ ಬೇಕಾದವರನ್ನು ನಾಮ ನಿರ್ದೇಶನ ಮಾಡುವ ಹಕ್ಕು ಇದೆ. ಇವುಗಳ ಬಗ್ಗೆ ಕಾನೂನು ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.

ಕಸಾಪ ಅಧಿಕಾರಾವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ಅದನ್ನು ಐದು ವರ್ಷ ಮುಂದುವರೆಸಬೇಕೋ ಅಥವಾ ಹಿಂದಿನಂತೆ ಮೂರು ವರ್ಷಕ್ಕೆ ಇಳಿಸಬೇಕೋ ಎನ್ನುವುದು ನ್ಯಾಯಾಲಯದ ತೀರ್ಪಿನ ಮೇಲೆ ನಿರ್ಧಾರವಾಗುತ್ತದೆ. ಹಾಗೆ,
ತಾಲೂಕು ಅಧ್ಯಕ್ಷರ ವಿಷಯವಾಗಿಯೂ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು, ತಾಲೂಕು ಅಧ್ಯಕ್ಷರ ನೇಮಕಕ್ಕೆ ಚುನಾವಣೆ ಮಾಡಬೇಕೆಂಬ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಲ್ಲದೇ, ಕಸಾಪ ವಿಚಾರವಾಗಿ ನನ್ನದೇ ಆದ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಅಜೀವ ಸದಸ್ಯರ ಶುಲ್ಕವನ್ನು 500ರಿಂದ ಮೊದಲಿನಂತೆ 250ರೂ.ಗಳಿಗೆ ಕಡಿಮೆಗೊಳಿಸುವುದು. ಯುವಕ-ಯುವತಿಯರನ್ನು ಎಲ್ಲ ಕಸಾಪ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿ, ವಿಶೇಷ ರಿಯಾಯ್ತಿ ನೀಡಿ ಅಜೀವ ಸದಸ್ಯತ್ವಕ್ಕೆ 100ರೂ. ಶುಲ್ಕ ನಿಗದಿ ಮಾಡಲಾಗುವುದು. ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕರಣ ಗೊಳಿಸವುದು ಎಂದು ಹೇಳಿದರು.

ಕಸಾಪ ವ್ಯಾಪ್ತಿಯನ್ನು ಹಳ್ಳಿಗಳಿಗೂ ವಿಸ್ತರಿಸುವುದು. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ಕೊಡುತ್ತೇನೆ. ಕನ್ನಡ ಶಾಲೆಗಳನ್ನು ಮುಚ್ಚದಂತೆ ಕ್ರಮ
ಕೈಗೊಳ್ಳುವುದು ಹಾಗೂ ಗಡಿ ಶಾಲೆಗಳ ಮಕ್ಕಳಿಗೆ ರಕ್ಷಣೆಗೆ ನೀಡುವ ಉದ್ದೇಶ ಹೊಂದಿದ್ದೇನೆ ಎಂದರು. ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸರ್ವಾಧ್ಯಕ್ಷರ ಸ್ಥಾನಮಾನ, ಎಲ್ಲ ತಾಲೂಕುಗಳಲ್ಲಿ ಕನ್ನಡ ಭವನಕ್ಕೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.

Advertisement

ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ, ಕಿರಣ್‌ ಶೆಟಗಾರ, ನಬಿ ಸಾಬ್‌ ಇದ್ದರು. ಡಾ| ಮಹೇಶ್‌ ಜೋಶಿ ಅವರಲ್ಲಿ ಪ್ರಯತ್ನಶೀಲತೆ, ಶ್ರದ್ಧಾಶೀಲತೆ ಇದೆ.

ಸೇವಾ ಗುಣವನ್ನು ಅವರು ಹೊಂದಿದ್ದಾರೆ. ನಾಡು, ನುಡಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿರುವರಲ್ಲಿ ಅವರು ಒಬ್ಬರಾಗಿದ್ದಾರೆ. ಅಂತಹವರಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಪ್ರಾಮಾಣಿಕತನ ಒಪ್ಪಿ ನಾನು ಅವರ ಪರವಾಗಿ ನಿಂತಿದ್ದೇನೆ.
ಅರಳಿ ನಾಗರಾಜ, ನಿವೃತ್ತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next