Advertisement

ಅನಧಿಕೃತ ಕೋಚಿಂಗ್‌ ಸೆಂಟರ್‌ಗೆ ಬಿಇಒ ರಾಠೊಡ ದಾಳಿ

05:15 PM Jun 15, 2022 | Team Udayavani |

ಮುದಗಲ್ಲ: ತಾಲೂಕಿನಲ್ಲಿ ತರಬೇತಿ ನೆಪದಲ್ಲಿ ನಡೆಸುತ್ತಿರುವ ನವೋದಯ, ಕಿತ್ತೂರ ಸೇರಿದಂತೆ ವಿವಿಧ ವಸತಿ ಶಾಲೆಗಳ ಅನಧಿಕೃತ ತರಬೇತಿ ಶಾಲೆಗಳ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೊಡ ಮಂಗಳವಾರ ದಿಢೀರ್‌ ದಾಳಿ ನಡೆಸಿ ಎರಡು ದಿನಗಳಲ್ಲಿ ತರಬೇತಿ ಕೇಂದ್ರ ಮುಚ್ಚುವಂತೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದಲ್ಲಿಯ ಎಪಿಎಂಸಿ ಹತ್ತಿರದ ಜ್ಞಾನದೀಪ, ಮಸ್ಕಿ ರಸ್ತೆಯಲ್ಲಿರುವ ಆದರ್ಶ ನವೋದಯ ಕೋಚಿಂಗ್‌ ಕೇಂದ್ರಗಳ ಮೇಲೆ ದಿಢೀರ್‌ ದಾಳಿ ಮಾಡಿ ಸುಮಾರು 140 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಲ್ಲದೇ ಸೆಂಟರ್‌ನಲ್ಲಿದ್ದ ಮುಖ್ಯಸ್ಥರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಖಾಸಗಿ ಅನುದಾನ ರಹಿತ ಮತ್ತು ಅನುದಾನ ಸಹಿತ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿನಿಯರಿಗೆ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ನೀಡಲಾಗುತ್ತಿರುವುದು ಬಯಲಾಗಿದೆ. ಅಲ್ಲದೇ ದಾಖಲಾತಿ ಹೊಂದಿರುವ ಶಾಲೆಗಳಲ್ಲಿಯೂ ಮಕ್ಕಳಿಗೆ ಹಾಜರಾತಿ ನೀಡುತ್ತಿರುವುದು ಬಯಲಾಗಿದೆ. ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಶಾಲೆಗಳ ಹಾಜರಾತಿ ಪರಿಶೀಲಿಸಿ ಅಂತಹ ಶಾಲೆಗಳ ಮೇಲೂ ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದ್ದಾರೆ.

ಎರಡು ದಿನ ಗಡುವು: ತಾಲೂಕಿನಲ್ಲಿ ಅನಧಿಕೃತವಾಗಿ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದರಿಂದ ಅಂತಹ ಕೇಂದ್ರಗಳಿಗೆ ಕಳೆದೆರಡು ತಿಂಗಳ ಹಿಂದೆಯೇ ಪರಿಶೀಲಿಸಿ, ನೋಟಿಸ್‌ ನೀಡಿ ಎಚ್ಚರಿಸಿದ್ದರೂ ಕೇಂದ್ರಗಳನ್ನು ಮತ್ತೆ ಆರಂಭಿಸಿದ್ದಾರೆ. ದಾಖಲಾತಿ ಹೊಂದಿದ ಮಕ್ಕಳ ಶಾಲೆಗಳಲ್ಲಿ ಹಾಜರಾತಿ ಪರಿಶೀಲಿಸಿ ಶಾಲೆಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತ ತರಬೇತಿ ಕೇಂದ್ರ ಎರಡು ದಿನಗಳಲ್ಲಿ ಮುಚ್ಚಬೇಕು, ಮಕ್ಕಳನ್ನು ಸಂಬಂಧಿಸಿದ ಶಾಲೆಗಳಿಗೆ ಕಳಿಸಬೇಕೆಂದು ತಾಕೀತು ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next