Advertisement

ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ : ಮೂವರು ಅಂತಾರಾಜ್ಯ ದರೋಡೆಕೋರು ಅರೆಸ್ಟ್

04:28 PM Sep 16, 2020 | sudhir |

ಪಂಜಾಬ್ : ಸುರೇಶ್ ರೈನಾ ಕುಟುಂಬದ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಪೊಲೀಸರು ಮೂವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಪ್ರಕರಣದ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾತನಾಡಿ ರೈನಾ ಕುಟುಂಬದ ಮೇಲೆ ದಾಳಿ ನಡೆಸಿದ್ದ ಪ್ರಕರಣವನ್ನು ಪಂಜಾಬ್ ಪೊಲೀಸರು ಭೇದಿಸಿದ್ದು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಾಳಿ ಕುರಿತು ಮಾತನಾಡಿದ ಡಿಜಿಪಿ ದಿನಕರ್ ಗುಪ್ತ ಈಗಾಗಲೇ ಪ್ರಕರಣದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ ಜೊತೆಗೆ ಇವರ ಜೊತೆಯಲ್ಲಿ ಇನ್ನು ಹಲವು ಮಂದಿ ಭಾಗಿಯಾಗಿದ್ದಾರೆ ಸದ್ಯದಲ್ಲೇ ಅವರ ಬಂದವು ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜಸ್ಥಾನದ ಚಂಬಲ್ ನದಿಯಲ್ಲಿ 40 ಭಕ್ತರಿದ್ದ ದೋಣಿ ಅವಘಡ !12 ಮಂದಿ ನಾಪತ್ತೆ

ಆರೋಪಿಗಳ ಹಿನ್ನೆಲೆ :
ಬಂಧಿತ ಆರೋಪಿಗಳಾದ ಸಾವನ್, ಮೊಹೊಬ್ಬತ್, ಶಾರುಖ್ ಖಾನ್ ಅಂತಾರಾಜ್ಯ ದವರಾಗಿದ್ದು ಮೂಲತಃ ರಾಜಸ್ಥಾನದ ಜುನ್ ಜುನ್ ಜಿಲ್ಲೆಯವರು ಇವರು ದರೋಡೆ, ಸುಳಿಕೆ, ಮಾಡಿಕೊಂಡು ಐಷಾರಾಮಿ ಜೀವನ ನಡೆಸುವ ಉದ್ದೇಶ ಇವರದ್ದು ಉತ್ತರ ಪ್ರದೇಶ ಜಮ್ಮು ಕಾಶ್ಮೀರ ಸೇರಿದಂತೆ ಹಲವು ಪ್ರದೇಶಗಳಲ್ಲಿ ದರೋಡೆ ನಡೆಸಿದ್ದರು. ದರೋಡೆಗಾಗಿ ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು ಹಾಗಾಗಿ ಪಂಜಾಬ್ ನ ಪಠಾಣ್ ಕೋಟ್ ಬಳಿಯ ಕೊಳಗೇರಿಯಲ್ಲಿ ಈ ಮೂವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ದರೋಡೆಯಲ್ಲಿ ಮೂವರು ಸಮ ಪಾಲು ಮಾಡಿಕೊಂಡು ಜೊತೆಯಾಗಿ ವಾಸಿಸಿದರೆ ಅನುಮಾನ ಬರಬಹುದು ಎಂದು ಬೇರೆ ಬೇರೆ ಮನೆ ಮಾಡಿಕೊಂಡಿದ್ದರು.

Advertisement

ಘಟನೆ ಹಿನ್ನೆಲೆ :
ಹಾಗೆ ಆಗಸ್ಟ್ 28ರ ರಾತ್ರಿ ದರೋಡೆಕೋರರ ತಂಡ ಸುರೇಶ್ ರೈನಾ ಕುಟುಂಬದ ಮನೆ ಮೇಲೆಗೆ ದಾಳಿ ನಡೆಸುವ ಮೊದಲು ಮೂರು ಕಡೆ ದರೋಡೆಗೆ ವಿಫಲ ಯತ್ನ ನಡೆಸಿದ್ದರು ಕೊನೆಗೆ ರೈನಾ ಸೋದರತ್ತೆ ಮನೆ ಮೇಲೆ ದಾಳಿಗೆ ಯತ್ನ ನಡೆಸಿದ್ದಾರೆ ಮೊದಲು ಮನೆಯ ಛಾವಣಿಗೆ ಏಣಿ ಇಟ್ಟು ಅಲ್ಲಿ ಮಲಗಿದ್ದ ರೈನಾ ರ ಸೋದರ ಮಾವ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮನೆಯ ಒಳಗೆ ಪ್ರವೇಶಿಸಿದ್ದಾರೆ ಮನೆಯ ಒಳಗಿದ್ದ ಸುರೇಶ್ ರೈನಾ ರ ಸೋದರತ್ತೆ ಹಾಗೂ ಇಬ್ಬರು ಮಕ್ಕಳ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋದರಮಾವ ಕೊನೆಯುಸಿರೆಳೆದಿದ್ದು ಸೋದರತ್ತೆಯ ಸ್ಥಿತಿ ಗಂಭೀರವಾಗಿದೆ, ಮಕ್ಕಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:ಬಾಬ್ರಿ ಧ್ವಂಸ ಪ್ರಕರಣ; ಸೆ.30ರಂದು ಅಂತಿಮ ತೀರ್ಪು; ಅಡ್ವಾಣಿ, ಉಮಾಭಾರತಿ ಭವಿಷ್ಯ ಏನಾಗಲಿದೆ?

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲು ಪಂಜಾಬ್ ಮುಖ್ಯಮಂತ್ರಿ ಆದೇಶ ನೀಡಿದ ಬೆನ್ನಲ್ಲೇ ಡಿಜಿಪಿ ಮಾರ್ಗದರ್ಶನದಲ್ಲಿ ದರೋಡೆಕೋರರ ಪತ್ತೆಗಾಗಿ ಹಲವು ತಂಡಗಳನ್ನು ಮಾಡಿ ಆರೋಪಿಗಳ ಪತ್ತೆಗೆ ಬಲೆಬೀಸಿತ್ತು ಅದರಂತೆ ಸೆಪ್ಟೆಂಬರ್ 15ರಂದು ಎಸ್ಐಟಿ ತಂಡಕ್ಕೆ ಆರೋಪಿಗಳು ಪಠಾಣ್ ಕೋಟ್ ರೈಲ್ವೆ ನಿಲ್ದಾಣದ ಕೊಳೆಗೇರಿಯಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಸಿಗುತ್ತದೆ ಇದರ ಜಾಡು ಹಿಡಿದ ಪೋಲೀಸರ ತಂಡ ಕೊಳೆಗೇರಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಜೊತೆ ಇನ್ನು ಹಲವು ಮಂದಿ ಭಾಗಿಯಾಗಿದ್ದು ಅವರ ಪತ್ತೆಗೆ ಪೋಲೀಸರ ತಂಡ ಬಲೆ ಬೀಸಿದೆ.

Advertisement

Udayavani is now on Telegram. Click here to join our channel and stay updated with the latest news.

Next