Advertisement

Pakistan: ಪಾಕ್‌ ಚರ್ಚ್‌ಗಳ ಮೇಲೆ ದಾಳಿ

08:33 PM Aug 16, 2023 | Team Udayavani |

ಲಾಹೋರ್‌: ದೈವನಿಂದನೆ ಆರೋಪದಲ್ಲಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಹಲವು ಚರ್ಚ್‌ಗಳ ಮೇಲೆ ದಾಳಿ ಮಾಡಿ, ಹಾನಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೈಸಲಾಬಾದ್‌ ಜಿಲ್ಲೆಯ ಜರನ್ವಾಲಾದ ಇಸಾ ನಾಗ್ರಿ ಪ್ರದೇಶದಲ್ಲಿರುವ ಸಾಲ್ವೇಶನ್‌ ಆರ್ಮಿ ಚರ್ಚ್‌, ಯುನೈಟೆಡ್‌ ಪ್ರಸಿºಟೇರಿಯನ್‌ ಚರ್ಚ್‌, ಅಲೈಡ್‌ ಫೌಂಡೇಶನ್‌ ಚರ್ಚ್‌ ಮತ್ತು ಶೆಹ್ರೂನ್ವಾಲಾ ಚರ್ಚ್‌ ಮೇಲೆ ದಾಳಿ ನಡೆಸಲಾಗಿದೆ.

Advertisement

ಜತೆಗೆ ದೈವನಿಂದನೆ ಆರೋಪ ಹೊತ್ತಿರುವ ಕ್ರೈಸ್ತ ಧರ್ಮದ ಅನುಯಾಯಿಯ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. “ಈ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಪ್ರದೇಶದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಲ್ಲಿ ಒಂದು ದೊಡ್ಡ ಚರ್ಚ್‌ ಮತ್ತು ಎರಡು ಸಣ್ಣ ಚರ್ಚ್‌ಗಳಿದ್ದು, ಅದರ ಕೆಲವು ಭಾಗಗಳನ್ನು ಹಾನಿಗೊಳಿಸಲಾಗಿದೆ’ ಎಂದು ಪಂಜಾಬ್‌ ಪೊಲೀಸ್‌ ಮುಖ್ಯಸ್ಥ ಉಸ್ಮಾನ್‌ ಅನ್ವರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next