ಬೆಂಗಳೂರು: ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಸಮೀಪದ ಬಿ.ಕೆ ಹಳ್ಳಿ ನಿವಾಸಿ ನಾಗೇಶ್ (30) ಬಂಧಿತ ಆರೋಪಿ.
ಈತ ಶನಿವಾರ ತಡರಾತ್ರಿ ಹೊಯ್ಸಳ ಸಿಬ್ಬಂದಿ ಹೆಡ್‌ಕಾನ್‌ಸ್ಟೆàಬಲ್ ಮಲ್ಲಿಕಾರ್ಜನ್ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಗಲೂರಿನ ದಾಳಮ್ಮ ಸರ್ಕಲ್ ಬಳಿ ಟ್ಯಾಕ್ಸಿ ವಿಚಾರಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾ ಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಈ ಮಾಹಿತಿ ಪಡೆದ ಬಾಗಲೂರಿನ ಹೊಯ್ಸಳ ವಾಹನ ಸಿಬ್ಬಂದಿ ಎಎಸ್‌ಐ ವಿಶ್ವನಾಥ್ ಮತ್ತು ಹೆಡ್‌ಕಾನ್‌ಸ್ಟೆàಬಲ್ ಮಲ್ಲಿಕಾರ್ಜನ್ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಆರೋಪಿ ಮಧ್ಯ ಪ್ರವೇಶಿ, ಯಾರು ನಿಮ್ಮನ್ನು ಕರೆದವರು ಎಂದೆಲ್ಲ ಜಗಳ ತೆಗೆದು, ಹೆಡ್ ಕಾನ್‌ಸ್ಟೇಬಲ್ ಮಲ್ಲಿಕಾರ್ಜನ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿತ್ತು. ಆರೋಪಿಯನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ಮತ್ತೂಂದೆಡೆ ಗಲಾಟೆಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಮಧ್ಯಪ್ರವೇಶಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.