Advertisement

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

05:16 PM Oct 02, 2024 | Team Udayavani |

ಟೆಲ್‌ ಅವಿವ್:‌ ಇರಾನ್‌ ಸೇನಾ(Irna Military) ಪಡೆ ಮಂಗಳವಾರ(ಅ.01) ರಾತ್ರಿ ಇಸ್ರೇಲ್‌(Israel) ಮೇಲೆ ಭಾರೀ ಪ್ರಮಾಣದ ರಾಕೆಟ್‌ ದಾಳಿ ನಡೆಸಿತ್ತು. ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ತುಣುಕಿನಲ್ಲಿ, ಇರಾನ್‌ ರಾಕೆಟ್‌ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬಂಕರ್‌ ನತ್ತ ಓಡುತ್ತಿರುವ ದೃಶ್ಯ ವೈರಲ್‌ ಆಗಿದೆ…ಇದು ನಿಜಕ್ಕೂ ಅಸಲಿಯೋ ಅಥವಾ ನಕಲಿಯೋ?

Advertisement

ಇರಾನ್‌ ನ ಕೆಲವು ಹೈಪರ್‌ ಸಾನಿಕ್‌ ಮಿಸೈಲ್ಸ್‌ ಗಳು ಇಸ್ರೇಲ್‌ ವಾಯುನೆಲೆ ಮೇಲೆ ಬಂದು ಬಿದ್ದಿದ್ದು, ಸಾವಿರಾರು ಜನರು ರಕ್ಷಣೆಗಾಗಿ ಪರದಾಡುತ್ತಿರುವುದಾಗಿ ವರದಿ ತಿಳಿಸಿದೆ.

ಇರಾನ್‌ ಪರವಾದ ಸಾಮಾಜಿಕ ಜಾಲತಾಣ ಹ್ಯಾಂಡಲ್ಸ್‌ ನಲ್ಲಿ ಈ ವಿಡಿಯೋ ಕ್ಲಿಪ್‌ ಅನ್ನು ಶೇರ್‌ ಮಾಡಿದ್ದು, “ಬೆಂಜಮಿನ್‌ ನೆತನ್ಯಾಹು ಬಂಕರ್‌ ನತ್ತ ಓಡುತ್ತಿರುವುದು ಎಂಬುದಾಗಿ ಉಲ್ಲೇಖಿಸಲಾಗಿದೆ”.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕ್ಷಣಗಳು… ಇರಾನ್‌ ಪ್ರತೀಕಾರ ಎದುರಿಸಿದ ನೆತನ್ಯಾಹು ಬಂಕರ್‌ ನತ್ತ ಓಡಿಹೋಗುತ್ತಿರುವುದು ಎಂಬುದಾಗಿ ಮತ್ತೊಂದು ಪೋಸ್ಟ್‌ ನಲ್ಲಿ ವ್ಯಂಗ್ಯವಾಡಲಾಗಿದೆ.


ಫ್ಯಾಕ್ಟ್‌ ಚೆಕ್:‌
ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಬಂಕರ್‌ ನತ್ತ ಓಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಆದರೆ ಈ ವಿಡಿಯೋ ಸುಮಾರು ಮೂರು ವರ್ಷ ಹಳೆಯದ್ದು. ಈ ವಿಡಿಯೋವನ್ನು 2021ರಲ್ಲಿ Fact Corroborated ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಮಾಡಿತ್ತು.

Advertisement

ಒರಿಜಿನಲ್‌ ವಿಡಿಯೋದಲ್ಲಿ ಬೆಂಜಮಿನ್‌ ನೆತನ್ಯಾಹು ಅವರು ಇಸ್ರೇಲ್‌ ಸಂಸತ್ತಿನ ನೆಸೆಟ್‌ ಕಾರಿಡಾರ್‌ ನಲ್ಲಿ ಓಡುತ್ತಿರುವ ದೃಶ್ಯ ಇದಾಗಿದ್ದು, ಅದನ್ನೇ ಇರಾನ್‌ ದಾಳಿಗೆ ಬಳಸಿಕೊಂಡು ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next