ಮುಜಾಫರ್‌ನಗರ : ಮಹತ್ವದ ಕಾರ್ಯಾಚರಣೆ ನಡೆಸಿದ ಉತ್ತರಪ್ರದೇಶದ ಎಟಿಎಸ್ ಪೊಲೀಸರು ಬಾಂಗ್ಲಾ ಮೂಲದ ಉಗ್ರನೊಬ್ಬನನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
Advertisement
ಬಂಧಿತ ಉಗ್ರ ಅಬ್ದುಲ್ಲಾ ಎಂದು ತಿಳಿದು ಬಂದಿದ್ದು ಬಾಂಗ್ಲಾ ಮೂಲದ ಈತ 2011 ರಿಂದ ಮುಜಾಫರ್‌ನಗರದಲ್ಲಿ ತಲೆ ಮರೆಸಿಕೊಂಡಿದ್ದು , ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಹಲವರಿಗೆ ಈತ ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗಳನ್ನು ಮಾಡಿಕೊಡುವ ದಂಧೆ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಬಂಧಿತನ ಬಳಿ ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಪಾಸ್‌ಪೋರ್ಟ್ ವಶಕ್ಕೆ ಪಡೆಯಲಾಗಿದೆ.
Related Articles
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Advertisement