Advertisement

ಪಾಕಿಸ್ತಾನ: ಇಬ್ಬರು ಹಿಂದು ಯುವತಿಯರ ಅಪಹರಣ, ಬಲವಂತದಿಂದ ಇಸ್ಲಾಂಗೆ ಮತಾಂತರ

03:29 PM Jan 09, 2021 | Team Udayavani |

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಲ್ಲೆ, ಕಿರುಕುಳ ನಡೆಸುತ್ತಿರುವ ಬಗ್ಗೆ ಮಾನವಹಕ್ಕುಗಳ ಕಾರ್ಯಕರ್ತರು ಗಂಭೀರ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ ಇಬ್ಬರು ಹಿಂದು ಯುವತಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಪಾಕಿಸ್ತಾನ ಸೇನೆಗೆ ನಿಕಟವರ್ತಿಯಾಗಿರುವ ಮುಸ್ಲಿಂ ಇಮಾಮ್ ಮಿಯಾನ್ ಅಬ್ದುಲ್ ಖಾಲಿಖ್ ಎಂಬಾತ ಎಕ್ತಾ ಕುಮಾರಿ ಎಂಬ ಹಿಂದು ಯುವತಿಯನ್ನು ಬಲವಂತವಾಗಿ ಇಸ್ಲಾಂ ಮತಾಂತರ ಮಾಡಿರುವುದಾಗಿ ವರದಿ ವಿವರಿಸಿದೆ.

ಎಕ್ತಾ ಕುಮಾರಿ ಬಲೂಚಿಸ್ತಾನದ ಸಿಬಿ ನಿವಾಸಿ. ಈಕೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಮೂಲಗಳು ತಿಳಿಸಿದ್ದು, ಅನಿಲ್ ಕುಮಾರ್ ಎಂಬವರ ಮಗಳಾಗಿರುವ ಎಕ್ತಾ ಕುಮಾರಿಯನ್ನು ಸಿಬಿಯಲ್ಲಿ ವಾಸವಾಗಿರುವ ಸ್ಥಳೀಯ ಮುಸ್ಲಿಂ ಯಾರ್ ಮೊಹಮ್ಮದ್ ಭುಟ್ಟೂ ಅಪಹರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಎಕ್ತಾ ಕುಮಾರಿಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧಾರಾಕಿಯಲ್ಲಿರುವ ದರ್ಗಾ ಎ ಅಲಿಯಾ ಭರಚುಂಡಿ ಷರೀಫ್ ಗೆ ಭುಟ್ಟೊ ಬಲವಂತದಿಂದ ಕರೆದೊಯ್ದಿದ್ದ. ನಂತರ ದರ್ಗಾದಲ್ಲಿ ಆಕೆಯನ್ನು ಮಿಯಾನ್ ಇಸ್ಲಾಂಗೆ ಮತಾಂತರಿಸಿ ಆಯೇಷಾ ಎಂದು ಮರುನಾಮಕರಣ ಮಾಡಿ ಭುಟ್ಟೋ ಜತೆ ವಿವಾಹ ಮಾಡಿರುವುದಾಗಿ ವರದಿ ತಿಳಿಸಿದೆ.

ಮತ್ತೊಂದು ಪ್ರಕರಣದಲ್ಲಿ ಜುಮಾ ಬಜಾರ್ ನಿವಾಸಿ ಧಾನಿ ಕೊಹ್ಲಾಹಿ ಎಂಬ ಹಿಂದು ಯುವತಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿ, ಮುಸ್ಲಿಂ ಯುವಕನ ಜತೆ ವಿವಾಹ ನಡೆಸಿರುವುದಾಗಿ ವರದಿ ತಿಳಿಸಿದೆ. ಆಕೆ ಎಲ್ಲಿದ್ದಾಳೆ ಎಂಬುದು ಪೋಷಕರಿಗೆ ಈವರೆಗೂ ಸುಳಿವು ಸಿಕ್ಕಿಲ್ಲ. ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ಕೂಡಾ ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.

Advertisement

ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮತಾಂತರ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯ ಕಳವಳ ವ್ಯಕ್ತಪಡಿಸಿದ್ದು, ಇಮ್ರಾನ್ ಖಾನ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next