ಬನ್ನೂರು: ರೈತರ ದೌರ್ಬಲ್ಯಕ್ಕೆ ನಿರಂತವಾಗಿ ನಡೆಯುತ್ತಿರುವಂತ ದೌರ್ಜನ್ಯವೇ ಕಾರಣ ಎಂದು ಕರ್ನಾಟಕ ರೈತದಳದ ರಾಜಾಧ್ಯಕ್ಷ ಗಂಗಾಧರ ಶಂ. ಪಾಟೀಲ ಕುಲಕರ್ಣಿ ತಿಳಿಸಿದರು. ಬನ್ನೂರಿನ ಸಮೀಪದ ಮಾಕನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ರೈತ ದಳ ಅರಿವಿನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಿ ಸತ್ತರೆ ವೀರಯೋಧ ಎನ್ನುತ್ತಾರೆ ಆದರೆ, ದೇಶದ ಬೆನ್ನುಲುಬಾದ ರೈತ ಆತ್ಮಹತ್ಯೆ ಮಾಡಿಕೊಂಡರೆ ವೀರಮರಣ ಅನ್ನುತ್ತಾರಾ ಎಂದು ಪ್ರಶ್ನಿಸಿದರು. ಇಂದು ಕೃಷಿ ಮರೀಚಿಕೆಯಾಗುತ್ತಿದ್ದು, ರೈತರ ಮಕ್ಕಳು ಕೃಷಿಯನ್ನು ಬಿಟ್ಟು ಪಟ್ಟಣದ ಹಾದಿ ಹಿಡಿದಿದ್ದಾರೆ. ನಮ್ಮೆಲ್ಲರ ಕೃಷಿ ರಾಜಕೀಯ ಕುತಂತ್ರಗಳಿಗೆ ಬಲಿಯಾಗಿದೆ ಎಂದು ತಿಳಿಸಿದರು.
ರೈತರ ಬೆಳೆಗೆ ಬೆಂಬಲ ಬೆಲೆ ಸಿಗದೆ, ವಿವಿಧ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ವಿಷವನ್ನು ಸೇವನೆ ಮಾಡುವಂತಾಗಿದೆ. ಸ್ವಾಭಿಮಾನದ ಬದುಕು ಸಾಗಿಸಲು ರೈತ ನಾಯಕನ ಅವಶ್ಯಕತೆ ಇದ್ದು ಒಗ್ಗಟ್ಟಾಗಿ ಸಮಸ್ಯೆಗೆ ಪರಿಹರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ರೈತರು ರೈತರಾಗಿ ಹುಟ್ಟಿ ರೈತರಾಗಿ ಬಾಳುತ್ತಿದ್ದೇವೆ. ನಾವು ಸರ್ಕಾರಕ್ಕೆ ಬೇಡಿಕೆ ಎಂದು ಏನು ಕೇಳುವ ಅವಶ್ಯಕತೆ ಇಲ್ಲ. ಬದಲಾಗಿ ಹಕ್ಕು ಎಂದು ಪಡೆದುಕೊಳ್ಳಬೇಕೆಂದರು. ಜಿಲ್ಲಾಧ್ಯಕ್ಷ ನಂಜುಂಡಮೂರ್ತಿ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಡಾ.ಜ್ಞಾನಪ್ರಕಾಶ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ,
-ಬನ್ನೂರು ಹೋಬಳಿ ಯುವ ಘಟಕದ ಅಧ್ಯಕ್ಷ ಕೊಡಗಳ್ಳಿ ಕೆ.ಪಿ.ಶಿವಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ಜಿಲ್ಲಾ ಯುವ ಜೆಡಿಎಸ್ ಕಾರ್ಯಧ್ಯಕ್ಷ ಬಿ.ಕೆ.ನಿರಂಜನ್‌ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಂಚನಹಳ್ಳಿ ಚಿಕ್ಕಿರೇಗೌಡ ಮತ್ತಿತರರಿದ್ದರು.