Advertisement

ಎಟಿಪಿ ಶ್ರೇಯಾಂಕ​: ಮತ್ತೆ ಅಗ್ರಸ್ಥಾನಕ್ಕೆ ಮರಳಿದ ನೊವಾಕ್ ಜೊಕೋವಿಕ್‌

10:45 PM Mar 22, 2022 | Team Udayavani |

ನ್ಯೂಯಾರ್ಕ್‌: ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿಯಿಂದ ಹೊರಬಿದ್ದ ಕಾರಣ ರಷ್ಯಾದ ಆಟಗಾರ ಡ್ಯಾನಿಲ್‌ ಮೆಡ್ವಡೇವ್‌ ವಿಶ್ವ ನಂ.1 ಪಟ್ಟವನ್ನು ಕಳೆದುಕೊಂಡಿದ್ದಾರೆ . ಹೀಗಾಗಿ ನೊವಾಕ್‌ ಜೊಕೋವಿಕ್‌ ಮತ್ತೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

Advertisement

ದುಬಾೖ ಚಾಂಪಿಯನ್‌ಶಿಪ್‌ ಗೆಲ್ಲುವಲ್ಲಿ ವಿಫ‌ಲವಾಗಿದ್ದ ಜೊಕೋವಿಕ್‌ 2ನೇ ಸ್ಥಾನಕ್ಕೆ ಕುಸಿದಿದ್ದರು.

ಇದನ್ನೂ ಓದಿ:ಬಾಂಗ್ಲಾ ವೇಗಿ ಟಸ್ಕಿನ್‌ ಅಹ್ಮದ್‌ ಗೆ ನಿರಾಕ್ಷೇಪಣಾಪತ್ರ ನೀಡಲು ಬಿಸಿಬಿ ನಕಾರ

ಭಾರೀ ಜಿಗಿತ ಕಂಡ ಫ್ರಿಟ್ಜ್
ನೂತನ ಶ್ರೇಯಾಂಕದಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್ ಭಾರೀ ಜಿಗಿತ ಕಂಡಿದ್ದಾರೆ . ಮೊದಲ ಬಾರಿಗೆ ಇಂಡಿಯನ್‌ ವೆಲ್ಸ್‌ ಪ್ರಶಸ್ತಿ ಗೆದ್ದ ಅವರು 13ನೇ ಸ್ಥಾನಿಯಾಗಿದ್ದಾರೆ . ಇಂಡಿಯನ್‌ ವೆಲ್ಸ್‌ ಫೈನಲ್‌ನಲ್ಲಿ 24 ವರ್ಷದ ಟೇಲರ್‌ ಫ್ರಿಟ್ಜ್ ಅಮೋಘ ಪ್ರದರ್ಶನ ನೀಡಿ ರಫೆಲ್‌ ನಡಾಲ್‌ ಅವರಿಗೆ ನೇರ ಸೆಟ್‌ಗಳ ಆಘಾತವಿಕ್ಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next