Advertisement

ಎಟಿಪಿ ಕಪ್‌ ಫೈನಲ್‌: ರಶ್ಯ-ಇಟಲಿ ಮುಖಾಮುಖೀ

01:38 AM Feb 07, 2021 | Team Udayavani |

ಮೆಲ್ಬರ್ನ್: ರವಿವಾರ ನಡೆಯಲಿರುವ “ಎಟಿಪಿ ಕಪ್‌’ ಟೆನಿಸ್‌ ಫೈನಲ್‌ನಲ್ಲಿ ರಶ್ಯ ಮತ್ತು ಇಟಲಿ ಮುಖಾಮುಖೀ ಆಗಲಿವೆ. ಶನಿವಾರದ ಮಹತ್ವದ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಮಣಿಸುವ ಮೂಲಕ ಡ್ಯಾನಿಲ್‌ ಮೆಡ್ವಡೇವ್‌ ರಶ್ಯವನ್ನು ಫೈನಲ್‌ಗೆ ಕೊಂಡೊಯ್ದರು.

Advertisement

ಗಾಯಾಳಾಗಿದ್ದ ಜ್ವೆರೇವ್‌ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿದ ಮೆಡ್ವಡೇವ್‌ 3-6, 6-3, 7-5 ಅಂತರದ ರೋಚಕ ಜಯ ಸಾಧಿಸಿದರು. ಮೊದಲ ಮುಖಾಮುಖೀಯಲ್ಲಿ ಆ್ಯಂಡ್ರೆ ರುಬ್ಲೇವ್‌ 3-6, 6-1, 6-2 ಅಂತರದಿಂದ ಜಾನ್‌ ಲೆನಾರ್ಡ್‌ ಸ್ಟ್ರಫ್ ವಿರುದ್ಧ ಗೆಲುವು ಸಾಧಿಸಿದ್ದರು.

ಇಟಲಿ ಪರ ಮ್ಯಾಟಿಯೊ ಬೆರೆಟಿನಿ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ ವಿರುದ್ಧ 6-3, 7-5 ಅಂತರದ ಮಹತ್ವದ ಗೆಲುವು ದಾಖಲಿಸಿದರು. ಇದಕ್ಕೂ ಮುನ್ನ ಫ್ಯಾಬಿಯೊ ಫೊಗಿನಿ 6-2, 1-6, 6-4ರಿಂದ ಪಾಬ್ಲೊ ಕರೆನೊ ಬುಸ್ಟ ಅವರನ್ನು ಮಣಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next