Advertisement

ಎಟಿಎಂಗಳಿಗೆ ಸೋಂಕು!

12:15 PM May 16, 2017 | Team Udayavani |

ಬೆಂಗಳೂರು: ರ್ಯಾನ್ಸಂವೇರ್‌ ವೈರಸ್‌ ಭೀತಿ ಐಟಿಬಿಟಿ ಕಂಪೆನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳನ್ನಷ್ಟೇ ಕಾಡುತ್ತಿಲ್ಲ ಬದಲಾಗಿ ಬ್ಯಾಂಕ್‌ಗಳಿಗೂ ಆತಂಕ ಮೂಡಿಸಿದೆ. ವೈರಸ್‌ ಸೋಂಕು ಎಟಿಎಂ ಕೇಂದ್ರಗಳಿಗೂ ತಟ್ಟುವ ಆತಂಕವಿರುವುದರಿಂದ ಬಹುತೇಕ ಎಟಿಎಂ ಕೇಂದ್ರಗಳು ಬಂದ್‌ ಆಗಿವೆ. ಹೀಗಾಗಿ ಜನ ಹಣ ಸಿಗದೆ ಪರದಾಡುತ್ತಿದ್ದಾರೆ. 

Advertisement

ಜಗತ್ತಿನ ಹಲವು ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನೇ ನಡುಗಿಸುತ್ತಿರುವ ರ್ಯಾನ್ಸಂವೇರ್‌ ವೈರಸ್‌ ದಾಳಿ ಭೀತಿ ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ತಲ್ಲಣ ಸೃಷ್ಟಿಸಿದೆ. ಸದ್ಯ ಬ್ಯಾಂಕಿಂಗ್‌ ಕ್ಷೇತ್ರದ ಬಹುತೇಕ ಎಟಿಎಂಗಳಲ್ಲಿ ವಿಂಡೋಸ್‌ ಎಕ್ಸ್‌ಪಿ ಹಾಗೂ ವಿಂಡೋಸ್‌ ವಿಸ್ತಾ ಸಾಫ್ಟ್ ವೇರ್‌ ಬಳಕೆಯಲ್ಲಿದೆ. ಇದನ್ನು ಹ್ಯಾಕ್‌ ಮಾಡುವುದು ಸುಲಭವೆಂಬ ಅಂಶ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಬ್ಯಾಂಕ್‌ಗಳಿಗೆ ಅಗತ್ಯ ಪ್ರಮಾಣದಲ್ಲಿ ಹಣ ಪೂರೈಕೆಯಾಗುತ್ತಿಲ್ಲ.

ರಾಜ್ಯದಲ್ಲಿ 14753 ಎಟಿಎಂ ಕೇಂದ್ರ ಹಾಗೂ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ 5913 ಎಟಿಎಂ ಕೇಂದ್ರಗಳಿದ್ದು, ಬಹುತೇಕ ಕಡೆ ಸೋಮವಾರ ಹಣ ಲಭ್ಯತೆ ಇರಲಿಲ್ಲ. ಇದರಿಂದ ಗ್ರಾಹಕರು ತಮ್ಮ ಉಳಿತಾಯ ಖಾತೆಯಿರುವ ಬ್ಯಾಂಕ್‌ಗಳಿಗೆ ತೆರಳಿ ಹಣ ಡ್ರಾ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಬ್ಯಾಂಕ್‌ಗಳ ಎಟಿಎಂ ವ್ಯವಸ್ಥೆಗೆ ವೈರಸ್‌ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಬ್ಯಾಂಕ್‌ಗಳು ಎಟಿಎಂ ಕೇಂದ್ರಗಳಿಗೆ ಸಾಮಾನ್ಯ ಸಂದರ್ಭದಲ್ಲಿ ಭರ್ತಿ ಮಾಡುವಷ್ಟು ಹಣವನ್ನು ಭರ್ತಿ ಮಾಡುತ್ತಿಲ್ಲ. ಏಕೆಂದರೆ ಹಣವನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿದ ಸಂದರ್ಭದಲ್ಲಿ ವೈರಸ್‌ ದಾಳಿ ನಡೆದರೆ ಇಡೀ ವ್ಯವಸ್ಥೆಗೆ ಹಾನಿಯಾಗುವ ಅಪಾಯವಿದೆ.

ಆ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಂಕ್‌ಗಳು ಎಟಿಎಂಗೆ ಹಣ ಭರ್ತಿ ಪ್ರಮಾಣ ಕಡಿಮೆ ಮಾಡಿರುವ ಸಾಧ್ಯತೆ ಇದೆ ಎಂದು ಪ್ರತಿಷ್ಠಿತನ ಬ್ಯಾಂಕ್‌ವೊಂದರ ಹಿರಿಯ ಅಧಿಕಾರಿಧಿಯೊಬ್ಬರು ತಿಳಿಸಿದ್ದಾರೆ. ಸಾಫ್ಟ್ವೇರ್‌ ಅಪ್‌ಡೇಟ್‌ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಈವರೆಗೆ ಸ್ಪಷ್ಟ ನಿರ್ದೇಶನ ಬಂದಿಲ್ಲ.

Advertisement

ಇನ್ನೊಂದೆಡೆ ಆರ್‌ಬಿಐನಿಂದ ಬ್ಯಾಂಕ್‌ಗಳಿಗೆ ಪೂರೈಕೆಧಿಯಾಗುವ ನೋಟುಗಳ ಪ್ರಮಾಣವೂ ಕಡಿಮೆ ಇದೆ. ಇದರಿಂದಾಗಿ ಎಲ್ಲ ಎಟಿಎಂಗಳಿಗೆ ಸಮಾನವಾಗಿ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಕಡೆ ಭಾರಿ ಪ್ರಮಾಣದಲ್ಲಿ ಹಣ ಭರ್ತಿ ಮಾಡಲು ಸಾಧ್ಯವಾಗಧಿದಂತಾಗಿದೆ. ಇವೆಲ್ಲಾ ತಾತ್ಕಾಲಿಕ ಸಮಸ್ಯೆಗಳಾಗಿದ್ದು, ಸದ್ಯದಲ್ಲೇ ನಿವಾರಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next