Advertisement

Madhya Pradesh: ಶಸ್ತ್ರಾಸ್ತ್ರ ಕಾರ್ಖಾನೇಲಿ  ಸ್ಫೋಟ: ಒಬ್ಬನ ಸಾವು

10:07 PM Oct 22, 2024 | Team Udayavani |

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಖಮರಿಯಾ ಎಂಬಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಯೊಂದರಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ ಸಿಬ್ಬಂದಿ ಮೃತಪಟ್ಟು 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ಜತೆಗೆ ಒಬ್ಬ ನಾಪತ್ತೆಯಾಗಿದ್ದು, ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆಯಲ್ಲಿ ರಷ್ಯಾದ ಕ್ಷಿಪಣಿ ಪರೀಕ್ಷೆ ನಡೆಯುತ್ತಿತ್ತು. ಗಾಯಗೊಂಡ 14 ಮಂದಿಯ ಪೈಕಿ 11 ಮಂದಿಗೆ ಕಾರ್ಖಾನೆಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next