ಹುಬ್ಬಳ್ಳಿ: ದೇಶದಲ್ಲಿ ಹಿಂದೂಗಳ ಭಾವನೆಗಳಿಗೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ. ಗೌರವ ಇದೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಇಂತಹ ಅನಿಸಿಕೆಗೆ ಕಾರ್ಯಸ್ವರೂಪ ದೊರೆಯುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಗೋಕುಲದ ಧಾರಾವತಿಯಲ್ಲಿ ಜೀರ್ಣೋದ್ಧಾರಗೊಂಡ ಆಂಜನೇಯ ದೇವಸ್ಥಾನ, ನಂದಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮನ ಜನ್ಮಸ್ಥಳಕ್ಕೆ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಮಹತ್ವದ ಸಂಕಲ್ಪ ಮಾಡಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಕಾಶಿಯಲ್ಲಿ ವಿಶ್ವನಾಥ ಮಂದಿರ ಸೇರಿದಂತೆ ಇಡೀ ವಾರಾಣಸಿ ಅಭಿವೃದ್ಧಿ, ಚಾರ್ ಧಾಮ ಅಭಿವೃದ್ಧಿ ಮಾಡಿರುವುದು ಅಧ್ಯಾತ್ಮಕ ಜಾಗೃತಿಯ ಪುನರುತ್ಥಾನವಾಗಿದೆ ಎಂದರು.
ಹನುಮನ ಪೂಜೆ ದೊಡ್ಡ ಶಕ್ತಿ ತಂದು ಕೊಡುತ್ತದೆ. ಧಾರಾವತಿಯ ಹುನುಮ ದೇವಸ್ಥಾನದ ಅಗತ್ಯ ಅಭಿವೃದ್ಧಿ ಕಾರ್ಯಗಲಿಗೆ ಸದಾ ಸಹಕಾರ ನೀಡುತ್ತೇವೆ. ದೇವಸ್ಥಾನದ ಜಾಗಕ್ಕೆ ಹೊಂದಿಕೊಂಡಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಹತ್ತು ಪಥ ರಸ್ತೆಯಾಗಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಮಂದಿರಕ್ಕೆ ಸಂಪರ್ಕ ರಸ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗೋಕುಲ ಹಾಗೂ ಶಿಗ್ಗಾಂವಿ ಜನರ ಆಶೀರ್ವಾದ ಹಾಗೂ ತೋರಿದ ಬೆಂಬಲ-ವಿಶ್ವಾಸವನ್ನು ಜೀವನದಲ್ಲೆಂದೂ ಮರೆಯಲಾರೆ. ರಾಜ್ಯದ ಜನತೆಯ ಸೇವೆಗೆ ಅವಕಾಶ ಸಿಕ್ಕಿದ್ದು ನಿಮ್ಮಿಂದಲೇ. ನೀವು ನನ್ನ ಮೇಲೆ ಇರಿಸಿದ ಭರವಸೆ, ವಿಶ್ವಾಸಕ್ಕೆ ಚ್ಯುತಿಯಾಗದ ರೀತಿಯಲ್ಲಿ ಕೆಲಸ ಮಾಡುತ್ತೇನೆಂದು ಹುನಮನ ಜಾಗದಲ್ಲಿ ನಿಂತು ಹೆಮ್ಮೆಯಿಂದ ಹೇಳುವೆ. ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ತೋರುವೆ ಎಂದು ಹೇಳಿದರು.
ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಮಾತನಾಡಿ, ಧಾರಾವತಿ ಹನುಮನ ಸ್ಥಳಕ್ಕೆ ಅನೇಕ ಭಕ್ತರು ಬರುತ್ತಿದ್ದು, ಹೊರಗಿನ ಭಕ್ತರು ತಂಗಲು ಯಾತ್ರಿ ಭವನ ಮಂಜೂರು ಮಾಡಬೇಕು. ಇಲ್ಲಿನ ಸುತ್ತಮುತ್ತಲ ಬಡಾವಣೆಗಳು ಅಕ್ರಮವಾಗಿದ್ದು, ಅವುಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಮುಖಂಡರಾದ ಅನಿಲ್‌ಕುಮಾರ ಪಾಟೀಲ, ಪ್ರಕಾಶ ಕ್ಯಾರಕಟ್ಟಿ, ರಾಜಣ್ಣ ಕೊರವಿ, ರಜತ್ ಉಳ್ಳಾಗಡ್ಡಿಮಠ, ಮಹಾದೇವಪ್ಪ ಪೂಜಾರ, ಮಲ್ಲಿಕಾರ್ಜುನ ಹೊರಕೇರಿ, ಬಸವ ನಾಯ್ಕರ್, ರಾಮಣ್ಣ ಉಣಕಲ್ಲ ಇನ್ನಿತರರಿದ್ದರು. ಶಾಸಕ ಅರವಿಂದ ಬೆಲ್ಲದ ಪ್ರಾಸ್ತಾವಿಕ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಮಾಯಣ ಸರ್ಕ್ಯುಟ್ ರೈಲು ಆರಂಭಿಸಿದ್ದು, ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ತೆರಳುವ ಈ ರೈಲು ಹನುಮನ ಜನ್ಮಸ್ಥಳ ಅಂಜನಾದ್ರಿ ಸಮೀಪದ ಹೊಸಪೇಟೆಗೂ ಬರುತ್ತದೆ. –
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ