ನವದೆಹಲಿ: ಹೊಸದಾಗಿ ಉದ್ಯೋಗ ಸೃಷ್ಟಿ ಮಾಡುವ ಸಲುವಾಗಿ ರೂಪಿಸಲಾ ಗಿರುವ ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆಗೆ 22,810 ಕೋಟಿ ರೂ. ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಹೊಸದಾಗಿ ಉದ್ಯೋಗ ನೀಡುವ ಉದ್ಯಮ ಗಳು ಮತ್ತು ಸಂಸ್ಥೆಗಳಲ್ಲಿನ ಉದ್ಯೋಗಿಗಳು ಮತ್ತು ಉದ್ಯೋಗದಾತರ ಪಾಲಿನ ಪಿಎಫ್ ನಿಧಿಯನ್ನು 2 ವರ್ಷಗಳ ಕಾಲ ಸರ್ಕಾರವೇ ಭರಿಸಲಿದೆ. 2023ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿ ಇರಲಿದ್ದು, 58.5 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ.
ಈ ಯೋಜನೆಯ ಮೊದಲ ಹಂತ ವನ್ನು ನ.12ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ಗೊಳಿಸಿದ್ದರು. ಈಗ 3ನೇ ಹಂತದ ಯೋಜನೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷಕ್ಕಾಗಿ 1,584 ಕೋಟಿ ರೂ. ಬಿಡುಗಡೆಯಾಗಿದೆ.
ಪಿಎಂ ವಾಣಿಗೆ ಒಪ್ಪಿಗೆ: ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಸೇವೆ ನೀಡುವ ಪ್ರಧಾನಮಂತ್ರಿ ವಾಣಿ ವ್ಯವಸ್ಥೆಗೆ ಸಂಪುಟ ಒಪ್ಪಿಗೆ ನೀಡಿದೆ. ದೇಶದಲ್ಲಿ ಸಾರ್ವಜನಿಕ ವೈಫೈ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಯೋಜನೆ ಮೂಲಕ ದೇಶದಲ್ಲಿ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಈ ಯೋಜನೆ ಕ್ರಾಂತಿ ತರಲಿದೆ. ಪಬ್ಲಿಕ್ ಡೇಟಾ ಆಫೀಸಸ್(ಪಿಡಿಓಗಳು), ಪಬ್ಲಿಕ್ ಡೇಟಾ ಆಫೀಸ್ ಅಗ್ರಿಗೇಟರ್ಸ್ (ಪಿಡಿಓಎಎಸ್) ಮತ್ತು ಆ್ಯಪ್ ಪ್ರೊವೈಡ ರ್‌ಗಳು ಯಾವುದೇ ಪರವಾನಗಿ ಇಲ್ಲದೇ ವೈಫೈ ಸೇವೆ ನೀಡಬಹುದಾಗಿದೆ. ಅಲ್ಲದೆ, ದೇಶಾದ್ಯಂತ ಪಬ್ಲಿಕ್ ಡೇಟಾ ಸೆಂಟರ್‌ಗಳನ್ನು ತೆರೆಯಲೂ ಇದು ಅನುವು ಮಾಡಿಕೊಡುತ್ತದೆ ಎಂದು ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.