Advertisement
ಇಲ್ಲಿಯವರೆಗೆ ಕಂಠೀರವದಲ್ಲಿ ಫುಟ್‌ಬಾಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದೊಂದಿಗೆ ಜಿಂದಾಲ್ ಕಂಪನಿ 3 ವರ್ಷದವರೆಗೆ ಅನುಮತಿ ಪಡೆದುಕೊಂಡಿತ್ತು. ಇದು ಮೇ ತಿಂಗಳಿಗೆ ಮುಗಿದಿದೆ. ಆದರೆ ಜಿಂದಾಲ್‌ನೊಂದಿಗೆ ಸರ್ಕಾರ ಮತ್ತೆ ಒಪ್ಪಂದ ಮುಂದುವರಿಸುತ್ತದೆ ಎಂಬ ಅನುಮಾನ ಅಥ್ಲೀಟ್‌ಗಳಿಗೆ ಶುರುವಾಗಿದೆ. ಇದಕ್ಕೆ ಅಥ್ಲೀಟ್‌ಗಳು ಸುತಾರಾಂ ಒಪ್ಪುತ್ತಿಲ್ಲ.
Related Articles
ತಮ್ಮ ದೈನಂದಿನ ಅಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ದೂರಿದ್ದರು. ಆ ಬಳಿಕ ಫುಟ್‌ಬಾಲ್ ಕೂಟದಿಂದಾಗಿ ದಿನನಿತ್ಯ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿ ಬಂದಿದ್ದವು. ಪ್ರತಿಭಟನೆಗಳು ಕೂಡ ನಡೆದ ಉದಾಹರಣೆ ಇದೆ.
Advertisement
600 ಅಥ್ಲೀಟ್‌ಗಳಿಗೆ ಫುಟ್‌ಬಾಲ್‌ನಿಂದ ಅಭ್ಯಾಸಕ್ಕೆ ತೊಂದರೆಕಂಠೀರವದೊಂದಿಗಿನ ಒಪ್ಪಂದವನ್ನು ಮುಂದುವರಿಸಿ ಎಂದು ಜಿಂದಾಲ್ ಕಂಪನಿ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನು ವಿರೋಧಿಸಿ ಕರ್ನಾಟಕ ಅಥಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ರೈ, ಮಾಜಿ ಅಥ್ಲೀಟ್‌ಗಳಾದ
ಉದಯ್ ಪ್ರಭು, ಪ್ರಮೀಳಾ ಅಯ್ಯಪ್ಪ, ಅರ್ಜುನ ಪುರಸ್ಕೃತ ಎಸ್.ಡಿ.ಈಶನ್ ಹಾಗೂ ಕೋಚ್ ಗಾಂವ್ಕರ್ ಒಳಗೊಂಡ ತಂಡ ಕ್ರೀಡಾ ಸಚಿವರನ್ನು ಮಂಗಳವಾರ ಭೇಟಿಯಾಗಿ ಪ್ರತಿ ಮನವಿ ಸಲ್ಲಿಸಿದೆ. ಮನವಿಯ ಸಾರಾಂಶ: “ಕಂಠೀರವದಲ್ಲಿ 600ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ದಿನನಿತ್ಯ ಬೆಳಗ್ಗೆ,
ಸಂಜೆ ಅಭ್ಯಾಸ ನಡೆಸುತ್ತಾರೆ. ಆಗಾಗ್ಗೆ ಇಲ್ಲಿ ಫುಟ್ ಬಾಲ್ ಕೂಟಗಳು ನಡೆಯುತ್ತಿದ್ದರೆ ಅಭ್ಯಾಸ ನಡೆಸಲು
ಅಡ್ಡಿಯಾಗುತ್ತದೆ. ಫುಟ್‌ಬಾಲ್ ಪಂದ್ಯ ನಡೆಯುವ ಸ್ಥಳಕ್ಕೆ ಸಮೀಪವಾಗಿ ಜಾವೆಲಿನ್ ಥ್ರೋ, ಎತ್ತರ ಜಿಗಿತ,
ಉದ್ದಜಿಗಿತ ಅಭ್ಯಾಸ ನಡೆಸಬೇಕು. ಫುಟ್‌ಬಾಲ್ ಅಭ್ಯಾಸ ನಡೆಸುತ್ತಿದ್ದಾಗ ಜಾವೆಲಿನ್ ಎಸೆದರೆ ಅದು
ನೇರವಾಗಿ ಫುಟ್‌ಬಾಲಿಗರು ಅಭ್ಯಾಸ ನಡೆಸುವ ಸ್ಥಳಕ್ಕೇ ಹೋಗಿ ಬೀಳುತ್ತದೆ. ಹೀಗಾದರೆ ಅಭ್ಯಾಸ ಹೇಗೆ?
ಇದರಿಂದ ಜಾವೆಲಿನ್, ಹೈಜಂಪ್, ಹ್ಯಾಮರ್ ಥ್ರೋ, ಡಿಸ್ಕಸ್‌ನಲ್ಲಿ ನಮಗೆ ಪದಕಗಳ ಸಂಖ್ಯೆ ಕಡಿಮೆ ಆಗಿದೆ. ಜತೆಗೆ ಮುಂದಿನ ಏಷ್ಯಾಡ್, ಕಾಮನ್ವೆಲ್ತ್ ಕೂಟಗಳಿವೆ. ಇದಕ್ಕೆಲ್ಲ ನಾವು ಸಿದ್ಧರಾಗಬೇಕಿದೆ. ಹೀಗಾಗಿ ದಯವಿಟ್ಟು
ಜಿಂದಾಲ್‌ನೊಂದಿಗೆ ಒಪ್ಪಂದ ನವೀಕರಿಸಬಾರದು’ ಎನ್ನುವುದು ಹಿರಿಯ ಅಥ್ಲೀಟ್‌ಗಳ ಮನವಿ. ಕಂಠೀರವ ಬಿಟ್ಟು ನಮಗೆ ಬೇರೆಆಯ್ಕೆಯಿಲ್ಲ: ಜಿಂದಾಲ್ ಮೂಲಗಳು
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇನ್ನೂ ನವೀಕರಣ ಕೆಲಸ ಆರಂಭವಾಗಿಲ್ಲ. ಅಲ್ಲೇ ನೀವು ಪಂದ್ಯ ನಡೆಸಿಕೊಂಡು ಹೋಗಬಹುದು? ಹೀಗಿದ್ದರೂ ನೀವು ಕಂಠೀರವ ಕ್ರೀಡಾಂಗಣ ಕೇಳುತ್ತಿರುವುದು ಏಕೆ? ಈ ಪ್ರಶ್ನೆಗೆ ಜಿಂದಾಲ್‌ನ ಫುಟ್‌ಬಾಲ್ ಮೂಲಗಳು ಪ್ರತಿಕ್ರಿಯೆ ಭಿನ್ನವಾಗಿದೆ. ಅಥ್ಲೀಟ್‌ಗಳಿಗೆ ತೊಂದರೆ ಮಾಡಬೇಕು ಎನ್ನುವ ಉದ್ದೇಶ ನಮಗಿಲ್ಲ. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣ ಎಎಫ್ಸಿ (ಏಷ್ಯನ್ ಫಟ್‌ಬಾಲ್ ಒಕ್ಕೂಟ) ಮಾನದಂಡದಂತೆ ಇಲ್ಲ. ಒಂದು ಕೂಟ ಆಯೋಜಿಸಲು ಕೆಲ ಮೂಲ ಸೌಕರ್ಯ ವ್ಯವಸ್ಥೆ ಇರಬೇಕು. ಅದು ಅಲ್ಲಿ ಇಲ್ಲ. ಹೀಗಾಗಿ ಕಂಠೀರವದಲ್ಲಿ ಕೂಟ ನಡೆಸಬೇಕಿರುವ ಅನಿವಾರ್ಯತೆ ನಮ್ಮ ಮುಂದಿದೆ. ಒಂದು ವೇಳೆ ಇದಕ್ಕೆ ಅವಕಾಶ ಸಿಗದಿದ್ದರೆ ಬೆಂಗಳೂರು ಎಫ್ಸಿ ತಂಡದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಅಥ್ಲೀಟ್‌ಗಳಿಗೆ ತೊಂದರೆಯಾಗದಂತೆ
ಕ್ರಮ: ಪ್ರಮೋದ್ ಮಧ್ವರಾಜ್
ಜೆಎಸ್‌ಡಬ್ಲೂé,ಅಥ್ಲೀಟ್‌ಗಳ ನಡುವಿನ ಗುದ್ದಾಟದ ಕುರಿತಂತೆ ಉದಯವಾಣಿಗೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್
ಪ್ರತಿಕ್ರಿಯಿಸಿದ್ದಾರೆ. ಅಥ್ಲೀಟ್‌ಗಳ ಜತೆ ಸಭೆ ನಡೆಸಿದ್ದೇನೆ. ಕೆಲ ಹಿರಿಯ ಅಥ್ಲೀಟ್ ಗಳು ಬಂದು ಇಲ್ಲಿನ ಸಮಸ್ಯೆ ಬಗ್ಗೆ
ನನ್ನ ಗಮನಕ್ಕೆ ತಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಥ್ಲೀಟ್‌ಗಳಿಗೆ ತೊಂದರೆಯಾಗುವ ಯಾವ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. – ಹೇಮಂತ್ ಸಂಪಾಜೆ