Advertisement

3 ತಿಂಗಳಲ್ಲಿ ಕೆ.ಎಲ್‌. ರಾಹುಲ್‌- ಅಥಿಯಾ ಶೆಟ್ಟಿ ವಿವಾಹ?

08:28 AM Jul 13, 2022 | Team Udayavani |

ಮುಂಬಯಿ: ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಮತ್ತು ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ ಇನ್ನು ಮೂರು ತಿಂಗಳಲ್ಲಿ ವಿವಾಹವಾಗಲಿದ್ದಾರೆಯೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ. ಇದನ್ನು ಅಥಿಯಾ ತಂದೆ ಸುನೀಲ್‌ ಶೆಟ್ಟಿ ನಿರಾಕರಿಸಿ, ಆ ಬಗ್ಗೆ ಯಾವುದೇ ಅಂತಿಮ ತೀರ್ಮಾನಗಳಾಗಿಲ್ಲ ಎಂದು ಹೇಳಿದ್ದಾರೆ.

Advertisement

“ಇಂಡಿಯಾ ಟುಡೇ’ ವರದಿ ಪ್ರಕಾರ, ರಾಹುಲ್‌ ಅವರ ಅಪ್ಪ ಅಮ್ಮ, ಅಥಿಯಾ ಪೋಷಕರೊಂದಿಗೆ ಮಾತನಾಡಲು ಇತ್ತೀಚೆಗೆ ಮುಂಬಯಿಗೆ ತೆರಳಿದ್ದರಂತೆ. ರಾಹುಲ್‌-ಅಥಿಯಾ ಇತ್ತೀಚೆಗೆ ಮನೆಯೊಂದನ್ನು ಜಂಟಿಯಾಗಿ ಕೊಂಡಿದ್ದಾರೆ. ಮದುವೆ ಬಳಿಕ ಅಲ್ಲೇ ಇರುತ್ತಾರೆ ಎನ್ನಲಾಗಿದೆ. ಈ ಜೋಡಿ ಇತ್ತೀಚೆಗೆ ಜರ್ಮನಿಗೆ ತೆರಳಿದೆ. ರಾಹುಲ್‌ ಅಲ್ಲೇ ಚಿಕಿತ್ಸೆ ಪಡೆದಿದ್ದಾರೆ.

ಈ ಜೋಡಿ ಆಗಾಗ ಒಟ್ಟಿಗಿರುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಲೇ ಇವೆ. ಅಥಿಯಾ ಅವರು ರಾಹುಲ್‌ ಜತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಟಗಳಿಗೂ ತೆರಳಿದ್ದಾರೆ. ಅಥಿಯಾ ಸಹೋದರ ಅಹನ್‌ ಶೆಟ್ಟಿ ಅವರ “ತಡಪ್‌’ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next