Advertisement
ನಾಲ್ಕು ದಿನಗಳಲ್ಲಿ ಪುತ್ಥಳಿ ಮರುಸ್ಥಾಪನೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಸತ್ಯಪ್ಪ ಬಾಗೆನ್ನವರ ಆಗ್ರಹಿಸಿದರು. ಪ್ರಶಾಂತ ಪೂಜೇರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರಾಯಣ್ಣನ ಮೂರ್ತಿ ಸ್ಥಾಪನೆಯ ಭರವಸೆ ಕೊಟ್ಟಿದ್ದಾರೆ. ತಹಶೀಲ್ದಾರ್ ಕೂಡಲೇ ಸರ್ಕಾರಕ್ಕೆ ಮನವಿ ಪತ್ರ ರವಾನಿಸಬೇಕು ಎಂದರು.
Related Articles
Advertisement
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಅಪ್ಪಾಸಾಹೇಬ ಮಳಮಳಶಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ್ದು ಖಂಡನೀಯ. ಬರುವ 8 ದಿನಗಳಲ್ಲಿ ಪ್ರತಿಮೆ ಮರು ಸ್ಥಾಪನೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಅಭಿಮಾನಿಗಳು ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಂಬಗಿ ಮಠದ ಮುಖ್ಯಸ್ಥ ಸುರೇಶ ಮಹಾರಾಜ ಮಾತನಾಡಿ, ಪ್ರತಿಮೆ ತೆರವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಯಣ್ಣನಿಗೆ ಅವಮಾನ. ಪ್ರತಿಮೆ ತೆರವುಗೊಳಿಸಿದ ಸ್ಥಳದಲ್ಲಿಯೇ ಪುನರ್ ಸ್ಥಾಪಿಸಬೇಕು ಎಂದರು.
ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಸಂಚಾಲಕ ಶಿವಾನಂದ ನವಿನಾಳ್ ಮಾತನಾಡಿ, ಸಂಗೊಳ್ಳಿ ರಾಯಣ್ಣನನ ಪ್ರತಿಮೆ ತವರು ಜಿಲ್ಲೆಯಲ್ಲಿ ತೆರವುಗೊಳಿಸಿದ್ದು ಖಂಡನೀಯ. 8 ದಿನಗಳಲ್ಲಿ ಅದೇ ಸ್ಥಳದಲ್ಲೇ ಪ್ರತಿಮೆ ಸ್ಥಾಪಿಸದಿದ್ದರೆ ಕಾಗವಾಡದ ಕರವೇ ಎರಡು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಸಂಚಾಲಕ ಸದಾಶಿವ ಪೂಜಾರಿ, ಚಂದ್ರಶೇಖರ ಕುರಿ, ತಾಲೂಕು ನಿರ್ದೇಶಕರಾದ ರಾವಸಾಬ ಜುಗಳೆ, ಸಂತೋಷ ಖನ್ನಿಕೂಡೆ, ರಾಜು ಬಾಗಿ, ಅನಿಲ್ ಮಾಲಗಾಂವೆ, ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕಾಧ್ಯಕ್ಷ ಚೇತನ ಪಾಟೀಲ, ಉಪಾಧ್ಯಕ್ಷ ರಾಜು ಪಾಟೀಲ, ಕಾರ್ಯದರ್ಶಿ ರೀಷಿ ಬಸ್ತವಾಡೆ, ಸಚಿನ ಕುರುಂದವಾಡೆ, ಶಿವಾನಂದ ನವಿನಾಳ್, ನಾರಾಯಣ ಬಣದ ಕರವೇ ಅಧ್ಯಕ್ಷ ಸಿದ್ದು ಒಡೆಯರ, ಉಪಾಧ್ಯಕ್ಷ ಗಣೇಶ ಕೋಳೆಕರ, ಪ್ರವೀಣ ಪಾಟೀಲ, ಫಾರುಕ್ ಅಲಾಸಕರ, ಅನಿಲ್ ಚಿಕ್ಕಲಗೆ ಇದ್ದರು.