Advertisement
ಅಥಣಿ ಶಿವಯೋಗಿಗಳು ಪ್ರತಿಯೊಬ್ಬರಲ್ಲೂ ದೇವರನ್ನ ಕಂಡವರು. ಅಥಣಿ ಮಠವನ್ನು ಕಾಯಕ-ದಾಸೋಹ- ಸಮಾನತೆಯ ಮಠವನ್ನಾಗಿ ಪರಿವರ್ತಿಸಿದ ಮಹಾನ್ ಪರಿವರ್ತನೆಯ ಹರಿಕಾರರು ಎಂದು ತಿಳಿಸಿದರು. ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳು ಪ್ರತಿ ದಿನ ಶಿವಯೋಗ ಮಾಡುವ ಮೂಲಕ ಮಹಾನ್ ಶಿವಯೋಗಿಗಳಾದವರು. ಅವರಲ್ಲಿ ಬೇಡಿ ಬಂದವರ ಸಮಸ್ಯೆಗೆ ಪರಿಹಾರ ನೀಡಿದವರು.
Related Articles
Advertisement
ತಂದೆ-ತಾಯಂದಿರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಬೇಕು ಎಂದು ತಿಳಿಸಿದರು. ಸನ್ಮಾನ ಸೀÌಕರಿಸಿದ 2014ನೇ ಸಾಲಿನ 7ನೇ ರ್‍ಯಾಂಕ್ ವಿಜೇತ ಪ್ರಿಯದರ್ಶಿನಿ ಸಾಣಿಕೊಪ್ಪ ಮಾತನಾಡಿ, ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಪಡೆಯುತ್ತಿರುವ 42ನೇ ಸನ್ಮಾನ ತಮಗೆ ತುಂಬಾ ಖುಷಿ ತಂದಿದೆ. ನಾನು 9ನೇ ತರಗತಿಯಿಂದಲೇ ಶಿವಯೋಗದಲ್ಲಿ ತೊಡಗಿಸಿಕೊಂಡಿದ್ದರಿಂದ ಇಷ್ಟೆಲ್ಲಾ ಸಾಧನೆಗೆ ಕಾರಣವಾಯಿತು.
ಶಿವಯೋಗ ಎನ್ನುವುದು ಯಾವುದೇ ಜಾತಿ, ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಅದೊಂದು ವೈಜ್ಞಾನಿಕ ಮಾರ್ಗ. ಪ್ರತಿ ದಿನ ಶಿವಯೋಗ ಮಾಡಿದ್ದರ ಫಲವಾಗಿಯೇ ದಿನಕ್ಕೆ 16-18 ಗಂಟೆ ನಿರಂತರವಾಗಿ ಓದಲಿಕ್ಕೆ ಸಾಧ್ಯವಾಯಿತು. ತಮ್ಮ ಸಾಧನೆಗೆ ಬಸವತತ್ವವೇ ಕಾರಣ ಎಂದು ತಿಳಿಸಿದರು.
ಇಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿ ಏನೇ ಆಗಿರಲಿ ಮೊದಲು ಮಾನವೀಯತೆಯುಳ್ಳವರಾಗಿರಬೇಕು. 2016ರ ಸಮೀಕ್ಷೆ ಪ್ರಕಾರ ದೇಶದಲ್ಲಿ 68 ಸಾವಿರ ವೃದ್ಧಾಶ್ರಮ ಇವೆ. ಅವುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹವರು ಉನ್ನತ ಹುದ್ದೆ, ಅಧಿಕಾರದಲ್ಲಿದ್ದಂತಹವರ ತಂದೆ-ತಾಯಿ ಎಂಬುದು ನಿಜಕ್ಕೂ ಆತಂಕ ಪಡಬೇಕಾದ ವಿಚಾರ. ಏನೇ ಆಗಲಿ ಮಾನವೀಯತೆ ಮರೆಯಬಾರದು ಎಂದರು.
ಶ್ರೀ ಹಾಲಸ್ವಾಮಿ, ಶ್ರೀ ಬಸವ ಕೇತೇಶ್ವರ ಸ್ವಾಮೀಜಿ, ಡಾ| ಜಿ.ಸಿ. ಬಸವರಾಜ್, ಪಲ್ಲಾಗಟ್ಟೆ ಕೊಟ್ರೇಶ್, ಜೆ. ಸೋಮನಾಥ್ ಇತರರು ಇದ್ದರು. ಬಸವ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. ದಮಯಂತಿಗೌಡ ಸ್ವಾಗತಿಸಿದರು. ಶಿವಕುಮಾರ್ ನಿರೂಪಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.