Advertisement

ಮೋದಿ ನವಭಾರತ ರೂಪಿಸಬಲ್ಲರು : ರತನ್‌ ಟಾಟಾ ವಿಶ್ವಾಸ

07:06 PM Sep 20, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹುವಾಗಿ ಪ್ರಶಂಸಿಸಿರುವ “ಟಾಟಾ ಸನ್ಸ್‌’ ಸಮೂಹದ ಅಧ್ಯಕ್ಷ ರತನ್‌ ಟಾಟಾ ಅವರು, “ಮೋದಿ ಅವರಿಗೆ ಭಾರತವನ್ನು ರೂಪಾಂತರಿಸುವ ಅವಕಾಶ ನೀಡಬೇಕು, ಏಕೆಂದರೆ ಅವರು ನವಭಾರತ ನಿರ್ಮಾಣದ ದೃಷ್ಟಾರತೆಯನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ. 

Advertisement

ಸಿಎನ್‌ಬಿಸಿ ಟಿವಿ 18 ವಾಣಿಜ್ಯ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರತನ್‌ ಟಾಟಾ ಅವರು ಪ್ರಧಾನಿ ಮೋದಿ ಅವರ ಅತ್ಯಂತ ತ್ವರಿತ ಗತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬಹುವಾಗಿ ಪ್ರಶಂಸಿಸಿದರು. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ನಾನು ಅವರ ಕಾರ್ಯ ವೈಖರಿ, ಆಡಳಿತ ದಕ್ಷತೆಗಳನ್ನು ಗಮನಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿದರು 

ಟಾಟಾ ನ್ಯಾನೋ ಕಾರ್‌ ಫ್ಯಾಕ್ಟರಿಯನ್ನು ಪಶ್ಚಿಮ ಬಂಗಾಲದಿಂದ ಗುಜರಾತ್‌ಗೆ ಸ್ಥಳಾಂತರಿಸುವುದಕ್ಕೆ ಕೇವಲ ಮೂರು ದಿನಗಳಲ್ಲಿ ಅಗತ್ಯವಿದ್ದ ಭೂಮಿಯನ್ನು ನೀಡಿ ನೆರವಾದ ಮೋದಿಯನ್ನು ರತನ್‌ ಟಾಟಾ ಕೃತಜ್ಞತೆಯಿಂದ ಸ್ಮರಿಸಿಕೊಂಡರು. 

“ಪ್ರಧಾನಿ ಮೋದಿ ಅವರು ಭಾರತಕ್ಕೆ ಮತ್ತು ಭಾರತದ ಜನರಿಗೆ “ನವಭಾರತ’ದ ಕೊಡುಗೆ ನೀಡುವುದಾಗಿ ಹೇಳಿದ್ದಾರೆ. ಆದುದರಿಂದ ನಾವು ಅದಕ್ಕಾಗಿ ಅವರಿಗೊಂದು ಅವಕಾಶ ನೀಡಬೇಕು. ಮೋದಿ ಭಾರತವನ್ನು ಹೊಸದಾಗಿ ಕಾಣುವ ಸಾಮರ್ಥ್ಯ ಮತ್ತು ನವೋನ್ಮೆàಷತೆಯನ್ನು ಹೊಂದಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತವು ನವಭಾರತವಾಗಿ ರೂಪುಗೊಳ್ಳುವ ವಿಶ್ವಾಸ ಮತ್ತು ಆಶಾವಾದವನ್ನು ನಾನು ಹೊಂದಿದ್ದೇನೆ’ ಎಂದು ರತನ್‌ ಟಾಟಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next