ವಿಜಯಪುರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಇಂದು ನಗರದಲ್ಲಿ ಅವರ ಹೆಸರಿನ ರಸ್ತೆ ಉದ್ಘಾಟನೆಗೆ ವೇದಿಕೆ ಸಿದ್ಧವಾಗಿದೆ.
ವಿಜಯಪುರ ನಗರದ ಕಿರಾಣಾ ಬಜಾರ ಬಳಿ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಅಟಲ್ ಮೂರ್ತಿ ಲೋಕಾರ್ಪಣೆ ಮಾಡಲಿದ್ದಾರೆ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ.
ರಸ್ತೆಯನ್ನು ಕೇಸರಿ ಪತಾಕೆಗಳಿಂದ ಸಿಂಗರಿಸಲಾಗಿದ್ದು, 6 ಅಡಿ ಎತ್ತರದ ಕಟ್ಟೆಯ ಮೇಲೆ 6 ಅಡಿ ಎತ್ತರದ 400 ಕೆಜಿ ತೂಕದ ವಾಜಪೇಯಿ ಅವರ ಕಂಚಿನ ಮೂರ್ತಿ ಲೋಕಾರ್ಪಣೆಗೆ ಸಿದ್ಧವಾಗಿದೆ.
ಇದನ್ನೂ ಓದಿ:ಇಂದು ಉತ್ತಮ ಆಡಳಿತ ದಿನ: ದೇಶದ ಭವಿಷ್ಯಕ್ಕೆ ಭಾಷ್ಯ ಬರೆದ ಅಟಲ್
ರಾಜಸ್ಥಾನದ ಜೈಪುರದಲ್ಲಿ ಈ ಮೂರ್ತಿ ನಿರ್ಮಾಣಕ್ಕೆ 6.50 ಲಕ್ಷ ರೂ. ವೆಚ್ಚವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿರುವ ಕಟ್ಟೆ 2.80 ಲಕ್ಷ ರೂ. ಖರ್ಚಾಗಿದೆ. ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ, ಈಗ ವಿಜಯಪುರ ನಗರ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಇದರ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ.
ಉತ್ತರ ಪ್ರದೇಶದ ಲಖನೌ ನಗರದಲ್ಲಿರುವ ವಾಜಪೇಯಿ ಮೂರ್ತಿಯ ಬಳಿಕ ದೇಶದಲ್ಲೇ 2ನೇ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆ ಹೊಂದಿದೆ.