Advertisement

ಕಾಸರಗೋಡಿನವರ ಪ್ರೀತಿಗೆ ಪಾತ್ರರಾಗಿದ್ದ ಅಟಲ್‌ಜಿ

06:00 AM Aug 18, 2018 | Team Udayavani |

ಕುಂಬಳೆ: ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್‌ಬಿಹಾರಿ ವಾಜಪೇಯಿಯವರು ದೇವರ ಸ್ವಂತ ನಾಡು ಕೇರಳವನ್ನೂ ಪ್ರೀತಿಸುತ್ತಿದ್ದರು. 1967 ರಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಜರಗಿದ ಜನಸಂಘದ ಅಧಿವೇಶನದ ಬಳಿಕ ಪಕ್ಷದ ಪ್ರಚಾರಕ್ಕಾಗಿ ಅನೇಕ ಬಾರಿ ಕೇರಳಕ್ಕೆ ಆಗಮಿಸಿದ್ದರು. ಕಳೆದ 2000ರಲ್ಲಿ ಪಂಚಕರ್ಮ ಚಿಕೆತ್ಸೆಗಾಗಿ ಕೇರಳದಲ್ಲಿ ಒಂದುವಾರತಂಗಿದ್ದರು. ಚಿಕಿತ್ಸೆಯಿಂದ ಮತ್ತು ಇಲ್ಲಿನ ವಾತಾವರಣದಿಂದ ಉಲ್ಲಸಿತನಾಗಿರುವೆನೆಂದಿದ್ದರು. 

Advertisement

ಕಾಸರಗೋಡಿಗೂ ಹಲವುಬಾರಿ ಬಂದಿದ್ದರು. ಕಾಸರಗೋಡಿಗೆ ಪ್ರಥಮವಾಗಿ ಆಗಮಿಸಿದಾಗ ಸ್ಥಳೀಯ ವಿನಾಯಕ ಕಾಮತ್‌ ರವರ ಮನೆಯಲ್ಲಿ ತಂಗಿದ್ದರು. ಜನಸಂಘದ ಪ್ರಚಾರಕ್ಕಾಗಿ 1972ರಲ್ಲಿ ಜನಸಂಘ ಮತ್ತು ಬಿ.ಜೆ.ಪಿ. ಪ್ರಚಾರಕ್ಕೆ 1982ರಲ್ಲಿ ಕಾಸರಗೋಡಿಗೆ ಆಗಮಿಸಿ ತಮ್ಮ ಅಸ್ಖಲಿತ ಭಾಷಣದಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದ್ದರು.1977ರಲ್ಲಿ ಕೇಂದ್ರ ಜನತಾ ಸರಕಾರದ ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶ ಸಚಿವರಾಗಿದ್ದ ಅಟಲ್‌ಜಿಯವರು ಕಾಞಂಗಾಡಿಗೆ ಆಗಮಿಸಿದ್ದರು. 1987ರಲ್ಲಿ ಕುಂಬಳೆ ಗಾಂಧಿ ಮೈದಾನದಲ್ಲಿ ಜರಗಿದ ಪಕ್ಷದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಶಹಬ್ಟಾಸ್‌ ಎನಿಸಿದ್ದರು.

ಅಂದು ಇವರ ಭಾಷಣವನ್ನು ಕೇಳಲು ಇತರ ಪಕ್ಷದವರೂ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದರು.ಆ ಬಳಿಕ ಈ ಮೈದಾನದಲ್ಲಿ ನಡೆದ ಯಾವ ರಾಜಕೀಯ ಪಕ್ಷದ ನಾಯಕರ ಭಾಷಣಕ್ಕೂ ಇಷ್ಟು ಜನ ಸೇರಿಲ್ಲವಂತೆ. ಆ ದಿನ ಮಧ್ಯಾಹ್ನ ಕಾಸರಗೋಡಿನ ಕೆ. ವಿಶ್ವನಾಥ ಕಾಮತ್‌ ಅವರ ಮನೆಯಲ್ಲಿ ಭೋಜನ ಸ್ವೀಕರಿಸಿ ಕುಂಬಳೆಗೆ ಆಗಮಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ರಾತ್ರಿ ಕುಂಬಳೆಯ ಅವಿಭಕ್ತ ಕುಟುಂಬವಾಗಿದ್ದ ಕೃಷ್ಣದಾಸ್‌ ಜೋಷಿಯವರ ಮನೆಯಲ್ಲಿ ರಾತ್ರಿ ನಾಯಕರ ಮತ್ತು ಕಾರ್ಯಕರ್ತರೊಂದಿಗೆ ಭೋಜನ ಸ್ವೀಕರಿಸಿ ಮಂಗಳೂರಿಗೆ  ತೆರಳಿದ್ದರು. 

ಈ ಮಹಾನ್‌ ನಾಯಕ ಜಿಲ್ಲೆಗೆ ಆಗಮಿಸಿದಾಗ  ಪಕ್ಷದ ನಾಯಕರಾದ   ಕೆ.ಜಿ. ಮಾರಾರ್‌, ಒ. ರಾಜಗೋಪಾಲ್‌, ಪಿ.ಪಿ. ಮುಕುಂದನ್‌, ಎಂ. ಉಮಾನಾಥ ರಾವ್‌, ಮಡಿಕೈ ಕಮ್ಮಾರನ್‌, ಎಚ್‌. ಶಂಕರ ಆಳ್ವ, ಕೆ. ವಿಶ್ವನಾಥ ಕಾಮತ್‌, ಬಿ. ಸರ್ವೋತ್ತಮ ಪೈ, ಎಂ. ನಾರಾಯಣ ಭಟ್‌, ವಿ. ರವೀಂದ್ರನ್‌ ಟಿ.ಆರ್‌. ಕೆ. ಭಟ್‌, ಕೆ. ದಾಮೋದರ ಭಟ್‌, ಕೆ. ಜಗದೀಶ್‌ ಮೊದಲಾದ ಅನೇಕ ನಾಯಕರು ಸಾಂಪ್ರದಾಯಿಕ  ಸ್ವಾಗತ ನೀಡಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನಿಧನಕ್ಕೆ ಜಿಲ್ಲೆಯಾದ್ಯಂತ ವಿವಿಧೆಡೆ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.

ಅತಿಥಿ ಗೃಹಕ್ಕಿಂತ ಕಾರ್ಯಕರ್ತರ ಮನೆಯಲ್ಲಿ  ತಂಗಲು ಒಲವು
ಕಾಸರಗೋಡಿನ ಜನರ ಮತ್ತು ಇಲ್ಲಿನ ಭಕ್ಷéಭೋಜನವನ್ನು  ಅಟಲ್‌ಜಿ ಮೆಚ್ಚಿದ್ದರು. ಸರಕಾರಿ ಅತಿಥಿ ಮಂದಿರಗಳಲ್ಲಿ ಉಪಾಹಾರ, ಭೋಜನ ಸ್ವೀಕರಿಸಲು ಮತ್ತು ತಂಗಲು ಒಲವು ತೋರದೆ ಅತ್ಯಂತ ಸರಳವಾಗಿ ಪಕ್ಷದ ಕಾರ್ಯಕರ್ತರ ಮನೆಯವರ ಆದರಾತಿಥ್ಯವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು.ಮನೆಯವರೊಂದಿಗೆ ಆತ್ಮೀಯತೆ ಯಿಂದ ಬೆರೆಯುತ್ತಿದ್ದರೆನ್ನುತ್ತಾರೆ ಕುಂಬಳೆ ಜೋಶಿ ಮನೆಯವರು. ಇವರು ಆಗಮಿಸಿದಾಗ ಮನೆಯವರೊಂದಿಗೆ ಕ್ಲಿಕ್ಕಿಸಿದ ಫೂಟೊಗಳು ಕಾಸರಗೋಡು ಜಿಲ್ಲೆಯ ಕೆಲವು ಮನೆಗಳಲ್ಲಿ ಕೆಡದಂತೆ ಇರಿಸಲಾಗಿದೆ. ಸರಳ ಸಜ್ಜನ ನಾಯಕನ ಜೀವನ ಚರಿತ್ರೆಯ ಕುರಿತು ಹಿರಿಯರು ಕಿರಿಯರಿಗೆ ಹೇಳುತ್ತಿದ್ದಾರೆ.

Advertisement

ಕುಂಬಳೆ ಜೋಶಿ ಮನೆಯವರಿಂದ ಹಾರಾರ್ಪಣೆಗೈದು ತಿಲಕವಿರಿಸಿ ಸ್ವಾಗತ.

Advertisement

Udayavani is now on Telegram. Click here to join our channel and stay updated with the latest news.

Next