Advertisement

ವಸತಿ ಬಡಾವಣೆ ಹಕ್ಕು ಪತ್ರ ವಿತರಣೆ

06:36 PM Aug 17, 2021 | Shreeram Nayak |

ಶಿವಮೊಗ್ಗ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಟಲ್‌ ಬಿಹಾರಿ ವಾಜಪೇಯಿ ವಸತಿ ಬಡಾವಣೆಯ 130 ಅರ್ಹ ನಿವೇಶನದಾರರಿಗೆ ಖಾತಾ ಪತ್ರಗಳನ್ನು ವಿತರಿಸಲಾಯಿತು.

Advertisement

ವಿನೋಬನಗರ ಪೊಲೀಸ್‌ ಚೌಕಿಯ ವಿಪ್ರ ಸಭಾಂಗಣದಲ್ಲಿ ಭಾನುವಾರ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಜಿಲ್ಲಾ
ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಖಾತಾ ಪತ್ರ ವಿತರಿಸಿದರು.

ಮಲ್ಲಿಗೇನಹಳ್ಳಿಯ ಅಟಲ್‌ ಬಿಹಾರಿ ವಾಜಪೇಯಿ ವಸತಿ ಬಡಾವಣೆಯಲ್ಲಿ 360 ಫಲಾನುಭವಿಗಳಿದ್ದು ಅದರಲ್ಲಿ ಕ್ರಮಬದ್ಧವಾದ 130 ನಿವೇಶನದಾರರಿಗೆ ಖಾತಾ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಈಶ್ವರಪ್ಪ ಅವರು ಮಾತನಾಡಿ, ಸ್ಥಳೀಯ ಚುನಾಯಿತ ಪ್ರತಿನಿಗಳು ಹಾಗೂ ಸೂಡಾ ಅಧ್ಯಕ್ಷರ ಅವಿರತ ಶ್ರಮದಿಂದ ಸಮಸ್ಯೆಗಳನ್ನು ತೊಡೆದು ಹಾಕಿ ಖಾತಾ ಪತ್ರಗಳನ್ನು ವಿತರಿಸುತ್ತಿರುವುದು ಹರ್ಷದ ಸಂಗತಿಯಾಗಿದೆ.

ಅನೇಕ ವರ್ಷಗಳಿಂದ ನಿವೇಶನಕ್ಕಾಗಿ ಕಾದಿದ್ದು, ಈಗ ನಿವೇಶನ ಪಡೆಯುತ್ತಿರುವ ಫಲಾನುಭವಿಗಳು ತ್ವರಿತಗತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ಕಳೆಯುವಂತಾಗಬೇಕು ಎಂದರು.

ಇದನ್ನೂ ಓದಿ:ಜಮ್ಮು-ಕಾಶ್ಮೀರ: ಕುಲ್ಗಾಮ್ ನಲ್ಲಿ ಉಗ್ರರಿಂದ ಬಿಜೆಪಿ ಮುಖಂಡನ ಗುಂಡಿಟ್ಟು ಹತ್ಯೆ

Advertisement

ಅಧ್ಯಕ್ಷತೆ ವಹಿಸಿದ್ದ ಸೂಡಾ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿ ಪ್ರಕಾಶ್‌ ಮಾತನಾಡಿ, ಸೂಡಾ ಆರಂಭದಿಂದ ಇಲ್ಲಿವರೆಗೆ ಹಲವು ಅಧ್ಯಕ್ಷರ
ಆಡಳಿತಾವಧಿಯಲ್ಲಿ 16ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಸಹಸ್ರಾರು ನಿವೇಶನಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗಿದೆ. ಮೂಲೆ
ನಿವೇಶನಗಳನ್ನು ಬಹಿರಂಗ ಹರಾಜು ಮೂಲಕ ವಿತರಿಸಲಾಗಿದೆ. ವಾಜಪೇಯಿ ಬಡಾವಣೆ ಸೃಜಿಸುವಲ್ಲಿ ಆಗಿದ್ದ ಸಮಸ್ಯೆಗಳನ್ನು
ಇತ್ಯರ್ಥಪಡಿಸುವಲ್ಲಿ ಸಚಿವರು, ಸಂಸದರ ನೆರವು ಹಾಗೂ ಸಹಕಾರವನ್ನು ಮೆಚ್ಚುವಂತದ್ದು ಎಂದರು. ಅರ್ಹರಾದ 130 ಫಲಾನುಭವಿಗಳಿಗೆ ಖಾತಾ ಪತ್ರಗಳನ್ನು ಸಚಿವರು, ಸಂಸದರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ಮೇಯರ್‌ ಸುನೀತಾ ಅಣ್ಣಪ್ಪ, ಸೂಡಾ ಮಾಜಿ ಅಧ್ಯಕ್ಷ
ಜ್ಞಾನೇಶ್ವರ್‌, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಅನಿತಾ ರವಿಶಂಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next