Advertisement
ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರೇ ಜಿಲ್ಲೆಯನ್ನು ವಿಂಗಡಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಉಡುಪಿ ಜಿಲ್ಲೆಯಾದರೂ ಗಾತ್ರದಲ್ಲಿ ಚಿಕ್ಕದು. ದೊಡ್ಡ ದೊಡ್ಡ ಜಿಲ್ಲೆಗಳ ನಾಯಕರು ತಮ್ಮ ಜಿಲ್ಲೆಗಳನ್ನು ವಿಂಗಡಿಸಿ ಎಂದು ಪಟ್ಟು ಹಿಡಿಯುವಾಗ ಚಿಕ್ಕ ಗಾತ್ರದ ಜಿಲ್ಲೆಯನ್ನು ವಿಂಗಡಿಸುವುದು ಕಷ್ಟಸಾಧ್ಯ.
Related Articles
Advertisement
“1983ರಲ್ಲಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಡಾ| ವಿ.ಎಸ್.ಆಚಾರ್ಯರು ತಮ್ಮ ಸುದೀರ್ಘ ಅನುಭವದಿಂದ ಸಣ್ಣ ಸಣ್ಣ ಜಿಲ್ಲೆಗಳನ್ನು ರಚಿಸಲು ಆಡಿದ ಭಾಷಣ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಆಕರ್ಷಿಸಿತು. ಅವರು ಜಿಲ್ಲೆಗಳ ಪುನರ್ವಿಂಗಡನೆಗೆ ಟಿ.ಎಂ. ಹುಂಡೇಕರ್ ಸಮಿತಿಯನ್ನು ರಚಿಸಿದರು. 1996 ರಲ್ಲಿ ವಿಧಾನ ಪರಿಷತ್ ಸದಸ್ಯರಾದಾಗಲೂ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರಿಗೆ ಜಿಲ್ಲೆಗಳ ಪುನರ್ವಿಂಗಡನೆಗೆ ಮನವೊಲಿಸಿದರು. ಸಮಿತಿಯ ಮುಂದೆ ಮೂರು ತಾಲೂಕುಗಳನ್ನು ಒಳಗೊಂಡ ಜಿಲ್ಲಾ ರಚನೆಗೆ ಬೇಕಾದ ಪ್ರಸ್ತಾವನೆ ಗಳನ್ನು ಮಂಡಿಸಿದರು. ಇದಕ್ಕಾಗಿ ಬಹಳ ಶ್ರಮಪಟ್ಟಿರುವುದನ್ನು ಜೆ.ಎಚ್. ಪಟೇಲ್ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದರು’ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ನೆನಪಿಸಿಕೊಳ್ಳುತ್ತಾರೆ.
ಆಗಿನ ಕಂದಾಯ ಸಚಿವ ರಮೇಶ ಜಿಗಜಿಣಗಿ, ಗ್ರಾಮೀಣಾಭಿವೃದ್ಧಿ ಸಚಿವ ಎಂ.ಪಿ. ಪ್ರಕಾಶ್, ನಗರಾಭಿವೃದ್ಧಿ ಸಚಿವ ಬಿ.ಎನ್. ಬಚ್ಚೇಗೌಡರು, ಸಣ್ಣ ಕೈಗಾರಿಕಾ ಸಚಿವ ಬಿ.ಎ. ಮೊದಿನ್ ಮೊದಲಾದವರು ಐತಿಹಾಸಿಕ ದಿನದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಟೇಲರ ಹಾಸ್ಯಚಟಾಕಿ!ಒಂದೊಮ್ಮೆ ವಿಪಕ್ಷದ ಶಾಸಕರು ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ರಸ್ತೆಗಳು ಹೊಂಡಗುಂಡಿಗಳಿಂದ ಸಂಪೂರ್ಣ ಕುಲಗೆಟ್ಟಿವೆ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು. ನಗುನಗುತ್ತ ಮಾತನಾಡುವ ಜೆ.ಎಚ್. ಪಟೇಲರು “ಹಾಗಿದ್ದರೆ ಕುದುರೆ ಏರಿ ಬನ್ನಿ’ ಎಂದು ಹಾಸ್ಯಚಟಾಕಿ ಹಾರಿಸಿದರು. ಪಟೇಲರು ಉಡುಪಿ ಜಿಲ್ಲೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಾಗ “ಉಡುಪಿ ಕ್ಷೇತ್ರ ಪ್ರಸಿದ್ಧ. ಶ್ರೀಕೃಷ್ಣನ ನಾಡು. ಶ್ರೀಕೃಷ್ಣನೆಂದರೆ ನನಗೂ ಇಷ್ಟ. ನನಗೆ ಒಂಥರಾ…’ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಪಟೇಲರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಮಾತಿನಲ್ಲಿ ಹಾಸ್ಯ ಕಾಣುತ್ತಿತ್ತೇ ವಿನಾ ಅವಮಾನ, ಸಿಟ್ಟು ಬರುತ್ತಿರಲಿಲ್ಲ. ಸಚಿವ ಜಿಗಜಿಣಗಿಯವರ ಹೆಸರನ್ನು ಸರಿಯಾಗಿ ಉತ್ಛರಿಸಲಾಗದೆ ಪಟೇಲರು ದಡಬಡಿಸಿದಾಗಲೂ ಸಭಿಕರಲ್ಲಿ ನಗು ಬಂತು.