Advertisement

ಕೇಂದ್ರದಲ್ಲಿ  ಬಿಜೆಪಿ ಮತ್ತೆ ಅಧಿಕಾರಕ್ಕೆ ಶತಃಸಿದ್ಧ

01:00 AM Feb 13, 2019 | Harsha Rao |

ಕಾಸರಗೋಡು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಕೇರಳದಲ್ಲೂ ಕೂಡ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ನ್ಯಾಯವಾದಿ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಅವರು ಹೇಳಿದರು.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ಐದು ವರ್ಷಗಳ ಆಡಳಿತದ ಸಾಧನೆಗಳನ್ನು ವಿವರಿಸುವ “ಭಾರತ್‌ ಕೆ ಮನ್‌ಕೀ ಬಾತ್‌ ಮೋದಿ ಕೆ ಸಾಥ್‌’ ಎಂಬ ವೀಡಿಯೋ ರಥದ ಕಾಸರಗೋಡು ಜಿಲ್ಲಾ ಮಟ್ಟದ ಯಾತ್ರೆಯನ್ನು ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ತಳಮಟ್ಟ ದಿಂದ ಪಕ್ಷಕ್ಕಾಗಿ ಸಕ್ರಿಯವಾಗಿ ಕಾರ್ಯಕ್ಷೇತ್ರದಲ್ಲಿ ದುಡಿಯಬೇಕು. ಕೇಂದ್ರ ಸರಕಾರದ ಸಾಧನೆಗಳನ್ನು, ಜನಪರ ಯೋಜನೆಗಳನ್ನು ಜನರಿಗೆ ತಿಳಿಯಪಡಿಸಲು ಮುಂದಾಗಬೇಕು. ಕೇಂದ್ರ ಸರಕಾರದ ಅಭಿವೃದ್ಧಿಯಲ್ಲಿ ಯಾವುದೇ ಜಾತಿ, ಮತದ ತಾರತಮ್ಯ ನಡೆಸಲಿಲ್ಲ. ಇದಕ್ಕೆ ಕೇಂದ್ರ ಸರಕಾರ ಸ್ವದೇಶಿ ದರ್ಶನ್‌ ಎಂಬ ಹೆಸರಲ್ಲಿ ದೇವಸ್ಥಾನ, ಮಸೀದಿ, ಇಗರ್ಜಿ ಮುಂತಾದ ತೀರ್ಥಾಟನ ಕೇಂದ್ರಗಳಿಗೆ ಮಂಜೂರು ಗೊಳಿಸಿದ ಮೊತ್ತವೇ ಸ್ಪಷ್ಟ ನಿದರ್ಶನ ವಾಗಿದೆ ಎಂದ ಅವರು ಕೇಂದ್ರ ಸರಕಾರದ ಕಳೆದ ನಾಲ್ಕೂವರೆ ವರ್ಷಗಳ ಆಡಳಿತಾ ವಧಿಯಲ್ಲಿ ಭಾರತವು ತಂತ್ರಜ್ಞಾನ ಕ್ಷೇತ್ರ ದಲ್ಲಿ ವಿಶ್ವದಲ್ಲಿಯೇ ಭಾರೀ ಮುಂದಕ್ಕೆ ಸಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next