Advertisement

ವರ್ಷಕ್ಕೆ ಕನಿಷ್ಠ ಐದು ಸಸಿ ನೆಡಿ

12:35 AM Apr 23, 2019 | Team Udayavani |

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದ್ದು, ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ ಐದು ಗಿಡಗಳನ್ನಾದರು ನೆಡಬೇಕು ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

Advertisement

ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಸೋಮವಾರ ರೋಟರಿ ಕ್ಲಬ್‌ ಆಫ್ ಬೆಂಗಳೂರು ಡಿಸ್ಟ್ರಿಕ್‌ 3190 ಮತ್ತು ಅವನಿ ಸಂಘಟನೆ ಹಮ್ಮಿಕೊಂಡಿದ್ದ “ವಿಶ್ವ ಭೂ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ತಿಳಿಸಿದರು.

ಮನುಷ್ಯ ಸಂಕುಲಕ್ಕೆ ಭೂಮಿ ಅನೇಕ ರೀತಿಯಲ್ಲಿ ನೆರವಾಗುತ್ತದೆ. ಆದರೆ ಮನುಷ್ಯ ಮಾತ್ರ ಪರಿಸರ ಮಾಲಿನ್ಯದಲ್ಲೇ ತೊಡಗಿದ್ದಾನೆ. ವಿಶ್ವ ಪರಿಸರ ದಿನಾಚರಣೆ ಮತ್ತು ಅಂತಾರಾಷ್ಟ್ರೀಯ ಭೂ ದಿನಾಚರಣೆಯಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು. ಪ್ರತಿ ನಿತ್ಯ ಪರಿಸರವನ್ನು ಉಳಿಸಿ -ಬೆಳೆಸುವ ನಿಟ್ಟಿನಲ್ಲಿ ಕೆಲಸ ನಡೆಯಬೇಕು ಎಂದರು.

ರಾಷ್ಟ್ರ ರಾಜಧಾನಿ ದೆಹಲಿ ವಾಯು ಮಾಲಿನ್ಯದಿಂದ ಬಳಲುತ್ತಿದೆ. ಅದು ನಮಗೆ ಪಾಠವಾಗಬೇಕು. ಆಧುನಿಕತೆಯ ಹೆಸರಿನಲ್ಲಿ ಪರಿಸರ ನಾಶ ಮಾಡುವುದು ಒಳ್ಳೆಯದಲ್ಲ. ಉದ್ಯಾನವನದಲ್ಲಿ ಹಸಿರು ಉಳಿಸುವ ನಿಟ್ಟಿನಲ್ಲಿ ಪಾಲಿಕೆ ಕೂಡ ಯೋಜನೆಗಳನ್ನು ರೂಪಿಸಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಚಿತ್ರ ನಟ ಯಶ್‌ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ಮನುಷ್ಯರಿಗೆ ಮರ ಹಲವು ರೀತಿಯಲ್ಲಿ ನೆರವಾಗುತ್ತದೆ. ಇದನ್ನು ಅರಿಯದ ಮನುಷ್ಯ ಅದರ ನಾಶದಲ್ಲಿ ತೊಡಗಿದ್ದಾನೆ. ಬೆಂಗಳೂರಿನಲ್ಲಿ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವನಿ ಫೌಂಡೇಶ್‌ ಜತೆ ಕೈ ಜೋಡಿಸುವುದಾಗಿ ಹೇಳಿದರು.

Advertisement

ನನ್ನ ಮದುವೆ ಆಹ್ವಾನ ಪತ್ರಿಕೆ ಜತೆ ಸಂಪಿಗೆ ಗಿಡವನ್ನು ನೀಡಿದ್ದೆ. ಈಗ ಆ ಸಂಪಿಗೆ ಗಿಡ ಬೆಳೆದು ಹೂ ಬಿಡುತ್ತಿದ್ದು, ಹಲವರು ಆ ಹೂವುಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿಕೊಡುತ್ತಾರೆ. ಆ ಕ್ಷಣವನ್ನು ನೆನೆಸಿಕೊಂಡರೆ ಖುಷಿ ಕೊಡುತ್ತದೆ ಎಂದರು.

ಹಸಿರು ಭಾನುವಾರದ ಬಗ್ಗೆ ಮೆಚ್ಚುಗೆ: ಬೆಂಗಳೂರನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಹಸಿರು ಭಾನುವಾರದ ಮೂಲಕ ಇದನ್ನು ಈಗಾಗಲೇ ಕಾರ್ಯಗತಗೊಳಿಸಿದೆ. ಅನಂತ ಕುಮಾರ್‌ ಅವರು ಕೂಡ ಬೆಂಗಳೂರಿನ ಹಸಿರೀಕರಣದ ಬಗ್ಗೆ ಕನಸು ಕಂಡಿದ್ದರು ಎಂದು ಮೇಯರ್‌ ಗಂಗಾಂಬಿಕೆ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next