ಅರುಷಾ: ಉತ್ತರ ತಾಂಜಾನಿಯಾದಲ್ಲಿ ಬಸ್ ಪಲ್ಟಿಯಾಗಿ 29 ಶಾಲಾ ಮಕ್ಕಳು,ಇಬ್ಬರು ಶಿಕ್ಷಕಿಯರು ಮತ್ತು ಚಾಲಕ ದಾರುಣವಾಗ ಸಾವನ್ನಪ್ಪಿದ ಭೀಕರ ದುರಂತ ಶನಿವಾರ ಬೆಳಗ್ಗೆ ನಡೆದಿದೆ.
Advertisement
ಚಾಲಕ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯ ಬದಿಯಲ್ಲಿದ್ದ ಕಣಿವೆಗೆ ಬಿದ್ದಿದ್ದು, ಮಕ್ಕಳು ಸ್ಥಲದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ ಕೆಲ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ಮೀತಿ ಮೀರಿದ ವೇಗವೆ ಅವಘಡಕ್ಕೆ ಕಾರಣ ಎಂದು ಗಾಯಾಳು ವಿದ್ಯಾರ್ಥಿಗಳು ತಿಳಿಸಿದ್ದಾರೆ.