Advertisement

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

04:24 PM Jan 01, 2024 | Team Udayavani |

ಲಗ್ನಾಧಿಪತಿಯಾದ ಶುಕ್ರನು ರೋಗಸ್ಥಾನ ಸ್ಥಿತ ಕಾರಣ ವರ್ಷದ ಪ್ರಾರಂಭದಲ್ಲಿ ದೇಶದ ನಾಗರೀಕರಿಗೆ ರೋಗಬಾಧೆ ಕಂಡುಬಂದರೂ, ನಂತರದಲ್ಲಿ ಶೀಘ್ರ ಶಮನವಾಗುವುದು. ಬಾಧಕಾಧಿಪತಿಯಾದ ಶನಿ ಗ್ರಹ ತನ್ನ ಮೂಲ ತ್ರಿಕೋನದಲ್ಲಿ ಬಲಯುತನಾಗಿರುವ ಕಾರಣ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಉಂಟಾಗಿ, ಜನರಿಗೆ ಆರ್ಥಿಕ
ನಷ್ಟ ತಲೆದೋರುವ ಸಾಧ್ಯತೆ ಇದೆ.

Advertisement

ಪಾಶ್ಚಿಮಾತ್ಯ ದೇಶಗಳಿಂದ ನೆರವು ದೊರೆಯಲಿದೆ. ಲಾಭದ ರಾಹುಗ್ರಹವಿನಿಂದಾಗಿ ರಫ್ತು ಮತ್ತು ಆಮದು ವ್ಯಾಪಾರದಲ್ಲಿ ಏಳಿಗೆ ಉಂಟಾಗಲಿದೆ. ಭಾರತದ ಶತ್ರು  ರಾಷ್ಟ್ರಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿ ಭಾರತದ ಮೇಲೆ ಹಗೆ ಸಾಧಿಸುವ ಸೂಚನೆ ಇರುವುದು. ದೇಶದ ಗುಪ್ತಚರ ಇಲಾಖೆಗಳ ಕಾರ್ಯವೈಖರಿಯಲ್ಲಿ ಯಶಸ್ಸು, ಹೆಚ್ಚು ಮಾಹಿತಿ ಸಂಗ್ರಹ ಮತ್ತು ಬಹು ವರ್ಷಗಳ ಅಪರಾಧಿ ಕೃತ್ಯಕ್ಕೆ ಬೇಕಾದ ವ್ಯಕ್ತಿಗಳ ಮಾಹಿತಿ ಹಾಗೂ ಸಾಕ್ಷಿ ಸಂಗ್ರಹದಲ್ಲಿ ಮುನ್ನಡೆ ದೊರೆಯಲಿದೆ.

ಜಲರಾಶಿಯಲ್ಲಿ ಶತ್ರು ಸ್ಥಾನಾಧಿಪತಿ ಕುಜ ಇರುವುದರಿಂದ ಜಲಮಾರ್ಗಗಳಿಂದ ಶತ್ರು ಭಾದೆ ಎದುರಾಗುವ ಸಾಧ್ಯತೆ ಇದೆ. ದೇಶದ ಶಸ್ತ್ರಾಗಾರಕ್ಕೆ ಹೊಸ ಆಯುಧಗಳ ಪರಿಚಯ, ಅದರಲ್ಲೂ ಜಲ ಅಂತರ್ಗಾಮಿ ನೌಕೆಗಳಿಗೆ ಬಳಸುವಂತಹ ಕ್ಷಿಪಣಿಗಳ ಆವಿಷ್ಕಾರಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಬೆಂಬಲ ದೊರೆಯಲಿದೆ ಹಾಗೂ ಪಾಲುದಾರಿಕೆಯಲ್ಲಿ ಭಾರತದ ಯಶಸ್ಸು ಕಂಡು ಬರುವುದು. ಭಾರತದ ಫಾರ್ಮಸಿ ಕಂಪನಿಗಳಿಗೆ ಹೆಚ್ಚಿನ ಲಾಭ.

ಬಾಹ್ಯಾಕಾಶ ಸಂಸ್ಥೆಗಳಿಂದ ಅನ್ಯಗ್ರಹದ ಸಂಶೋಧನೆ ಸಂಬಂಧ ಪಟ್ಟಂತೆ ಅಪರೂಪದ ಮಾಹಿತಿ ಹಾಗೂ ಉಪಗ್ರಹ
ಉಡಾವಣೆಯಲ್ಲಿ ಮೈಲಿಗಲ್ಲು ಸಾಧನೆಯಾಗಲಿದೆ. ಭಾರತ ಮತ್ತು ಇಸ್ರೇಲ್‌ ದೇಶಗಳ ಸಂಬಂಧದಲ್ಲಿ ಕೊಂಚ ಬಿರುಕು ಕಾಣುವ ಸಾಧ್ಯತೆ ಈ ವರ್ಷ ಕಂಡು ಬರುವುದು. ಈ ವರ್ಷ ಲೋಕಸಭಾ ಚುನಾವಣೆ ನಡೆಯುವುದರಿಂದ ಸಹಜವಾಗಿಯೇ ಹಲವು ಬದಲಾವಣೆಗಳು ನಿರೀಕ್ಷಿತ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದ ಬುಧಭುಕ್ತಿಯಲ್ಲಿ ರಾಜಯೋಗದ ಸೂಚನೆ ಕಾಣಿಸುತ್ತಿರುವುದು ಹಾಗೂ ಏಪ್ರಿಲ್‌ ನಂತರದಲ್ಲಿನ ಗುರುಬಲ ಯಶಸ್ಸಿನ ಸೂಚನೆ ಎಂದೇ ಹೇಳಬಹುದು.”ಇಂಡಿಯಾ’ ಸಂಘಟಿತ ಪಕ್ಷಗಳು ಚುನಾವಣೆ ನಂತರದಲ್ಲಿ ಪರಸ್ಪರ ಮತ್ತೂಂದು
ಹೋರಾಟಕ್ಕೆ ಸಜ್ಜಾಗುವ ಸಾಧ್ಯತೆ ಇದೆ.

ರಾಜ್ಯದಲ್ಲೇನಾಗುತ್ತದೆ?
ಇನ್ನು ರಾಜ್ಯದ ವಿಚಾರಕ್ಕೆ ಬಂದರೆ. ಏಪ್ರಿಲ್‌ ನಂತರ ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ. ಭಾಗ್ಯಾಧಿಪತಿ ಶನಿ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡುತ್ತಾನೆ. ಮತ್ತಷ್ಟು ಭೂ ಹಗರಣಗಳು ಹೆಚ್ಚಾಗಿ, ಭೂ ಸಂಬಂಧ ಇಲಾಖೆಗಳಲ್ಲಿ ಅವ್ಯವಹಾರ ಬಹಿರಂಗವಾಗುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಮಿತ್ರರೇ ಶತ್ರುವಾಗುವ ಸಮಯ. ರಾಜನಿಗೆ ರೋಗ ಭಯ, ಮಕ್ಕಳಿಂದ ಅವಮಾನ, ಮಹಿಳಾ ರಾಜಕಾರಣಿಗಳಿಗೆ ವಿರೋಧ ಮತ್ತು ಶತ್ರು ಕಾಟ ಉಂಟಾಗಬಹುದು. ಇದೇ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ವಲಯಗಳಲ್ಲಿ ಹಿನ್ನಡೆ ಉಂಟಾಗಲಿದೆ.

Advertisement

ಆರ್ಥಿಕ ಸ್ಥಿತಿ
ದೇಶದ ಸಾಫ್ಟ್‌ ವೇರ್ ಉದ್ಯಮದಲ್ಲಿ‌ ಅತ್ಯಲ್ಪ ಆರ್ಥಿಕ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಆದರೆ, ಉದ್ಯೋಗಿಗಳಲ್ಲಿ ಆತಂಕ ಈ ವರ್ಷವೂ ಮುಂದುವರೆಯಲಿದೆ. ಮೇ ತಿಂಗಳಲ್ಲಿ ಬರುವ ಗುರು ಬಲದ ಕರ್ಕಾಟಕ ರಾಶಿಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮೊದಲನೇ ತ್ತೈಮಾಸಿಕದ ನಂತರ ಭಾರತವು ಹೆಚ್ಚು ಸಾಧನೆ ತೋರಲಿದೆ. ಆರ್ಥಿಕ ನೀತಿಯಲ್ಲಿ ಮಹತ್ತರ ಬದಲಾವಣೆ ಆಗುವುದರಿಂದ ವಾಣಿಜ್ಯ ವ್ಯವಹಾರ ಕುದುರಲಿದ್ದು, ಜನರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ನ್ಯಾಯಾಂಗದ
ಕಾರ್ಯವೈಖರಿಯಲ್ಲಿ ಮತ್ತಷ್ಟು ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಈ ವರ್ಷದ ಕಾಲಮಾನದಲ್ಲಿ ಕೈ ತಪ್ಪಿ ಹೋಗಿದ್ದ ಎಷ್ಟೋ ಹಲವು ಪುರಾತನ ದೇವಾಲಯಗಳಲ್ಲಿ ಪುನರ್‌ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಈ ವರ್ಷದ ಕ್ರೀಡೆಯಲ್ಲಿ ಕ್ರೀಡಾಪಟುಗಳ ಉನ್ನತ ಸಾಧನೆ ಖಚಿತ. ಪಂಜಾಬ್‌ ರಾಜಸ್ಥಾನ ರಾಜ್ಯಗಳಲ್ಲಿ ಕೋಮುವಾದ, ಅಫೀಮ್‌ ಗಾಂಜಾದಂತಹ ನಿರ್ಬಂಧಿತ ವಸ್ತುಗಳ ಸಂಬಂಧಿಸಿದಂತೆ ಬಹುದೊಡ್ಡ ಜಾಲವನ್ನು ಭೇದಿಸಿದ ವಿಚಾರ ಈ ವರ್ಷದ ಪ್ರಮುಖ
ಸುದ್ದಿಯಾಗಬಹುದು.

ಡಾ.ಚೇತನ್‌ ಶ್ರೀನಿವಾಸ್‌
ಜ್ಯೋತಿಷ್ಯ-ವಾಸ್ತುಸಲಹೆಗಾರ, ರತ್ನಶಾಸ್ತ್ರಜ್ಞ, ಬೆಂಗಳೂರು
ಮೊ-9448353411, 7026390001

Advertisement

Udayavani is now on Telegram. Click here to join our channel and stay updated with the latest news.

Next