Advertisement

ಭ್ರಷ್ಟ CBI ಅಧಿಕಾರಿ ಅಸ್ಥಾನಾ: ಪ್ರಧಾನಿಯ ನೀಲಿ ಕಂಗಳ ಹುಡುಗ: ರಾಹುಲ್

04:08 PM Oct 22, 2018 | udayavani editorial |

ಹೊಸದಿಲ್ಲಿ : ಲಂಚ ತೆಗೆದುಕೊಂಡ ಆರೋಪದಲ್ಲಿ ತನ್ನ ಎರಡನೇ ಕ್ರಮಾಂಕದ ಉನ್ನತ ಅಧಿಕಾರಿಯಾಗಿರುವ ರಾಕೇಶ್‌ ಅಸ್ಥಾನಾ ವಿರುದ್ಧ ಕೇಸು ದಾಖಲಿಸುವ ಮೂಲಕ ಸಿಬಿಐ ಅಭೂತಪೂರ್ವ ಕ್ರಮ ಕೈಗೊಂಡ ಒಂದು ದಿನದ ತರುವಾಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ಹೊಸ ಆರೋಪಗಳ ಸುರಿಮಳೆ ಗೈದಿದ್ದಾರೆ. 

Advertisement

ಸಿಬಿಐ ಅನ್ನು ಪ್ರಧಾನಿ ಮೋದಿ ಅವರು ರಾಜಕೀಯ ದ್ವೇಷದ ಅಸ್ತ್ರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಟ್ಟಿಟರ್‌ನಲ್ಲಿ ಆರೋಪಿಸಿರುವ ರಾಹುಲ್‌ ಗಾಂಧಿ, ಅಸ್ಥಾನಾ ಗೆ ಗೋದ್ರಾ ಎಸ್‌ಐಟಿ ಜತೆಗೆ ನಂಟು ಇತ್ತೆಂದು ದೂರಿದ್ದಾರೆ. 

“ಅಸ್ಥಾನಾ ಅವರು ಪ್ರಧಾನಿಯವರ ನೀಲಿ ಕಂಗಳ ಹುಡುಗ; ಗೋದ್ರಾ  ಎಸ್‌ಐಟಿ ಖ್ಯಾತಿಯ  ಗುಜರಾತ್‌ ಕೇಡರ್‌ ಅಧಿಕಾರಿ, ಸಿಬಿಐ ನ ನಂಬರ್‌ 2 ಅಧಿಕಾರಿ; ಈಗ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿರುವಾತ; ಪ್ರಧಾನಿ ಅಡಿ ಸಿಬಿಐ ರಾಜಕೀಯ ದ್ವೇಷದ ಅಸ್ತ್ರವಾಗಿದೆ, ಅಂತಃಕಲಹದಲ್ಲಿ ನಿರತವಾಗಿರುವ ಮತ್ತು ಮಾರಣಾಂತಿಕ ಪತನ ಕಾಣುತ್ತಿರುವ ಸರಕಾರಿ ತನಿಖಾ ಸಂಸ್ಥೆ ಇದಾಗಿದೆ ” ಎಂದು ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ. 

ಮಾಂಸ ರಫ್ತು ಉದ್ಯಮಿ ಮೊಯಿನ್‌ ಕುರೇಶಿ ಯನ್ನು ಒಳಗೊಂಡ ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಥಾನಾ, ಕುರೇಶಿಗೆ ಅನುಕೂಲ ಮಾಡಿಕೊಡಲು ಲಂಚ ತೆಗೆದುಕೊಂಡಿರುವ ಆರೋಪದ ಮೇಲೆ ಸಿಬಿಐ ತನ್ನದೇ ಸಂಸ್ಥೆಯಲ್ಲಿ 2ನೇ ಕ್ರಮಾಂಕದ ಉನ್ನತ ಅಧಿಕಾರಿಯಾಗಿರುವ ಅಸ್ಥಾನ ವಿರುದ್ಧ ಅಭೂತಪೂರ್ವ ಕ್ರಮವೊಂದರಲ್ಲಿ ಕೇಸು ದಾಖಲಿಸಿಕೊಂಡಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next