Advertisement

ಸಮಾಜ ಬಾಂಧವರಿಗೆ ಸಂಘದ ಯೋಜನೆಗಳು ತಲುಪಬೇಕು: ಚಂದ್ರಹಾಸ್‌ ಕೆ. ಶೆಟ್ಟಿ

04:09 PM Mar 14, 2021 | Team Udayavani |

ಮೀರಾರೋಡ್‌: ಬಂಟರ ಸಂಘದ ಮೀರಾ-ಭಾಯಂದರ್‌ ಸಮಿತಿಯ 2021-23ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಾ. 9ರಂದು ಇಲ್ಲಿನ ಕೃಷ್ಣ ಪ್ಯಾಲೇಸ್‌ ಸಭಾಂಗಣದಲ್ಲಿ ನಡೆಯಿತು.

Advertisement

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತಾಡಿದ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು, ಬಂಟರಿಗೆ ಬಂಟರ ಸಂಘದ ಎಲ್ಲ ಸವಲತ್ತುಗಳು ದೊರೆಯಲಿ ಎಂಬ ಉದ್ದೇಶದಿಂದ ಸ್ಥಾಪನೆಗೊಂಡ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಧ್ಯೇಯೋದ್ದೇಶಗಳನ್ನು ಸಮಾಜ ಬಾಂಧವರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಶೈಕ್ಷಣಿಕವಾಗಿ ಸದೃಢಗೊಂಡ ಸಂಘದಲ್ಲಿ ಉಚಿತ ಶಿಕ್ಷಣ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದವರು ಪಡೆಯುವಂತಾಗಬೇಕು. ಸಂಘದ ಹಿರಿಯರ ಆಶೀರ್ವಾದದಿಂದ ತಲೆ ಎತ್ತಿ ನಿಂತ ವಿವಿಧ ರೀತಿಯ ಸೇವಾ ಸಂಕೀರ್ಣಗಳ ಉಪಯೋಗದ ಮಾಹಿತಿ ಮನೆ ಮನೆಗೂ ತಲುಪಲಿ. ಪ್ರಾದೇಶಿಕ ಸಮಿತಿಗಳು ಈ ಬಗ್ಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಬೇಕಿದೆ. ಮೀರಾ-ಭಾಯಂದರ್‌ ಸಮಿತಿಯ ಇದುವರೆಗೆ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿದೆೆ. ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗುರುತಿಸಿ ಸೇವಾ ಸೌಲಭ್ಯಗಳ ವಿವರವನ್ನು ನೀಡಿ ಪ್ರೋತ್ಸಾಹಿಸಬೇಕು. ಹೆಚ್ಚು ಆಡಂಭರಗಳಿಲ್ಲದೆ ಸಮಯ ಪ್ರಜ್ಞೆಯ ಉತ್ತಮ ಕೆಲಸಗಳು ಸಾಗಿದರೆ ಸಂಘವು ಪ್ರಶಂಸನೀಯ ಎನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಸಮಾಜ ಬಾಂಧವರಿಗೆ ಸಂಘದ ಇತರ ಸೇವಾ ಸವಲತ್ತುಗಳು ಲಭಿಸಲಿ ಎಂದು ನುಡಿದು, ನಿರ್ಗಮನ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌ರವರ ಗಮನೀಯ ಕಾರ್ಯವೈಖರಿಗಳನ್ನು ಅವರು ಶ್ಲಾ ಸಿ ನೂತನ ಸಮಿತಿಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್‌ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ, ಮೀರಾ-ಭಾಯಂದರ್‌ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಉಪ ಕಾರ್ಯಾಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ, ಸಂಚಾಲಕ ಡಾ| ಅರುಣೋದಯ ರೈ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕಾಶಿಮೀರಾ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೋಟ್ರಪಾಡಿಗುತ್ತು, ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು, ಜತೆ ಕೋಶಾಧಿಕಾರಿ ದಾಮೋದರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್‌ ಶೆಟ್ಟಿ ಉಪಸ್ಥಿತರಿದ್ದರು.

ನಿರ್ಗಮನ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌ ನೂತನ ಕಾರ್ಯಧ್ಯಕ್ಷರ ಹೆಸರು ಸೂಚಿಸಿ, ಅವರಿಗೆ ಪುಷ್ಪಗುತ್ಛವನ್ನಿತ್ತು ಪದವಿ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳ ಹೆಸರುಗಳನ್ನು ನೂತನ ಕಾರ್ಯಧ್ಯಕ್ಷ ಶಿವಪ್ರಸಾದ್‌ ಶೆಟ್ಟಿಯವರು ಸಭೆಗೆ ಮಂಡಿಸಿದರು. ಸಭೆಯಲ್ಲಿ ನಿರ್ಗಮನ ಪದಾಧಿಕಾರಿಗಳು ಮತ್ತು ನೂತನ ಪದಾಧಿಕಾರಿಗಳನ್ನು ಪರಿಚಯಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅನಾರೋಗ್ಯದಲ್ಲಿರುವ ಕುಟುಂಬಕ್ಕೆ ಸಹಾಯಹಸ್ತ, ವಿದ್ಯಾರ್ಥಿ ನಿಧಿ, ಧನ ಪ್ರೋತ್ಸಾಹವನ್ನು ಸ್ಥಳೀಯ ಸಮಿತಿಯಿಂದ ನೀಡಲಾಯಿತು. ಸಭೆಯಲ್ಲಿ ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಕುತ್ಯಾರ್‌, ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಿವರಾಮ ಎಸ್‌. ಶೆಟ್ಟಿ, ಡಾ| ಭಾಸ್ಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗಿರೀಶ್‌ ಶೆಟ್ಟಿ ತೆಳ್ಳಾರ್‌ ಸ್ವಾಗತಿಸಿದರು. ಮೂಡುಬೆಳ್ಳೆ ವಿಜಯ್‌ ಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ರಂಗನಟ ಬಾಬಾ ಪ್ರಸಾದ್‌ ಅವರು ನಿರೂಪಿಸಿದರು, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೋಟ್ರಪಾಡಿಗುತ್ತು ವಂದಿಸಿದರು.

Advertisement

ನೂತನ ಕಾರ್ಯಾಧ್ಯಕ್ಷರಾಗಿ ಶಿವ ಪ್ರಸಾದ್‌ ಶೆಟ್ಟಿ ಮಾಣಿಗುತ್ತು, ಉಪ ಕಾರ್ಯಾಧ್ಯಕ್ಷರಾಗಿ ಉದಯ ಶೆಟ್ಟಿ ಪೆಲತ್ತೂರು, ಕಾರ್ಯದರ್ಶಿಯಾಗಿ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು, ಕೋಶಾಧಿಕಾರಿಯಾಗಿ ದಾಮೋದರ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಶಂಕರ್‌ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ರಮೇಶ್‌ ಶೆಟ್ಟಿ ಸಿದ್ಧಕಟ್ಟೆ ಅವರು ಆಯ್ಕೆಯಾದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಸತೀಶ್‌ ಶೆಟ್ಟಿ ಸಚ್ಚೇರಿಗುತ್ತು, ಉಪಕಾರ್ಯಾಧ್ಯಕ್ಷೆಯಾಗಿ ವಸಂತಿ ಎಸ್‌. ಶೆಟ್ಟಿ, ಕಾರ್ಯದರ್ಶಿಯಾಗಿ ಶರ್ಮಿಳಾ ಪಿ. ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಸುಜತಾ ಪಿ. ಶೆಟ್ಟಿ , ಕೋಶಾಧಿಕಾರಿಯಾಗಿ ಶಿಲ್ಪಾ³ ಸಿ. ಶೆಟ್ಟಿ, ಉಪ ಕೋಶಾಧಿಕಾರಿಯಾಗಿ ಶೀಲಾ ಎಂ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಸಂದರ್ಶ್‌ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಭಾಸ್ಕರ ಶೆಟ್ಟಿ ಕಾಶಿಮೀರಾ, ಕಾರ್ಯಾಧ್ಯಕ್ಷೆಯಾಗಿ ಅಮಿತಾ ಕೆ. ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಗೆ ಭಾಸ್ಕರ ಶೆಟ್ಟಿ ಶಾರದಾ ಕ್ಲಾಸೆಸ್‌, ವೈದ್ಯಕೀಯ ಸಮಿತಿಗೆ ಡಾ| ಭಾಸ್ಕರ ಶೆಟ್ಟಿ ದೀಪಕ್‌ ಹಾಸ್ಪಿಟಲ್‌, ಕ್ರೀಡಾ ಸಮಿತಿಗೆ ರಾಜೇಶ್‌ ಶೆಟ್ಟಿ ತೆಳ್ಳಾರ್‌, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಭಾಗಕ್ಕೆ ರಾಜೇಶ್‌ ಶೆಟ್ಟಿ, ಸದಸ್ಯ ನೊಂದಣಿ ಸಮಿತಿಗೆ ಬಾಬಾ ಪ್ರಸಾದ್‌ ಅರಸ, ಪ್ರಸಾರ ಹಾಗೂ ತಾಂತ್ರಿಕ ವಿಭಾಗಕ್ಕೆ ವೈ. ಟಿ. ಶೆಟ್ಟಿ ಹೆಜಮಾಡಿ, ವಿವಾಹ ನೊಂದಣಿ ಸಮಿತಿಗೆ ಸುಭಾಷ್‌ ಶೆಟ್ಟಿ, ಕ್ಯಾಟರಿಂಗ್‌ ವಿಭಾಗಕ್ಕೆ ಅಶೋಕ್‌ ಶೆಟ್ಟಿ, ಎಂಟಿಎನ್‌ಎಲ್‌, ಭಜನ ಸಮಿತಿಗೆ ವಿಜಯ್‌ ಶೆಟ್ಟಿ ಮೂಡುಬೆಳ್ಳೆ, ಉದ್ಯೋಗ ಸಮಿತಿಗೆ ಸಾಯಿಪ್ರಸಾದ್‌ ಪೂಂಜ ಅವರನ್ನು ನೇಮಿಸಲಾಯಿತು.

ಎಲ್ಲರ ಸಹಕಾರ ಅಗತ್ಯ :

ಮುಂಬಯಿ ಬಂಟರ ಸಂಘದಲ್ಲಿ ಹಿರಿಯರ ಆಶೀರ್ವಾದದಿಂದ ಹಲವು ಜವಾಬ್ದಾರಿಯುತ ಕೆಲಸಗಳನ್ನು  ನಿರ್ವಹಿಸಿದ್ದೇನೆ. ಮಧ್ಯಮ ವರ್ಗದ ಜನರಿರುವ ಮೀರಾ-ಭಾಯಂದರ್‌ನಲ್ಲಿ ಮುಂದಿನ ದಿನಗಳಲ್ಲಿ ಸಂಘದ ನಿಯಮಾವಳಿಯಂತೆ ಉತ್ತಮವಾದ ಕೆಲಸಗಳನ್ನು ನಿರ್ವಹಿಸುವಲ್ಲಿ ಎಲ್ಲರ ಆಶೀರ್ವಾದ, ಸಲಹೆ-ಸಹಕಾರ ಅಗತ್ಯವಾಗಿದೆ. -ಶಿವಪ್ರಸಾದ್‌ ಶೆಟ್ಟಿ,  ನೂತನ ಕಾರ್ಯಾಧ್ಯಕ್ಷರು, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ

ಹಿರಿಯರ‌ ಆಶೀರ್ವಾದದಿಂದ ಸಾಧನೆ :

ಕೋವಿಡ್‌ ನಿಯಮಾವಳಿಯಿಂದ ಇಂದು 60 ಜನರು ಮಾತ್ರ ಇಲ್ಲಿ ನೆರೆದಿದ್ದಾರೆ. ಕಳೆದ ವರ್ಷದಲ್ಲಿ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಂದರ್ಭದಲ್ಲಿ ಸುಮಾರು 5000ಕ್ಕಿಂತಲೂ ಹೆಚ್ಚು ಬಂಟ ಬಾಂಧವರನ್ನು ಒಗ್ಗೂಡಿಸಿದ ಕೀರ್ತಿ ನನ್ನ ಅವಧಿಯಲ್ಲಿ ನಡೆದದ್ದು ಹೆಮ್ಮೆಯಿದೆ. ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಮಾತ್ರವಲ್ಲದೆ ಬಂಟರ ಸಂಘದಿಂದ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಹೆಮ್ಮೆ ಪಡುತ್ತಿದ್ದೇನೆ. ಸಮಿತಿಯ ಎಲ್ಲ ಹೆಗ್ಗಳಿಕೆಗಳಿಗೂ ಕಾರ್ಯಕಾರಿ ಸಮಿತಿಯ ಪ್ರೋತ್ಸಾಹ, ಹಾಗೂ ಹಿರಿಯರ ಮತ್ತು ಸಮಾಜ ಬಾಂಧವರ ಆಶೀರ್ವಾದವೇ ಮುಖ್ಯ. -ಗಿರೀಶ್‌ ಶೆಟ್ಟಿ ತೆಳ್ಳಾರ್‌, ನಿರ್ಗಮನ ಕಾರ್ಯಾಧ್ಯಕ್ಷರು, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next