Advertisement

ಮಹಿಳಾ ಸಬಲೀಕರಣಕ್ಕೆ ನೆರವು

01:03 PM Mar 12, 2017 | |

ಧಾರವಾಡ: ಸೋಲಾರ್‌ ಶಕ್ತಿಯನ್ನು ಬಳಸಿ ರೊಟ್ಟಿ ತಟ್ಟುವ ಯಂತ್ರವನ್ನು ಮಹಿಳೆಯರು ಇಂದು ಆರಾಮವಾಗಿ ಬಳಸಬಹುದು. ಇದು ಮಹಿಳೆಯರ ಸಬಲೀಕರಣಕ್ಕೆ ನೆರವಾಗುತ್ತದೆ ಎಂದು ಸೆಲ್ಕೋ ಸೋಲಾರ್‌ನ ಎಜಿಎಂ ಪ್ರಸನ್ನ ಹೆಗಡೆ ಹೇಳಿದರು. 

Advertisement

ತಾಲೂಕಿನ ಹೊನ್ನಾಪುರದಲ್ಲಿ ಸೋಲಾರ್‌ ಶಕ್ತಿಯ ಯಂತ್ರ ಬಳಸಿ ರೊಟ್ಟಿ ಮಾಡುವ ಮಹಿಳೆಯರೊಂದಿಗೆ ಇತ್ತೀಚೆಗೆ ಮಹಿಳಾ ದಿನ ಆಚರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಕಡಿತದಿಂದ ತೊಂದರೆಗೊಳಗಾಗಿದ್ದ ಮಹಿಳಾ ಉದ್ಯಮಿಗಳಿಗೆ ಸೋಲಾರ್‌ ರೊಟ್ಟಿ ಯಂತ್ರ ವರದಾನವಾಗಿ ಪರಿಣಮಿಸಿದೆ ಎಂದರು. 

ಸೆಲ್ಕೋ ಕಂಪನಿಯ ಸುರೇಶ ಸಾವಳಗಿ, ಧಾರವಾಡ ಶಾಖಾ ವ್ಯವಸಾœಪಕ ಗುರುಮೂರ್ತಿ ಮತ್ತು ಪ್ರತಿನಿಧಿ ಲೋಕೇಶ ಅವರು ಮಹಿಳಾ ದಿನಾಚರಣೆಗೆ ಶುಭ ಕೋರಿದರು. ಮಹಿಳೆಯರಿಗೆ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ, ಶಾವಿಗೆ ಯಂತ್ರ, ಖಾರಾ ಕಟ್ಟುವ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next