ಉಡುಪಿ,: ಗರೋಡಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಅನುದಾನ ಕೊಡಿಸಲು ಅವಕಾಶಗಳಿವೆ. ಗರೋಡಿಗಳ ಜಾಗವನ್ನು ಗರೋಡಿ ಹೆಸರಿನಲ್ಲಿ ಮಾಡಿಕೊಡಲು ತಹಶೀಲ್ದಾರ್‌ಗೆ ಅರ್ಜಿ ಕೊಡಿ. 3 ತಿಂಗಳಲ್ಲಿ ಜಾಗ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ. ಗರೋಡಿಗಳ ಗುರಿಕಾರರಿಗೆ ಮಾಸಾಶನ ಕೊಡಿಸಲು ಸದ್ಯವೇ ಸಭೆ ಕರೆಯುತ್ತೇನೆ…
Advertisement
ಇದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರ ಭರವಸೆ. ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ರವಿವಾರ ಪುರಭವನದಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸಮ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಸಮಾರೋಪ ಸಭೆಧಿಯಲ್ಲಿ ಮಾತನಾಡಿದ ಅವರು, ಗರೋಡಿಗಳ ದುರಸ್ತಿಗೆ ಮುಜರಾಯಿ ಇಲಾಖೆಯಿಂದ ಹಣ ಕೊಡಿಸಲು ಸಾಧ್ಯವಿದೆ. ಆದರೆ ಮುಜರಾಯಿ ಇಲಾಖೆಗಳಲ್ಲಿ ನೋಂದಣಿಯಾದ ದೇವಧಿಸ್ಥಾನಗಳಿಗೆ ಸಿಕ್ಕಿದಷ್ಟು ಸಿಗುವುಧಿದಿಲ್ಲ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್ ಅವರು, ಗರೋಡಿಗಳಿಗೆ ಅನುದಾನ ನೀಡಲು ಮುಜರಾಯಿ ಇಲಾಖೆಯಿಂದ ಸಾಧ್ಯವಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಸಮುದಾಯ ಭವನಕ್ಕೆ ಅನುದಾನ ನೀಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಹತ್ತಾರು ಬಿಲ್ಲವರ ಸಮುದಾಯ ಭವನಕ್ಕೆ ಹಣ ಮಂಜೂರು ಮಾಡಿದ್ದೇನೆ. ಗರೋಡಿಗಳ ಗುರಿಕಾರರಿಗೆ ಮಾಸಾಶನ ನೀಡಲು ಸಭೆಯನ್ನು ಕರೆಯುತ್ತೇವೆ ಎಂದು ತಿಳಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ಮಾಜಿ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಶಾಸಕ ಬಸವರಾಜ್, ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ್ ಸುವರ್ಣ, ಸಾಮಾಜಿಕ ಮುಖಂಡ ಕೆ. ಉದಯಕುಮಾರ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಖ್ಯಸ್ಥ ಅಶೋಕ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಸ್ವಾಗತಿಸಿ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಪ್ರಸ್ತಾವನೆಗೈದರು.
Related Articles
ಆರಾಧನಾ ಸ್ಕೀಮ್‌ನಡಿ ಗರೋಡಿಧಿಗಳಿಗೆ ಅನುದಾನ ನೀಡಲು ಸಾಧ್ಯ. ಹಿಂದೆ ಜೈನರು, ಬಂಟರನ್ನು ಸೇರಿಸಿಕೊಂಡು ಗರೋಡಿಗಳ ಚಿಂತನ ಮಂಥನ ನಡೆದಿತ್ತು. ಆದರೆ ದ್ವಂದ್ವ ಉಂಟಾಗಿತ್ತು. ಗರೋಡಿಗಳು ಕೇವಲ ಬಿಲ್ಲವರ ಕೇಂದ್ರವಾಗಿರದೆ ಎಲ್ಲರ ಕೇಂದ್ರವಾಗಿರುವುದರಿಂದ ಎಲ್ಲರನ್ನೂ ಸೇರಿಸಿಕೊಂಡು ಸಮಗ್ರ ಚಿಂತನೆ ನಡೆಸಬೇಕು ಎಂದು ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ವಿನಯ ಕುಮಾರ ಸೊರಕೆ ಹೇಳಿದರು.
Advertisement
ಗೇಣಿದಾರರಿಗೆ ಮೋಸ ಮಾಡಿದವರು…ದೇವರಾಜ ಅರಸು ಕಾಲದಲ್ಲಿ 1974ರಲ್ಲಿ ಭೂಮಸೂದೆ ಕಾಯಿದೆ ಜಾರಿಗೆ ಬಂದಾಗ ನಾನು ಶಾಸಕನಾಗಿ ಅರ್ಜಿ ಪತ್ರಗಳನ್ನು ಮುದ್ರಿಸಿ ಇಲ್ಲಿಗೂ ತಂದು ವಿತರಿಸಲು ಹೇಳಿದ್ದೆ. ಕುಂದಾಪುರ ತಾಲೂಕಿನಲ್ಲಿ ಯಾರ್ಯಾರು ಯಾವ್ಯಾವ ರೈತರಿಗೆ ಮೋಸ ಮಾಡಿದ್ದಾರೆ? ಶಾಸಕರೂ ಏನೇನು ಮಾಡಿದ್ದಾರೆನ್ನುವುದು ಗೊತ್ತಿದೆ. – ಕಾಗೋಡು ತಿಮ್ಮಪ್ಪ ನಮ್ಮಿಂದಲೂ ತಪ್ಪು…
ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಕಾಲದಲ್ಲಿ ಕೋಟಿ ಚೆನ್ನಯರು ಗರೋಡಿಧಿ ನಿರ್ಮಿಸಿದರು. ಈಗ ಗರೋಡಿಗಳಲ್ಲಿ ಕೊರಗರು ದೂರಧಿದಲ್ಲಿ ನಿಂತು ಡೋಲು ಹೊಡೆಯುತ್ತಿದ್ದಾರೆ. ನಾವು ಅದೇ ತಪ್ಪು ಮಾಡುಧಿತ್ತಿದ್ದೇವೆ. ಕೊರಗರನ್ನು ಒಳಗೆ ಕರೆದು ಡೋಲು ಸೇವೆ ನಡೆಸುವಂತೆ ನೋಡಬೇಕು.
– ಸೂರ್ಯೋದಯ ಪೆರಂಪಳ್ಳಿ, ನಟ, ನಿರ್ದೇಶಕ, ನಿರ್ಮಾಪಕ (ಗೋಷ್ಠಿಯಲ್ಲಿ)