ಉಡುಪಿ: ಕರಾವಳಿಯಲ್ಲಿ ಮಳೆಗಾಲ ಆರಂಭವಾದ ಬಳಿಕ ಕೃಷಿ ಕಾರ್ಯಗಳು ವೇಗದಲ್ಲಿ ನಡೆಯುತ್ತಿವೆ. ಈಗಾಗಲೇ ಕೆಲವೆಡೆ ನಾಟಿ ಕಾರ್ಯ ಕೂಡ ಆರಂಭವಾಗಿದೆ. ಹಲವು ವರ್ಷಗಳ ಬಳಿಕ ಯುವಕರಲ್ಲಿ ಕೃಷಿ ಆಸಕ್ತಿ ಹೆಚ್ಚಿದೆ.
ಹಡಿಲು ಭೂಮಿಯನ್ನು ಹದಗೊಳಿಸಿ ಫಸಲು ತೆಗೆಯುವ ಯತ್ನದಲ್ಲಿದ್ದಾರೆ. ಇದಕ್ಕೆಲ್ಲ ಪೂರಕವಾಗಿರುವುದು ಯಂತ್ರೋಪಕರಣಗಳ ಬಳಕೆ. ಹಿಂದಿನ ಕಾಲದ ರೀತಿಯಲ್ಲಿ ಕೋಣ, ಎತ್ತು ಖರೀದಿಸಿ ಉಳುಮೆ ಮಾಡುವುದು ಈಗ ಹೊಸಬರಿಗೆ ಕಷ್ಟಸಾಧ್ಯ ಎಂದೇ ಹೇಳಬಹುದು.
ಸಾಕಷ್ಟು ಕೃಷಿ ಯಂತ್ರಗಳು ಇದ್ದರೂ ಕೆಲವು ಸಂದರ್ಭ ಮಾಹಿತಿಯ ಕೊರತೆಯಿಂದಾಗಿ ಸಕಾಲದಲ್ಲಿ ಸಿಗುವುದಿಲ್ಲ. ಇನ್ನು ಕೆಲವು ಸಂದರ್ಭ ಬಾಡಿಗೆ ಎಷ್ಟು ಎಂಬ ಮಾಹಿತಿ ಇರದೆ ಕೆಲವರು ಅತಿಯಾದ ಬಾಡಿಗೆ ಪಾವತಿಸಿ ಕೈ ಸುಟ್ಟುಕೊಳ್ಳುವ ಅಪಾಯವೂ ಇದೆ.
ಹಲವಾರು ಯುವ ಕೃಷಿಕರು ಮುಖ್ಯವಾಗಿ ವಿವಿಧ ಯಂತ್ರಗಳ ಬಾಡಿಗೆ ದರದ ಕುರಿತಾಗಿ ಉದಯವಾಣಿ ರೈತ ಸೇತುಗೆ ಮಾಹಿತಿ ಕೇಳಿ ಸಂದೇಶ ಕಳುಹಿಸಿದ್ದಾರೆ.
ಆದುದರಿಂದ ಈ ಬಾರಿ ಬೇರೆ ಬೇರೆ ಯಂತ್ರಗಳ ಬಾಡಿಗೆಯ ಮಾಹಿತಿಯನ್ನು ನೀಡಲಾಗಿದೆ. ಕೃಷಿ ಯಂತ್ರಧಾರೆ ಮತ್ತು ಹೊರಗಿನಿಂದ ಸಿಗುವ ಯಂತ್ರಗಳ ಬಾಡಿಗೆ ದರದಲ್ಲಿ ಸ್ವಲ್ಪ ಬದಲಾವಣೆ ಇರುವ ಸಾಧ್ಯತೆ ಇದೆ.