Advertisement

ACB ಬಲೆಗೆ ಪಾಲಿಕೆ ಅಧಿಕಾರಿ… ಮನೆಯಲ್ಲಿದ್ದ ಕಂತೆ ಕಂತೆ ಹಣ ಕಂಡು ದಂಗಾದ ಅಧಿಕಾರಿಗಳು

08:47 AM Aug 10, 2024 | Team Udayavani |

ತೆಲಂಗಾಣ: ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ನಿಜಾಮಾಬಾದ್ ಮಹಾನಗರ ಪಾಲಿಕೆಯ ಅಧೀಕ್ಷಕ ಹಾಗೂ ಪ್ರಭಾರಿ ಕಂದಾಯ ಅಧಿಕಾರಿ ದಾಸರಿ ನರೇಂದರ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

Advertisement

ಹೈದರಾಬಾದ್ ನಲ್ಲಿ ಮತ್ತೊಂದು ಭ್ರಷ್ಟ ತಿಮಿಂಗಿಲ ಎಸಿಬಿ ಬಲೆಗೆ ಬಿದ್ದಿದೆ. ನಿಜಾಮಾಬಾದ್ ನಗರಸಭೆ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದಾಸರಿ ನರೇಂದ್ರನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳೇ ಶಾಕ್ ಗೆ ಒಳಗಾಗೊದ್ದರೆ ಅಂದರೆ ಅಷ್ಟು ಮೌಲ್ಯದ ನಗ ನಗದು ಅಧಿಕಾರಿಯ ಮನೆಯಲ್ಲಿ ಪತ್ತೆಯಾಗಿದೆ.

ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 9) ಬೆಳಿಗ್ಗೆ ದಾಸರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮನೆ ಶೋಧ ನಡೆಸಿದ ವೇಳೆ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು ಲೆಕ್ಕಾಚಾರ ಮಾಡಿದ ವೇಳೆ ಮೂರೂ ಕೋಟಿ ರೂಪಾಯಿ ನಗದು ಇರುವುದು ಬೆಳಕಿಗೆ ಬಂದಿದೆ. ನರೇಂದರ್ ಅವರ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂ. ಮನೆಯ ಟ್ರಂಕ್‌ನಲ್ಲಿ ಅರ್ಧ ಕಿಲೋ ಚಿನ್ನ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ 17 ದಾಖಲೆಗಳು ಪತ್ತೆಯಾಗಿವೆ. ಈವರೆಗೆ ನಡೆಸಿದ ಶೋಧದಲ್ಲಿ ದಾಸರಿ ನರೇಂದರ್ ಅವರಿಂದ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯ 6.07 ಕೋಟಿ ರೂ. ಆಗಿದೆ ಎಂದು ಹೇಳಲಾಗಿದೆ.

ತಂದೆಯ ಮರಣದ ನಂತರ ಅನುಕಂಪದ ಆಧಾರದ ನರೇಂದರ್ ಅವರಿಗೆ ಹುದ್ದೆ ನೀಡಲಾಗಿತ್ತು, ನರೇಂದರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, ಸೆಕ್ಷನ್ 13(1)(ಬಿ) ಮತ್ತು 13(2), ಅಡಿಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Daily Horoscope: ಆರೋಗ್ಯ ಉತ್ತಮ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next