Advertisement

ಚುನಾವಣ ಅಕ್ರಮ ದೂರು: ಹಾಸನ ಪ್ರಥಮ

12:00 AM Mar 27, 2019 | Team Udayavani |

ಬೆಂಗಳೂರು: ಪಕ್ಷದ ಕಾರ್ಯಕರ್ತರು ಗುಟ್ಟಾಗಿ ಕೊಡುತ್ತಿರುವ ಗಿಫ್ಟ್ ಕೂಪನ್‌ಗಳು; ಮತ್ತೂಂದೆಡೆ ಅಭ್ಯರ್ಥಿಯೊಬ್ಬರ ಬೆಂಬಲಿಗನ
ಕೈ ಯಿಂದ ಮತದಾರನ ಕೈಗೆ ಹೋಗುತ್ತಿರುವ ಹಣ- ಹೆಂಡ… ಇಂಥ ಹಲವು ಪ್ರಕರಣಗಳನ್ನು ಈಗ ಸ್ವತಃ ಮತದಾರರು ಪತ್ತೆಹಚ್ಚಿ ಚುನಾವಣ ಆಯೋಗಕ್ಕೆ ನೀಡುತ್ತಿದ್ದಾರೆ!

Advertisement

– ಇದು ಚುನಾವಣೆಯಲ್ಲಿ ಅಕ್ರಮ ತಡೆಗೆ ಚುನಾವಣ ಆಯೋಗ ಪರಿ ಚಯಿಸಿರುವ “ಸಿ-ವಿಜಿಲ್‌’ ಆ್ಯಪ್‌ ಪರಿ ಣಾಮ. ಆ್ಯಪ್‌ ಬಿಡುಗಡೆ ಮಾಡಿದ 25 ದಿನ ಗಳ ಅಂತರದಲ್ಲಿ ರಾಜ್ಯದಲ್ಲಿ ಚುನಾವಣ ಆಮಿಷ ವೊಡ್ಡಿದ ಸುಮಾರು 850ಕ್ಕೂ ಅಧಿಕ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಚಿತ್ರ ಸಹಿತ ದೂರುಗಳನ್ನು ನೀಡಿದ್ದಾರೆ. ಹೆಚ್ಚು ದೂರು ದಾಖಲಾದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳ ತವರು ಹಾಸನ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ 139 ದೂರುಗಳು ಬಂದಿವೆ (ಸಾಬೀತು-11 ಮಾತ್ರ).

ಇದರಲ್ಲಿ ಮತದಾರರಿಗೆ ಉಡುಗೊರೆ ನೀಡು ತ್ತಿರುವುದು, ಮದ್ಯ ಹಂಚುತ್ತಿರುವುದು, ಹಣ ವಿತರಿಸುತ್ತಿರುವುದು ಸಹಿತ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಚುನಾ ವಣೆ ಸಮೀಪಿಸುತ್ತಿದ್ದಂತೆ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ರಾಯಚೂರು ಮತ್ತು ಬೆಂಗಳೂರು ನಗರ ಕ್ರಮ ವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಈ ಎರಡೂ ಜಿಲ್ಲೆಗಳಿಂದ ಕ್ರಮವಾಗಿ 70 ಮತ್ತು 65 ದೂರುಗಳು ದಾಖಲಾಗಿವೆ. ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದರೂ ಸಾಬೀತಾದ ಪ್ರಕರಣಗಳ ಪ್ರಮಾಣ ತುಂಬಾ ಕಡಿಮೆ ಇದೆ. ಕೇವಲ 159 ದೂರುಗಳು ದೃಢಪಟ್ಟಿವೆ.

ಅಧಿಕಾರಿಗಳಿಗೂ ಬಿಸಿ

Advertisement

ರಾಜ್ಯದಲ್ಲಿ ಚುನಾವಣ ಆಯೋಗದ 8,386 ಸಿಬಂದಿ ಚುನಾವಣ ಅಕ್ರಮ ಮತ್ತು ದೂರುಗಳನ್ನು ಪರಿಶೀಲಿಸುವುದಕ್ಕೆ ನೇಮಕಗೊಂಡಿದ್ದಾರೆ. ಮೂರು ಪಾಳಿಗಳಲ್ಲಿ ಸಿಬಂದಿ ಕೆಲಸ ಮಾಡು ತ್ತಿದ್ದು, ಪ್ರತಿ ತಂಡದಲ್ಲಿ 3 ಜನ ಸಿಬಂದಿಯನ್ನು ನೇಮಿಸ ಲಾಗಿದೆ. ಈ ಹಿಂದೆ ಸಿಬಂದಿಯ ಕಾರ್ಯ ವೈಖರಿ ತಿಳಿಯುತ್ತಿರಲಿಲ್ಲ. ಆ್ಯಪ್‌ ಪರಿಚಯಿ ಸಿರುವುದರಿಂದ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಟ್ರ್ಯಾಕ್‌ ಆಗುತ್ತಿದೆ. ಇದರಿಂದ ಸಿಬಂದಿ ಬೇಗ ಪ್ರತಿಕ್ರಿಯಿಸುತ್ತಿದ್ದು, ಗೊಂದಲವೂ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next