Advertisement

ಅಂಗವಿಕಲ ಪವರ್‌ಲಿಫ್ಟರ್‌ ಮೇಲೆ ಹಲ್ಲೆ

10:11 AM Jul 29, 2017 | |

ನವದೆಹಲಿ: ಕ್ಷುಲಕ ವಿಷಯವೊಂದು ವಿಕೋಪಕ್ಕೆ ತಿರುಗಿದ್ದರಿಂದ ಮಾಜಿ ಅಂತಾರಾಷ್ಟ್ರೀಯ ಅಂಗವಿಕಲ ಪವರ್‌ಲಿಫ್ಟರ್‌ ಕ್ರೀಡಾಪಟುವೊಬ್ಬರ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನವದೆಹಲಿಯ ಪಹರ್ಗಂಜ್‌ನಲ್ಲಿ ನಡೆದಿದೆ.

Advertisement

ಶುಕ್ರವಾರ ಬೆಳಗ್ಗೆ 1 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ಮಾಜಿ ಪವರ್‌ಲಿಫ್ಟರ್‌ ಅನಿಲ್‌ ಶರ್ಮ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಬಿ.ಎಲ್‌.ಕಪೂರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ. ಆಶು ಎಂಬಾತ ಹಲ್ಲೆ ಮಾಡಿದ್ದು ಆತ ತಲೆ ಮರೆಸಿಕೊಂಡಿದ್ದಾನೆ. ಪೊಲೀಸ್‌ ತನಿಖೆ ಮುಂದುವರಿದಿದೆ.

ಏನಿದು ಘಟನೆ?: ಅನಿಲ್‌ ಹಾಗೂ ಆತನ ಗೆಳೆಯ ರಾತ್ರಿ ರೆಸ್ಟೋರೆಂಟ್‌ಗೆ ತೆರಳಿದ್ದರು. ಗೆಳೆಯನನ್ನು ಮನೆಗೆ ಡ್ರಾಪ್‌ ಮಾಡಲು ಜತೆಗೆ ಅನಿಲ್‌ ಬಂದಿದ್ದಾರೆ. ಈ ವೇಳೆ ಅವರಿಬ್ಬರು ಮನೆ ಮುಂದೆ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಪಕ್ಕದಲ್ಲಿ ನಿಂತಿದ್ದ ಸ್ಕೂಟರ್‌ಗೆ ಗೆಳೆಯ ಒರಗಿಕೊಂಡಿದ್ದಾಗ ಇದನ್ನು ಆಶು ಎಂಬಾತ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದಾಗ ಆಶು ಗೆಳಯರು ಅಲ್ಲಿಗೆ ಬಂದಿದ್ದಾರೆ. ಹೆಚ್ಚು ಮಾತನಾಡಿದ್ದ ಅನಿಲ್‌ ಮೇಲೆ ರಾಡ್‌ ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next