ನವದೆಹಲಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ ಆರ್ ಸಿ) ಮಾಜಿ ಸಂಯೋಜಕ ಪ್ರತೀಕ್ ಹಜೆಲಾ ಮತ್ತು ಅವರ ಆಪ್ತರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಬುಧವಾರ(ಜೂನ್ 23) ವರದಿ ತಿಳಿಸಿದೆ.
ಇದನ್ನೂ ಓದಿ:ಟಿವಿ ಇತಿಹಾಸದ ಹೊಸ ಅಧ್ಯಾಯ “ಟ್ರಾನ್ಸ್ ಪರೆಂಟ್ ಟಿವಿ”
ರಾಷ್ಟ್ರೀಯ ನಾಗರಿಕರ ನೋಂದಣಿ ಅಪ್ ಡೇಟ್ ಮಾಡುವಾಗ “ವಂಶವೃಕ್ಷ”(ಫ್ಯಾಮಿಲಿ ಟ್ರೀ) ವೆರಿಫಿಕೇಶನ್ ಸಂದರ್ಭದಲ್ಲಿ ಕೈಚಳಕ ತೋರಿಸುತ್ತಿದ್ದರು ಎಂಬ ಆರೋಪ ಬಂದಿರುವುದಾಗಿ ಅಸ್ಸಾಂ ಪಬ್ಲಿಕ್ ವರ್ಕ್ಸ್ ನ ಅಭಿಜೀತ್ ಶರ್ಮಾ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಎನ್ ಆರ್ ಸಿ ಪಟ್ಟಿಯಲ್ಲಿ ದೋಷಗಳಿದ್ದು, ಈ ಪಟ್ಟಿಯನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಅಸ್ಸಾಂ ಸರ್ಕಾರ ಮತ್ತು ಪ್ರಸ್ತುತ ಎನ್ ಆರ್ ಸಿಯ ರಾಜ್ಯ ಕೋ ಆರ್ಡಿನೇಟರ್ ಹಿತೇಶ್ ದೇವ್ ಶರ್ಮಾ ಸುಪ್ರೀಂಕೋರ್ಟ್ ಮೊರೆ ಹೋದ ನಂತರ ಈ ದೂರು ದಾಖಲಾಗಿದೆ ಎಂದು ವರದಿ ಹೇಳಿದೆ.
1971ರ ಪೂರ್ವದಲ್ಲಿ ತಮ್ಮ ಪೋಷಕರು ಅಥವಾ ಅಜ್ಜ, ಅಜ್ಜಿ ಜತೆಗಿನ ಸಂಬಂಧವನ್ನು ಸಾಬೀತುಪಡಿಸಲು ಅರ್ಜಿದಾರರು ಒದಗಿಸಿದ ವಿವರಗಳ ಆಧಾರದ ಮೇಲೆ ಸಾಫ್ಟ್ ವೇರ್ ಮೂಲಕ ಎನ್ ಆರ್ ಸಿ ಕಚೇರಿ ವಂಶವೃಕ್ಷ(ಫ್ಯಾಮಿಲಿ ಟ್ರೀ)ವನ್ನು ತಯಾರಿಸಿತ್ತು.
1971ರ ನಂತರ ಬಂದ ವಲಸಿಗರನ್ನು ಪ್ರತ್ಯೇಕಿಸುವ ಉದ್ದೇಶದಿಂದ 1971ರ ಮಾರ್ಚ್ 24ರ ದಿನಾಂಕ (ಕಟ್ ಆಫ್) ನಿಗದಿಗೊಳಿಸಿ ಎನ್ ಆರ್ ಸಿ ಡಾಟಾವನ್ನು ತಯಾರಿಸಿರುವುದಾಗಿ ವರದಿ ತಿಳಿಸಿದೆ.