Advertisement
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಎಂಬ ಪ್ರದೇಶದಲ್ಲಿ ಮನೆಯೊಂದರಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಮತ್ತು ಅವರು ಮನೆಯರನ್ನು ಒತ್ತೆ ಸೆರೆಯಲ್ಲಿರಿಸಿಕೊಂಡಿದ್ದಾರೆ ಎಂಬ ಮಾಹಿತಿ ಜಮ್ಮು ಕಾಶ್ಮೀರ ಪೊಲೀಸರಿಗೆ ಹಾಗೂ ಭದ್ರತಾ ಪಡೆಗಳಿಗೆ ಸಿಗುತ್ತದೆ.
Related Articles
ಬಹಳ ಹೊತ್ತಾದರೂ ಶಂಕಿತ ಉಗ್ರರಿದ್ದ ಮನೆಯೊಳಗೆ ಪ್ರವೇಶಿದ ಐವರು ಭದ್ರತಾ ಸಿಬ್ಬಂದಿಗಳ ಸುಳಿವೇ ಇರುವುದಿಲ್ಲ. ಈ ಹಂತದಲ್ಲಿ ಇವರಿಗಾಗಿ ಮನೆಯ ಹೊರ ಆವರಣದಲ್ಲಿ ಕಾಯುತ್ತಿದ್ದ ಇನ್ನೊಂದು ತಂಡ ಇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮತ್ತು ತಾವು ಮನೆಯ ಮೇಲೆ ದಾಳಿ ನಡೆಸಬೇಕೇ ಬೇಡವೇ ಎಂಬ ಗೊಂದಲವೂ ಇವರಿಗೆಲ್ಲಾ ಕಾಡುತ್ತಿರುತ್ತದೆ.
Advertisement
ಶನಿವಾರ ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಶಂಕಿತ ಉಗ್ರರು ಅಡಗಿ ಕುಳಿತಿದ್ದ ಆ ಮನೆಯೊಳಗೆ ಪ್ರವೇಶಿಸಿದ್ದ ಐವರು ಭದ್ರತಾ ಪಡೆಯ ಯೋದರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸಲಾಯತು, ಮತ್ತು ಕರ್ನಲ್ ಅಶುತೋಶ್ ಶರ್ಮಾ ಅವರ ಮೊಬೈಲ್ ಗೆ ನಿರಂತರವಾಗಿ ಕರೆ ಮಾಡಲಾಗುತ್ತದೆ ಎಂದು ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರೊಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.
ಆದರೆ ರಾತ್ರಿ 10 ಗಂಟೆಯ ಸುಮಾರಿಗೆ ಇವರ ಪ್ರಯತ್ನ ಫಲನೀಡುತ್ತದೆ, ಕರ್ನಲ್ ಶರ್ಮಾ ಅವರ ಫೋನಿಗೆ ಮಾಡುತ್ತಿದ್ದ ನಿರಂತರ ಕರೆಗೆ ಆ ಕಡೆಯಿಂದ ಕೊನೆಗೂ ಉತ್ತರ ಬರುತ್ತದೆ ‘ಅಸ್ಸಾಲಮುಅಲೈಕುಮ್’!ಆ ಸಂದರ್ಭದಲ್ಲಿ ಈ ಪದವನ್ನು ಕೇಳಿದ ಭದ್ರತಾ ಅಧಿಕಾರಿಗಳಿಗೆ ಒಂದು ವಿಷಯ ಖಚಿತವಾಗುತ್ತದೆ, ಅದೆಂದರೆ ಶಂಕಿತ ಉಗ್ರರಿದ್ದ ಮನೆಯೊಳಗೆ ನುಗ್ಗಿರುವ ನಮ್ಮ ಯೋಧರನ್ನು ಅವರು ಹಿಡಿದಿಟ್ಟುಕೊಂಡು ಅವರಲ್ಲಿದ್ದ ಸಂಪರ್ಕ ಸಾಧನವನ್ನು ವಶಪಡಿಸಿಕೊಂಡಿದ್ದಾರೆ ಎಂಬುದು ಖಚಿತವಾಗುತ್ತದೆ. ಅಲ್ಲಿಯವರೆಗೆ ತಡೆಹಿಡಿಯಲಾಗಿದ್ದ ಗುಂಡಿನ ದಾಳಿಯನ್ನು ಮತ್ತೆ ಪ್ರಾರಂಭಿಸಲಾಗುತ್ತದೆ. ಮತ್ತು ಈ ದಾಳಿ ಶನಿವಾರ ರಾತ್ರಿಯಿಡೀ ನಡೆದು ರವಿವಾರ ಬೆಳಗಿನ ಜಾವದವರೆಗೆ ಸಾಗುತ್ತದೆ. ಮತ್ತು ಭದ್ರತಾ ಪಡೆಗಳಿಗೆ ಗುಂಡಿನ ದಾಳಿಯನ್ನು ನಿಲ್ಲಿಸಲು ಈಗ ಯಾವುದೇ ಕಾರಣ ಇರಲಿಲ್ಲ ಬದಲಾಗಿ ಅವರ ಮುಂದಿದ್ದ ಸವಾಲು ಮನೆಯೊಳಗೆ ಅಡಗಿರುವ ಶಂಕಿತರನ್ನು ಮಣಿಸಿ ತಮ್ಮವರನ್ನು ಉಳಿಸಿಕೊಳ್ಳುವುದೊಂದೇ ಆಗಿತ್ತು. ಎನ್ ಕೌಂಟರ್ ನ ಮೊದಲ ಭಾಗದಲ್ಲಿ, ಮನೆಯೊಳಗೆ ಒತ್ತೆಯಾಳುಗಳಾಗಿದ್ದ ಕುಟುಂಬದವರ ರಕ್ಷಣೆ ಇವರೆಲ್ಲರ ಮೊದಲ ಆದ್ಯತೆಯಾಗಿತ್ತು. ಹಾಗಾಗಿ ಈ ಹಂತದಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಲಾಗಿತ್ತು. ಆದರೆ ಅವರನ್ನೆಲ್ಲಾ ಕರ್ನಲ್ ಶರ್ಮಾ ಮತ್ತವರ ತಂಡದವರು ಉಗ್ರರಿಂದ ಬಿಡುಗಡೆಗೊಳಿಸಿದ ನಂತರ ಈ ತಂಡದ ರಕ್ಷಣೆ ಭದ್ರತಾ ಪಡೆಗಳ ಆದ್ಯತೆಯಾಗಿ ಮಾರ್ಪಟ್ಟಿತ್ತು. ಗುಂಡಿನ ದಾಳಿಯ ಬಳಿಕ ಆ ಮನೆಯೊಳಗೆ ಪ್ರವೇಶಿದ ಭದ್ರತಾ ಪಡೆಗಳಿಗೆ ಇಬ್ಬರು ಉಗ್ರರು ಸತ್ತು ಬಿದ್ದಿರುವುದು ಕಾಣಿಸುತ್ತದೆ. ಅವರಲ್ಲೊಬ್ಬ ಹೈದರ್ ಪಾಕಿಸ್ತಾನಿ ಪ್ರಜೆಯಾಗಿದ್ದು ಕಾಶ್ಮೀರದಲ್ಲಿ ಲಷ್ಕರ್ – ಇ- ತೆಯ್ಯಬಾದ ಉನ್ನತ ಕಮಾಂಡರ್ ಗಳಲ್ಲಿ ಒಬ್ಬನಾಗಿದ್ದ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡು ಮನೆಯ ದನದ ಕೊಟ್ಟಿಗೆಯಲ್ಲಿ ಅವಿತಿದ್ದ ಉಗ್ರರು ಕರ್ನಲ್ ಶರ್ಮಾ ನೇತೃತ್ವದ ತಂಡ ಒಳಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 13 ಗಂಟೆಗಳಿಗೂ ಹೆಚ್ಚು ಹೊತ್ತು ನಡೆದ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ನಾಲ್ವರು ಯೋಧರು ಹಾಗೂ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಓರ್ವ ಸಬ್ ಇನ್ ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ ಮತ್ತು ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗಿವೆ.