Advertisement

7 ತಾಸು ವಿದ್ಯುತ್‌ ಪೂರೈಸಲು ಆಗ್ರಹಿಸಿ ಧರಣಿ

03:32 PM Mar 29, 2022 | Shwetha M |

ಬಸವನಬಾಗೇವಾಡಿ: ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ತಾಸು ಪೂರ್ಣ ಪ್ರಮಾಣದ ವಿದ್ಯುತ್‌ ಸರಬುರಾಜು ಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಣದ ವಿದ್ಯುತ್‌ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಿತು.

Advertisement

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ಹಾಗೂ ಪಟ್ಟಣದ ಬಾಗಲಕೋಟೆ ಜಿಲ್ಲೆಯಲ್ಲಿ ಹಗಲು ಹೊತ್ತು ನಿರಂತರ 7 ತಾಸು ವಿದ್ಯುತ್‌ ಪೂರೈಸಲಾಗುತ್ತದೆ. ಆದರೆ ಬಸವನಬಾಗೇವಾಡಿ ತಾಲೂಕಿಗೆ ಮಾತ್ರ ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.

ಹಗಲು ಹೊತ್ತಿನಲ್ಲಿ ನಿರಂತರ 7 ತಾಸು ವಿದ್ಯುತ್‌ ಪೂರೈಸಬೇಕೆಂದು ಆದೇಶವಿದೆ. ಆದರೆ ಬಸವನಬಾಗೇವಾಡಿ ತಾಲೂಕಿನ ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಗಲು ಮತ್ತು ರಾತ್ರಿ ಕೇವಲ 2 ತಾಸು ವಿದ್ಯುತ್‌ ನೀಡುತ್ತಿದ್ದು. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕಳೆದ ವರ್ಷ ಅಕಾಲಿಕ ಮಳೆಯಿಂದ ರೈತರ ಬೆಳೆ ಹಾಳಾಗಿದೆ. ಈಗ ಅಲ್ಪ ಸ್ವಲ್ಪ ಬೆಳೆಯನ್ನು ರೈತರು ಪಡೆಯಬೇಕಾದರೆ ವಿದ್ಯುತ್‌ನ ಸಮಸ್ಯೆಯಿಂದ ಅದು ಕೂಡಾ ಆಗುತ್ತಿಲ್ಲ ಎಂದು ಹೇಳಿದರು.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಬಸವನಬಾಗೇವಾಡಿ ತಾಲೂಕಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ತಾಸ್‌ ವಿದ್ಯುತ್‌ ಪೂರೈಕೆ ಮಾಡುವರೆಗೂ ನಮ್ಮ ಈ ಧರಣಿ ಸತ್ಯಾಗ್ರಹ ಕೈ ಬಿಡಲ್ಲ ಎಂದರು.

ಧರಣಿಯಲ್ಲಿ ಚನ್ನಬಸಪ್ಪ ಸಿಂಧೂರ, ಹೊನಕೇರಪ್ಪ ತೆಲಗಿ, ವಿಠ್ಠಲ ಬಿರಾದಾರ, ಶ್ರೀಶೈಲ ಸಾಸನೂರ, ಬಸವನಗೌಡ ಬಿರಾದಾರ, ಗುರಲಿಂಗಪ್ಪ ಪಡಸಲಗಿ, ಶಂಕರಪ್ಪ ಹಚಡದ, ಬಸವರಾಜ ಸುಂಟಾಣಿ, ಸಂಗಪ್ಪ ಪಡಸಲಗಿ, ರಾಯಪ್ಪ ದಳವಾಯಿ, ಗುರುಣ್ಣಗೌಡ ಬಿರಾದಾರ, ಪರಶುರಾಮ ದೊಡ್ಡಮನಿ, ಎಂ.ಜಿ. ಪಾಟೀಲ ಸೇರಿದಂತೆ ಅನೇಕರು ಭಾಗವಹಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next