Advertisement

ಏಶ್ಯ ರೋಲ್‌ಬಾಲ್‌: ಪಾಕಿಸ್ಥಾನಕ್ಕೆ ಕೊಕ್‌​​​​​​​

12:35 AM Feb 21, 2019 | |

ಬೆಳಗಾವಿ: ಪುಲ್ವಾಮ ದಾಳಿಯ ಅನಂತರ ಪಾಕಿಸ್ಥಾನ ವಿರುದ್ಧ ಎಲ್ಲ ಸಂಬಂಧ ಕಡಿದುಕೊಳ್ಳಬೇಕೆಂಬ ಕೂಗು ತೀವ್ರಗೊಂಡ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆಯುವ ಏಶ್ಯನ್‌ ರೋಲ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪಾಕಿಸ್ಥಾನಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರೋಲ್‌ಬಾಲ್‌ ಒಕ್ಕೂಟದ ನಿರ್ದೇಶಕ ಮನೋಜಕುಮಾರ ಯಾದವ ತಿಳಿಸಿದ್ದಾರೆ.

Advertisement

ಫೆ. 21ರಿಂದ 24ರ ವರೆಗೆ ನಡೆಯಲಿರುವ 3ನೇ ಏಶ್ಯನ್‌ ರೋಲ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ 11 ತಂಡಗಳು ಭಾಗವಹಿಸುತ್ತಿವೆ.

ತರಬೇತಿ ನಡೆಸಿದ್ದ ಪಾಕ್‌
ಬೆಳಗಾವಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಏಶ್ಯ ರೋಲ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನ ತಂಡಕ್ಕೆ ಆರಂಭದಲ್ಲಿ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಪಾಕ್‌ ಅನೇಕ ತಿಂಗಳುಗಳಿಂದ ತರಬೇತಿ ಕೂಡ ನಡೆಸುತ್ತಿತ್ತು.

10 ತಂಡಗಳ ಆಗಮನ
ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಕಾಂಬೋಡಿಯ, ನೇಪಾಲ, ಭೂತಾನ್‌, ಸೌದಿ ಅರೇಬಿಯಾ, ಒಮಾನ್‌, ಮಲೇಶ್ಯ, ಯೆಮನ್‌, ಮಾಲ್ಡೀವ್ಸ್‌ ಮತ್ತು ಪಾಕಿಸ್ಥಾನ ಸೇರಿದಂತೆ 12 ದೇಶಗಳ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು. ಈಗಾಗಲೇ 10 ದೇಶಗಳ ಆಟಗಾರರು ಬೆಳಗಾವಿಗೆ ಬಂದಿಳಿದಿದ್ದಾರೆ. ಪ್ರತಿದಿನ ಸಂಜೆ 4.30ರಿಂದ ರಾತ್ರಿ 11 ಗಂಟೆ ವರೆಗೆ ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next