Advertisement
ರವಿವಾರ ತಡರಾತ್ರಿ ಮಸ್ಕತ್‌ನಲ್ಲಿ ನಡೆಯಬೇಕಿದ್ದ ಈ ಪಂದ್ಯದ ಆರಂಭಕ್ಕೂ ಮುನ್ನ ಭಾರೀ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ವಿಳಂಬವಾಗಿ ಆರಂಭಿಸಲು ನಿರ್ಧರಿಸಲಾಯಿತು. ಬಳಿಕ ಪಂದ್ಯ ನಿಂತರೂ ಹಾಕಿ ಟಫ್ì ಭಾರೀ ಹಾನಿಗೀಡಾದ್ದರಿಂದ ಪಂದ್ಯವನ್ನು ನಡೆಸುವುದೇ ಅಸಾಧ್ಯವಾಗಿ ಪರಿಣಮಿಸಿತು. ಕೂಟದ ನಿರ್ದೇಶಕರು ಎರಡೂ ತಂಡಗಳ ಕೋಚ್ ಜತೆ ಮಾತುಕತೆ ನಡೆಸಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದರು. ಹಾಗೆಯೇ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ತೀರ್ಮಾನಿಸಿ ಟ್ರೋಫಿ ನೀಡಲಾಯಿತು.
ಭಾರತದ ಆಕಾಶ್‌ದೀಪ್ ಪಂದ್ಯಾ ವಳಿಯ ಶ್ರೇಷ್ಠ ಆಟಗಾರ, ಪಿ.ಆರ್. ಶ್ರೀಜೇಶ್ ಅತ್ಯುತ್ತಮ ಗೋಲ್‌ಕೀಪರ್, ಪಾಕಿಸ್ಥಾನದ ಬಕ್ಕರ್ ಮಹಮೂದ್ ಕೂಟದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಕೂಟದಲ್ಲಿ ಅಜೇಯವಾಗಿ ಉಳಿದಿದ್ದ ಭಾರತ, ರೌಂಡ್ ರಾಬಿನ್ ಲೀಗ್‌ನಲ್ಲಿ 13 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಲೀಗ್ ಹಂತದಲ್ಲಿ ಭಾರತ 3-1 ಗೋಲುಗಳಿಂದ ಪಾಕಿಸ್ಥಾನಕ್ಕೆ ಸೋಲುಣಿಸಿತ್ತು. ಟ್ರೋಫಿಗಾಗಿ ಟಾಸ್
ಟ್ರೋಫಿಯನ್ನು ಯಾರು ಇರಿಸಿ ಕೊಳ್ಳಬೇಕೆಂಬ ವಿಷಯ ಚರ್ಚೆಗೆ ಬಂದಾಗ ಟಾಸ್ ಹಾರಿಸಲು ನಿರ್ಧರಿಸಲಾಯಿತು. ಟಾಸ್ ಗೆದ್ದ ಭಾರತ ಮುಂದಿನ ಒಂದು ವರ್ಷ ಕಾಲ ಟ್ರೋಫಿಯನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ. ಅನಂತರ ಇದು ಪಾಕಿಸ್ಥಾನದ ಪಾಲಾಗಲಿದೆ.
Related Articles
Advertisement