ಹೊಸದಿಲ್ಲಿ: ಚೀನದ ಹಾಂಗ್‌ಜೂನಲ್ಲಿ ನಡೆಯಲಿರುವ ಈ ವರ್ಷದ ಏಷ್ಯಾಡ್ ಪಂದ್ಯಾವಳಿಗಾಗಿ ಭಾರತ ತನ್ನೆರಡೂ ತಂಡಗಳನ್ನು ಕಳುಹಿಸಲಿದೆ. ಪುರುಷರ ತಂಡವನ್ನು ರುತುರಾಜ್ ಗಾಯಕ್ವಾಡ್, ವನಿತಾ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ಪುರುಷರ ತಂಡದಲ್ಲಿ ಎಳೆಯರೇ ತುಂಬಿಕೊಂಡಿದ್ದು, ಐಪಿಎಲ್ ಹೀರೋಗಳೆಲ್ಲ ಸ್ಥಾನ ಪಡೆದಿದ್ದಾರೆ. ರಿಂಕು ಸಿಂಗ್, ಜಿತೇಶ್ ಶರ್ಮ, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಪ್ರಮುಖರು. ರುತುರಾಜ್ ಗಾಯಕ್ವಾಡ್ ಆವರಿಗೆ ನಾಯಕತ್ವ ವಹಿಸಲಾಗಿದೆ.
ಪಂದ್ಯಾವಳಿ ಟಿ20 ಮಾದರಿಯಲ್ಲಿ ನಡೆಯಲಿದ್ದು, ವೇಳಾಪಟ್ಟಿ ಮುಂದೆ ಪ್ರಕಟಗೊಳ್ಳಲಿದೆ.
ಪುರುಷರ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿ.ಕೀ.), ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿ.ಕೀ.).
ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.
ವನಿತಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ರಿಚಾ ಘೋಷ್ (ವಿ.ಕೀ.), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ತಿತಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿ.ಕೀ.), ಅನುಷಾ ಬಾರೆಡ್ಡಿ.
ಮೀಸಲು ಆಟಗಾರರು: ಹರ್ಲೀನ್ ದೇವಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಖ್, ಪೂಜಾ ವಸ್ತ್ರಾಕರ್.