Advertisement
ಭಾರತ ಹಾಗೂ ಪಾಕಿಸ್ಥಾನ ನಡುವಿನ ರಾಜಕೀಯ ಬಿಕ್ಕಟ್ಟು ಈ ನಿರ್ಧಾರಕ್ಕೆ ಕಾರಣ. ಬಿಸಿಸಿಐ ಭದ್ರತಾ ಕಾರಣಗಳಿಗಾಗಿ ಭಾರತದ ಆಟಗಾರರನ್ನು ಪಾಕಿಸ್ಥಾನಕ್ಕೆ ಕಳುಹಿಸಲು ನಿರಾಕರಿಸಿದೆ. ಹೀಗಾಗಿ ಭಾರತದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಒಟ್ಟು 8 ತಂಡಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದು, 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪಾಕಿಸ್ಥಾನ, ಬಾಂಗ್ಲಾದೇಶ, ಯುಎಇ, ಹಾಂಕಾಂಗ್ ತಂಡಗಳು “ಎ’ ಗುಂಪಿನಲ್ಲಿವೆ. ಈ ಗುಂಪಿನ ಪಂದ್ಯಗಳು ಕರಾಚಿಯಲ್ಲಿ ನಡೆಯಲಿವೆ. ಭಾರತ, ಶ್ರೀಲಂಕಾ, ಅಫ್ಘಾನಿಸ್ಥಾನ, ಒಮಾನ್ ತಂಡಗಳು “ಬಿ’ ಗುಂಪಿನಲ್ಲಿವೆ. ಇಲ್ಲಿನ ಪಂದ್ಯಗಳು ಹಾಗೂ ಫೈನಲ್ ಪಂದ್ಯದ ಆತಿಥ್ಯ ಕೊಲೊಂಬೊ ಪಾಲಾಗಿದೆ. ಡಿ. 4ರಿಂದ 10ರ ವರೆಗೆ ಕರಾಚಿಯಲ್ಲಿ, ಡಿ. 6ರಿಂದ 15ರ ವರಗೆ ಕೊಲೊಂಬೊದಲ್ಲಿ ಪಂದ್ಯಗಳು ನಡೆಯುತ್ತವೆ. ಭದ್ರತಾ ಕಾರಣಗಳಿಂದ ಪಾಕಿಸ್ಥಾನ ಈ ಕೂಟದ ಅತಿಥ್ಯ ವಹಿಸುವುದನ್ನು ಭಾರತ ಹಾಗೂ ಬಾಂಗ್ಲಾದೇಶ ಒಪ್ಪಿರಲಿಲ್ಲ. 2017ರ ಏಶ್ಯನ್ ಕ್ರಿಕೆಟ್ ಮಂಡಳಿ ಸಭೆಯಲ್ಲಿ ಭಾರತ ಹಾಗೂ ಬಾಂಗ್ಲದೇಶ ಭಾಗವಹಿಸದ ಕಾರಣ 2018ರ ಆವೃತ್ತಿಯ ಆತಿಥ್ಯ ಪಾಕಿಸ್ಥಾನದ ಪಾಲಾಯಿತು.