Advertisement

Asia Cup 2023; ಕೊಲಂಬೊದಲ್ಲಿ ಇಂದೂ ಮಳೆ ಸಾಧ್ಯತೆ; ಪಂದ್ಯ ರದ್ದಾದರೆ ಯಾರಿಗೆ ಲಾಭ

11:31 AM Sep 11, 2023 | Team Udayavani |

ಕೊಲಂಬೊ: ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಸುತ್ತಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮಳೆಯ ಕಾರಣಕ್ಕೆ ಸೋಮವಾರಕ್ಕೆ ಮುಂದೂಡಲಾಗಿದೆ. ರವಿವಾರ ಪಂದ್ಯ ನಡೆಯುತ್ತಿದ್ದ ವೇಳೆ ಆರಂಭವಾದ ಪಂದ್ಯ ನಿಲ್ಲದ ಕಾರಣ ಹೆಚ್ಚುವರಿ ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ.

Advertisement

ಆದರೆ, ಸೋಮವಾರವೂ ಉಭಯ ತಂಡಗಳು ಬಯಸಿದಂತೆ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿನ ಹವಾಮಾನವು ಕ್ರಿಕೆಟ್‌ಗೆ ಅನುಕೂಲಕರವಾಗಿಲ್ಲ. ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಶೇ.90ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರವಿವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನವು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅರ್ಧಶತಕ ಪೂರೈಸಿ ಉತ್ತಮ ಆರಂಭ ಒದಗಿಸಿದರು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಭಾರತವನ್ನು ಬಲವಾದ ಮೊತ್ತಕ್ಕೆ ಕೊಂಡೊಯ್ಯುವ ಭರವಸೆಯಲ್ಲಿದ್ದ ವೇಳೆ ಮಳೆ ಆರಂಭವಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು. ಭಾರತ 24.1 ಓವರ್ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.

ಇದನ್ನೂ ಓದಿ:Menstrual cup: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಸೂಪರ್ 4 ರ ಸ್ವರೂಪದಂತೆ, ಎಲ್ಲಾ ನಾಲ್ಕು ತಂಡಗಳು ಒಮ್ಮೆ ಎದುರಾಗುತ್ತದೆ ಪ್ರಸ್ತುತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ 2 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಉತ್ತಮ ನೆಟ್ ರನ್ ರೇಟ್‌ನಿಂದಾಗಿ ಬಾಬರ್ ಅಜಂ ತಂಡವು (+1.051) ಲಂಕಾಗಿಂತ (+0.420) ಮುಂದಿದೆ.

Advertisement

ಆದರೆ ಭಾರತವು ಇನ್ನೂ ತಮ್ಮ ಖಾತೆಯನ್ನು ತೆರೆದಿಲ್ಲ, ಪಾಕಿಸ್ತಾನ ವಿರುದ್ಧದ ಪಂದ್ಯವು ಸೂಪರ್ 4 ನಲ್ಲಿ ಭಾರತದ ಮೊದಲ ಪಂದ್ಯವಾಗಿದೆ. ಬಾಂಗ್ಲಾದೇಶ -0.749 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಅವರು ಈಗಾಗಲೇ ಫೈನಲ್‌ ನ ರೇಸ್‌ ನಿಂದ ಹೊರಗುಳಿದಿದ್ದಾರೆ.

ಒಂದು ವೇಳೆ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಮಳೆಯ ಕಾರಣದಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಪಾಕಿಸ್ತಾನ ಒಟ್ಟು ಅಂಕ ಮೂರು ಆಗಲಿದೆ. ಲಂಕಾ ಎರಡು ಅಂಕ ಹೊಂದಿರುವ ಕಾರಣ ಭಾರತ ಮೂರನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ.

ಮಂಗಳವಾರ ಭಾರತ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಕೊನೆಯ ಪಂದ್ಯ ಬಾಂಗ್ಲಾ ವಿರುದ್ಧ ಆಡಲಿದೆ. ಈ ಎಲ್ಲಾ ಪಂದ್ಯಗಳು ಕೊಲಂಬೊದಲ್ಲಿಯೇ ನಡೆಯಲಿರುವ ಕಾರಣ ಮಳೆ ಎಷ್ಟರ ಮಟ್ಟಿಗೆ ಕಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next